ಪ್ರೀತಿಯ ಪತಿ ಚಿರುಗೆ ಭಾವುಕ ಶುಭಾಶಯ ಕೋರಿದ ಮೇಘನಾ ರಾಜ್

ಇಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಅವರು ಇಲ್ಲವಾದ ನಂತರ ಮೊದಲನೇ ಹುಟ್ಟುಹಬ್ಬವಿದು. ಹೊಸ ಹುಟ್ಟಿನ ನಿರೀಕ್ಷೆಯಲ್ಲಿರುವ ಗರ್ಭಿಣಿ ಮೇಘನಾ ರಾಜ್ ಇಂದು ಪ್ರೀತಿಯ ಪತಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.

ಇನ್‌ಸ್ಟಾಗ್ರಾಂ ನಲ್ಲಿ ಚುಟುಕಾಗಿ ಆದರೆ ಭಾವುಕವಾಗಿ ಚಿರಂಜೀವಿ ಸರ್ಜಾ ಗೆ ಶುಭಾಶಯ ಹೇಳಿರುವ ಮೇಘನಾ ರಾಜ್, 'ನನ್ನ ಜಗತ್ತಿಗೆ ಹುಟ್ಟುಹಬ್ಬದ ಶುಭಾಶಯ, ಸದಾ ನಿನ್ನನ್ನು ಪ್ರೀತಿಸುವೆ' ಎಂದಿದ್ದಾರೆ ಮೇಘನಾ ರಾಜ್.

ಚಿರಂಜೀವಿ ಸರ್ಜಾ ಜೂನ್ 07 ರಂದು ಹಠಾತ್ತನೆ ಮರಣಕ್ಕೀಡಾದರು. ಅವರ ಅಗಲಿಕೆ ಮೇಘನಾ ರಾಜ್ ಅವರಿಗೆ ಹಾಗೂ ಚಿರು ಕುಟುಂಬದವರಿಗೆ ಭರಸಿಡಿಲಿನಂತೆ ಅಪ್ಪಳಿಸಿತು.

Meghana Raj Birthday Wishes To Chiranjeevi Sarja

ಚಿರಂಜೀವಿ ಸರ್ಜಾ ಇಲ್ಲದ ಮೊದಲ ಹುಟ್ಟುಹಬ್ಬ ಇದು. ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾ ಶಿವಾರ್ಜುನ ಮತ್ತೊಮ್ಮೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದು, ಇಂದು ಸಂತೋಶ್ ಚಿತ್ರಮಂದಿರದ ಎದುರು ಚಿರಂಜೀವಿ ಸರ್ಜಾ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ.

Recommended Video

ಅಂಬರೀಷ್ ಮನೆ ಪಕ್ಕ ಫ್ಲಾಟ್ ತಗೋಬೇಕು ಅಂತ ತುಂಬಾ ಆಸೆ ಪಟ್ಟಿದ್ದ ಚಿರು : PrashanthSambargi | Chiranjeevi Sarja

ಮಗುವಿನ ನಿರೀಕ್ಷೆಯಲ್ಲಿರುವ ಮೇಘನಾ ರಾಜ್‌ ಗೆ ಕೆಲವು ದಿನಗಳ ಮುಂಚೆಯಷ್ಟೆ ಕುಟುಂಬ ಸದಸ್ಯರು ಸೀಮಂತ ಕಾರ್ಯ ಮಾಡಿದರು. ಸೀಮಂತ ಕಾರ್ಯದ ಚಿತ್ರಗಳು, ವಿಡಿಯೋ ಸಖತ್ ವೈರಲ್ ಆಗಿವೆ.

More from Filmibeat

English summary
Late Chiranjeevi Sarja's birthday today. His wife Meghana Raj wished him happy birthday through social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X