For Quick Alerts
  ALLOW NOTIFICATIONS  
  For Daily Alerts

  ಜೂ. ಚಿರು ಜನಿಸಿ 9 ತಿಂಗಳ ಬಳಿಕ ಸಂತಸದ ಸುದ್ದಿ ಹಂಚಿಕೊಂಡ ನಟಿ ಮೇಘನಾ ರಾಜ್

  |

  ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಸರ್ಜಾ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದರು. ಬಳಿಕ ಜೂ. ಚಿರು ಮೇಘನಾ ಬಾಳಿಗೆ ಸಂತೋಷವನ್ನು ಹೊತ್ತುತಂದಿದ್ದಾನೆ. ಮಗನ ಆಗಮನ ಮೇಘನಾ ಬದುಕಲ್ಲಿ ಹೊಸ ಬೆಳಕು ಮೂಡಿಸಿದೆ. ಸದ್ಯ ಜೂ. ಚಿರು ಜನಿಸಿ 9 ತಿಂಗಳು ತುಂಬಿದೆ. ಇದೇ ಖುಷಿಯಲ್ಲಿ ಮೇಘನಾ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

  ಮೇಘನಾ ಮತ್ತೆ ಚಿತ್ರೀಕರಣ ಮರಳಿದ್ದಾರೆ. ಸುಮಾರು ಒಂದೂವರೆ ವರ್ಷದ ಬಳಿಕ ಮೇಘನಾ ನಟನೆಯತ್ತ ಮುಖ ಮಾಡಿದ್ದಾರೆ. ಮದುವೆ ಬಳಿಕ ಸಂಸಾರದ ಕಡೆ ಗಮನಕೊಟ್ಟಿದ್ದ ಮೇಘನಾ ನಂತರ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಮಗನಿಗೆ 9 ತಿಂಗಳು ತುಂಬಿದೆ. ಈ ಸಂಭ್ರದಲ್ಲಿ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.

  ಚಿರಂಜೀವಿ ಸರ್ಜಾ ಇಲ್ಲದ ಒಂದು ವರ್ಷ: ಪತಿಯ ನೆನಪಿನಲ್ಲಿ ಮೇಘನಾ ರಾಜ್ಚಿರಂಜೀವಿ ಸರ್ಜಾ ಇಲ್ಲದ ಒಂದು ವರ್ಷ: ಪತಿಯ ನೆನಪಿನಲ್ಲಿ ಮೇಘನಾ ರಾಜ್

  ಮೇಘನಾ ಮತ್ತೆ ಚಿತ್ರಾಕರಣಕ್ಕೆ ಮರಳಿರುವುದು ಅಭಿಮಾನಿಗಳಿಗೆ, ಸ್ನೇಹಿತರಿಗೆ ಸಂತಸದ ತಂದಿದೆ. ಅನೇಕರು ಸ್ವಾಗತ ಮಾಡಿದ್ದಾರೆ. ಚಿತ್ರೀಕರಣಕ್ಕೆ ಮರಳಿರುವ ಸುದ್ದಿಯನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಮರಾ ಮುಂದೆ ನಿಂತಿರುವ ಫೋಟೋ ಶೇರ್ ಮಾಡುವ ಜೊತೆಗೆ, "ಜೂ. ಚಿರುಗೆ ಒಂಬತು ತಿಂಗಳು ತುಂಬಿದೆ. ನಾನು ವರ್ಷದ ನಂತರ ಚಿತ್ರೀಕರಣಕ್ಕೆ ಹಾಜರಾಗುವ ಮೂಲಕ ಸಂಭ್ರಮಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

  ಚಿತ್ರೀಕರಣ ಸೆಟ್‌ನಲ್ಲಿ ಮೇಘನಾ ರಾಜ್ ಸ್ಕ್ರಿಪ್ಟ್ ಕೈಯಲ್ಲಿ ಹಿಡಿದು ಡೈಲಾಗ್ ಓದುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಮಲಯಾಳಂ ನಟಿ ನಜ್ರಿಯಾ ಹಾರ್ಟ್ ಇಮೋಜಿ ಹಾಕಿ ನನ್ನ ಸಹೋದರಿ ಎಂದಿದ್ದಾರೆ. ಇನ್ನು ನಿರ್ದೇಶಕ ಸಿಂಪಲ್ ಸುನಿ, ಸಂಯುಕ್ತ ಹೊರನಾಡ್ ಸೇರಿದಂತೆ ಅನೇಕರು ಸ್ವಾಗತ ಕೋರಿದ್ದಾರೆ.

  Meghana Raj Back to Shoot after Jr Chiru Turns 9 Month Old
  ದುನಿಯಾ ಸಿನಿಮಾದ ಕಥೆಯಂತೆ ನಿಜಜೀವನದಲ್ಲಿಯೂ ಆಯ್ತು

  ಅಂದಹಾಗೆ ಮೇಘನಾ ರಾಜ್ ಯಾವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಸುಳಿವು ನೀಡಿಲ್ಲ. ಇದು ಸಿನಿಮಾ ಚಿತ್ರೀಕರಣ ಅಥವಾ ಜಾಹೀರಾತು ಇರಬಹುದಾ ಎನ್ನುವ ಬಗ್ಗೆ ಬಹಿರಂಗ ಪಡಿಸಿಲ್ಲ. ಆದರೆ ಸದ್ಯದಲ್ಲೇ ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.

  English summary
  Actress Meghana Raj Back to Shoot after Jr Chiru Turns 9 Month Old.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X