ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ ರಾಜ್

ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು (ಅ.22) ಬೆಳಗ್ಗೆ ಕೆ ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಯಲ್ಲಿ ಮೇಘನಾ ರಾಜ್ ಗೆ ಗಂಡು ಮಗು ಜನಿಸಿದೆ.

Recommended Video

ಮೇಘನಾ ಮಡಿಲು ಸೇರಿದ ಜೂನಿಯರ್ ಚಿರು | Meghana Raj blessed with baby boy | Filmibeat Kannada

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತೋಷ ವ್ಯಕ್ತಪಡಿಸಿ ಅಭಿನಂದನೆ ತಿಳಿಸುತ್ತಿದ್ದಾರೆ.

ಈ ಒಂದು ದಿನಕ್ಕಾಗಿ ಮೇಘನಾ ಮತ್ತು ಸರ್ಜಾ ಕುಟುಂಬ ಕಾಯುತ್ತಿತ್ತು. ಕೊನೆಗೂ ಸರ್ಜಾ ಕುಟುಂಬಕ್ಕೆ ಈ ಸಂತಸದ ದಿನ ಬಂದಿದೆ. ಮರಿ ಚಿರು ಆಗಮಿಸುತ್ತಾನೆ ಎಂದು ಕುಟುಂಬದವರು ಸದಾ ಹೇಳುತ್ತಿದ್ದರು. ಅದರಂತೆ ಸರ್ಜಾ ಕುಟುಂಬಕ್ಕೆ ಮರಿ ಚಿರು ಆಗಮಿಸಿದ್ದಾನೆ.

Meghana Raj Gives Birth to Baby Boy

ಚಿರು ಕಳೆದುಕೊಂಡು ದುಃಖದಲ್ಲಿದ್ದ ಮೇಘನಾ ಮತ್ತು ಕುಟಂಬದವರಿಗೆ ಈ ಮುದ್ದಾದ ಮಗು ಸಂತೋಷವನ್ನು ಹೊತ್ತು ಬಂದಿದೆ. ಇನ್ಮುಂದೆಯಾದರೂ ಸರ್ಜಾ ಕುಟುಂಬದಲ್ಲಿ ನಲಿವು ತುಂಬಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಬುಧವಾರ ಸಂಜೆ ಮೇಘನಾ ರಾಜ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇಘನಾ ಜೊತೆ ತಂದೆ-ತಾಯಿ ಮತ್ತು ಸರ್ಜಾ ಕುಟುಂಬದವರು ಆಸ್ಪತ್ರೆಗೆ ದಾವಿಸಿದ್ದರು. ಮೇಘನಾ ಮತ್ತು ಸರ್ಜಾ ಕುಟುಂಬ ಆಸ್ಪತ್ರೆಯಲ್ಲಿದೆ.

More from Filmibeat

English summary
Late actor Chiranjeevi Sarja wife Meghana Raj gave birth to baby girl/boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X