ಸಂತಾಕ್ಲಾಸ್ ಬಳಿ ಮಗನಿಗಾಗಿ ಮೇಘನಾ ಕೇಳಿದರು ಎಲ್ಲೂ ಸಿಗದ ಗಿಫ್ಟ್!

ನಟಿ ಮೇಘನಾ ರಾಜ್‌ ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದ ಮುದ್ದಾದ ಜೋಡಿ. ಆದರೆ ಈ ಜೋಡಿ ಹೆಚ್ಚು ಕಾಲ ಒಟ್ಟಿಗೆ ಬಾಳಿ ಬದುಕಲು ಆ ವಿಧಿ ಬಿಡಲಿಲ್ಲ. ಅರ್ಧದಲ್ಲೇ ಮೇಘನಾಳನ್ನು ಒಂಟಿ ಮಾಡಿ ಚಿರುವನ್ನು ಕರೆದುಕೊಂಡು ಬಿಟ್ಟಿದೆ. ಆದರೆ ಈಗ ಚಿರು ಮಗನ ರೂಪದಲ್ಲಿ ಮೇಘನಾ ಮಡಿಲು ಸೇರಿದ್ದಾನೆ.

ಮೇಘನಾ ರಾಜ್ ಸರ್ಜಾ ಮತ್ತು ಕುಟುಂಬ ರಾಯನ್‌ ನಗುವಿನಲ್ಲಿ ತಮ್ಮ ನೋವುಗಳನ್ನು ಮರೆಯುತ್ತಾ ಜೀವನ ಸಾಗಿಸುತ್ತಿದ್ದಾರೆ. ರಾಯನ್‌ಗಾಗಿ ಮೇಘನಾ ತಮ್ಮ ಬದುಕನ್ನು ಮುಡಿಪಾಗಿ ಇಟ್ಟಿದ್ದಾರೆ. ಇನ್ನು ರಾಯನ್‌ ಕೂಡ ಅಪ್ಪನಂತೆ ಜನರ ಮನಸ್ಸು ಗೆದ್ದಿದ್ದಾನೆ.

ಈಗ ಮೇಘನಾ, ಚಿರು ಮತ್ತು ರಾಯನ್‌ ಬಗ್ಗೆ ಮಾತನಾಡಲು ಕಾರಣ ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಮಾತು.

ಮಗನಿಗಾಗಿ ಸಂತಾ ಕ್ಲಾಸ್ ಬಳಿ ಏನು ಕೇಳಿತ್ತೀರಿ ಎನ್ನುವ ಪ್ರಶ್ನೆಗೆ ಮೇಘನಾ ಉತ್ತರ!

ಮಗನಿಗಾಗಿ ಸಂತಾ ಕ್ಲಾಸ್ ಬಳಿ ಏನು ಕೇಳಿತ್ತೀರಿ ಎನ್ನುವ ಪ್ರಶ್ನೆಗೆ ಮೇಘನಾ ಉತ್ತರ!

ನಟಿ ಮೇಘನಾ ರಾಜ್‌ ದೇವರ ಬಳಿ ಮಗ ರಾಯನ್‌ಗಾಗಿ ಪತಿ ಚಿರುವನ್ನು ಕೇಳಿದ್ದಾರೆ. ಈ ಸಂದರ್ಭ ಎದುರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ. ಮೇಘನಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಶ್ನಾವಳಿಯಲ್ಲಿ ಹಮ್ಮಿಕೊಂಡಿದ್ದರು. ಅಂದರೆ ನಿಗದಿತ ಸಮಯದಲ್ಲಿ ತಮಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವುದು. ಹೀಗೆ ಮೇಘನಾಗೆ ಹಲವು ಪ್ರಶ್ನೆಗಳು ಎದುರಾಗಿವೆ. ಹಾಗೆ ಮಗನಿಗಾಗಿ ಸಂತಾ ಕ್ಲಾಸ್ ಬಳಿ ಏನು ಗಿಫ್ಟ್ ಕೇಳುತ್ತೀರಿ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ.

ಸಂತಾ ಕ್ಲಾಸ್ ಬಳಿ ಚಿರುವನ್ನು ವಾಪಾಸ್‌ ಕೇಳಿದ ಮೇಘನಾ!

ಸಂತಾ ಕ್ಲಾಸ್ ಬಳಿ ಚಿರುವನ್ನು ವಾಪಾಸ್‌ ಕೇಳಿದ ಮೇಘನಾ!

ಈ ಪ್ರಶ್ನೆಗೆ ಮೇಘನಾ ಒಂದು ಫೋಟೊ ಹಂಚಿಕೊಳ್ಳುವ ಮೂಲಕ ಉತ್ತರಿಸಿದ್ದಾರೆ. ಈ ಫೋಟೊದಲ್ಲಿ ಒಂದು ಕಡೆ ಚಿರಂಜೀವಿ ಸರ್ಜಾ ಮತ್ತೊಂದು ಕಡೆ ರಾಯನ್‌ ರಾಜ್‌ ಇದ್ದಾನೆ. ಅಂದರೆ ಮಗನಿಗಾಗಿ ಅಪ್ಪನನ್ನು ಗಿಫ್ಟ್‌ ಆಗಿ ಕೇಳುತ್ತೇನೆ ಎಂದು ಫೊಟೋ ಹಂಚಿಕೊಳ್ಳುವ ಮೂಲಕ ಮೇಘನಾ ಉತ್ತರಿಸಿದ್ದಾರೆ.

ಮಗನೊಂದಿಗೆ ಸವಿ ಸಮಾಚಾರ ಹಂಚಿಕೊಳ್ಳುವ ಮೇಘನಾ ರಾಜ್!

ಮಗನೊಂದಿಗೆ ಸವಿ ಸಮಾಚಾರ ಹಂಚಿಕೊಳ್ಳುವ ಮೇಘನಾ ರಾಜ್!

ಮೇಘನಾ ರಾಜ್‌ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆಗೆ ಕನೆಕ್ಟ್‌ ಆಗಿರುತ್ತಾರೆ. ಸದಾ ರಾಯನ್‌ ಫೋಟೊ ಮತ್ತು ತುಂಟಾಟದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಮೂಲಕ ರಾಯನ್‌ ಕೂಡ ಜನರಿಗೆ ಸಾಕಷ್ಟು ಇಷ್ಟ ಆಗಿದ್ದಾನೆ. ಅದಾಗಲೆ ರಾಯನ್‌ಗೂ ಅಭಿಮಾನಿ ಬಳಗ ಹುಟ್ಟಿಕೊಂಡಿದೆ.

ಸಿನಿಮಾಗಳಲ್ಲಿ ಸಕ್ರಿಯ ಆದ ನಟಿ ಮೇಘನಾ ರಾಜ್!

ಸಿನಿಮಾಗಳಲ್ಲಿ ಸಕ್ರಿಯ ಆದ ನಟಿ ಮೇಘನಾ ರಾಜ್!

ನಟಿ ಮೇಘನಾ ರಾಜ್‌ ಸದ್ಯ ಸಿನಿಮಾಗಳಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ಒಂದೆರಡು ಚಿತ್ರಗಳನ್ನೂ ಕೂಡ ಮೇಘನಾ ಒಪ್ಪಿಕೊಂಡಿದ್ದಾರೆ. ಇನ್ನೂ ಮೇಘನಾ ಇತ್ತೀಚೆಗೆ ಹೊಸ ಚಿತ್ರದ ಲುಕ್‌ ಕೂಡ ಬಿಡುಗಡೆ ಆಗಿತ್ತು. ಮೇಘನಾ ಮಹಾರಾಣಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

More from Filmibeat

English summary
Actress Meghana Raj Sarja Ask Back Her Late Husbend Chiranjeevi sarja As Christmas Gift From Santa Claus For Her Son Rayan Raj,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X