ಮೇಘನಾ ರಾಜ್ ಹಳೆ ಪೋಸ್ಟ್: ಛೇ ಎಂಥಾ ಕ್ರೂರ ಕಾಕತಾಳೀಯ
ಚಿರಂಜೀವಿ ಸರ್ಜಾ ಸಾವಿನ ನೆನಪು ಇನ್ನೂ ಕಾಡುತ್ತಲೇ ಇದೆ. ಚಿರು ಸರ್ಜಾ ಅಂತ್ಯಕ್ರಿಯೆಯ ದೃಶ್ಯಗಳನ್ನು ಮಾಧ್ಯಮಗಳ ಕೃಪೆಯಿಂದ ರಾಜ್ಯವೆಲ್ಲಾ ನೋಡಿದೆ. ಮೇಘನಾ ರಾಜ್ ಅನುಭವಿಸಿದ ನೋವಿಗೆ ರಾಜ್ಯದ ಜನ ಸಾಕ್ಷಿಯಾಗಿದ್ದಾರೆ.
Recommended Video
ಎರಡು ವರ್ಷದ ಹಿಂದಷ್ಟೆ ಚಿರು ಸರ್ಜಾ ಮತ್ತು ಮೇಘನಾ ರಾಜ್ ಇಷ್ಟಪಟ್ಟು ಮದುವೆಯಾಗಿದ್ದರು. ಚಿರು ಸರ್ಜಾ ಅಪ್ಪನಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಅಷ್ಟರಲ್ಲಾಗಲೇ ಚಿರು ಎಲ್ಲರನ್ನೂ ಅಗಲಿದ್ದಾರೆ.
ಕೆಲವೊಂದು ಘಟನೆಗಳು ಸನ್ನಿವೇಶಗಳಲ್ಲಿ ಕಾಕತಾಳೀಯತೆ ಅದೆಷ್ಟು ತುಂಬಿರುತ್ತದೆಯೆಂದರೆ ಅದು ಎದುರುಗೊಂಡಾಗ ಹೃದಯವನ್ನು ಚಿವುಟಿದ ಅನುಭವವಾಗುತ್ತದೆ. ಅಂಥಹುದೇ ಕಾಕತಾಳೀಯವೊಂದು ಮೇಘನಾ ರಾಜ್ ಅವರ ವಿಷಯದಲ್ಲೂ ನಡೆದಿದೆ.

ಒಂದು ವರ್ಷದ ಹಿಂದಿನ ಮೇಘನಾ ಪೋಸ್ಟ್
ಚಿರಂಜೀವಿ ಸರ್ಜಾ ಜೂನ್ 7 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದರು. ಅದೇ ದಿನಕ್ಕೆ ಸರಿಯಾಗಿ ಒಂದು ವರ್ಷದ ಹಿಂದೆ ಚಿರು ಸರ್ಜಾ ಪತ್ನಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಒಂದರ ಪೋಸ್ಟರ್ ಹಂಚಿಕೊಂಡಿದ್ದರು. ಸಿನಿಮಾದ ಹೆಸರು 'ಒಂಟಿ' ಎಂದು!

'ಒಂಟಿ' ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದರು
ಎಂಥಹಾ ಕಾಕತಾಳೀಯ ಅಲ್ಲವೆ? 'ಒಂಟಿ' ಸಿನಿಮಾದ ಪೋಸ್ಟರ್ ಹಾಕಿದ ಸರಿಯಾಗಿ ಒಂದು ವರ್ಷದ ನಂತರ ಅವರು ಒಂದರ್ಥದಲ್ಲಿ ಒಂಟಿಯಾಗಿ ಬಿಟ್ಟರು ಮೇಘನಾ ರಾಜ್. ಇದನ್ನು ಕ್ರೂರ ಕಾಕತಾಳೀಯ ಎನ್ನದಿರಲು ಸಾಧ್ಯವೆ?

'ಇರುವುದೆಲ್ಲವ ಬಿಟ್ಟು' ಸಿನಿಮಾದಲ್ಲಿ ನಟಿಸಿದ್ದರು
ಮೇಘನಾ ರಾಜ್ ಅವರು 'ಇರುವುದೆಲ್ಲವ ಬಿಟ್ಟು' ಸಿನಿಮಾದ ಪೋಸ್ಟರ್ ಅನ್ನು ಸಹ ಕಳೆದ ವರ್ಷ ಮಾರ್ಚ್ ಸಂದರ್ಭದಲ್ಲಿ ಹಂಚಿಕೊಂಡಿದ್ದರು. ಈ ಸಿನಿಮಾಗಳ ಬಗ್ಗೆ 'ಇರುವುದೆಲ್ಲವ ಬಿಟ್ಟು ಒಂಟಿಯಾದ ಮೇಘನಾ' ಎಂಬ ತಲೆಬರಹದಡಿ ಸಿನಿಮಾ ಸುದ್ದಿ ಪ್ರಕಟವಾಗಿತ್ತು. ಮತ್ತೊಂದು ಹೆಡ್‌ಲೈನ್ 'ಮದುವೆಯಾದರೂ ಒಂಟಿಯಾದ ಮೇಘನಾ!' ಆಗ ಈ ಹೆಡ್‌ಲೈನ್‌ಗಳು ಕ್ರಿಯೇಟಿವ್ ಎನಿಸಿದ್ದವು, ಆದರೆ ಈಗ ವ್ಯಥೆ ಮೂಡಿಸುತ್ತವೆ. ವರ್ಷದಲ್ಲಿ ಎಷ್ಟೋಂದು ಬದಲಾವಣೆ!

ಕವಿರಾಜ್ ಹಂಚಿಕೊಂಡ ಕಾಕತಾಳೀಯ
ಮತ್ತೊಂದು ಕಾಕತಾಳೀಯ ಘಟನೆಯನ್ನು ಚಿತ್ರಸಾಹಿತಿ ಕವಿರಾಜ್ ಹಂಚಿಕೊಂಡಿದ್ದರು. ಚಿರು ಸರ್ಜಾ ನಿಧನವಾದ ದಿನವೇ ಟಿವಿಯಲ್ಲಿ ಮೇಘನಾ ರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಸಿನಿಮಾ ಪ್ರದರ್ಶನವಾಗುತ್ತಿತ್ತು. ಸಿನಿಮಾದಲ್ಲಿ ಗರ್ಭಿಣಿ ಮೇಘನಾ ರಾಜ್ ಹಾಸ್ಪತ್ರೆಯೊಂದರಿಂದ ಅಳುತ್ತಾ ಹೊರಬರುವ ದೃಶ್ಯವೊಂದಿದೆ ಅದನ್ನು ಕಂಡು ನಾನು ಲೈವ್ ನೋಡುತ್ತಿದ್ದೇನೆಯೇ ಎಂದು ಗಾಬರಿಗೊಂಡರಂತೆ ಕವಿರಾಜ್.


Click it and Unblock the Notifications











