'ನಾನು ನಗಲು ಚಿರು ಕಾರಣ...': ಮೇಘನಾ ರಾಜ್ ಬರೆದ ಹೃದಯಸ್ಪರ್ಶಿ ಬರಹ
ಚಿರಂಜೀವಿ ಸರ್ಜಾ ಕಣ್ಮರೆಯಾಗಿ ಒಂದು ತಿಂಗಳು ತುಂಬಿದೆ. ಈ ಸಂದರ್ಭದಲ್ಲಿ ಅವರ ಕುಟುಂಬದವರು, ಆತ್ಮೀಯರು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಫೋಟೊಗಳನ್ನು ಹಾಕಿ ಚಿರುವಿಗೆ ಆಶ್ರುತರ್ಪಣದ ನಮನ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರ ಬರಹಗಳಲ್ಲಿಯೂ ಅವರು ಚಿರಂಜೀವಿ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ, ಆ ಸಾವು ಎಂತಹ ಆಘಾತ ಮೂಡಿಸಿದೆ ಎಂಬುದನ್ನು ಮನದಟ್ಟು ಮಾಡಿಸುವ ನೋವು ಕಾಣಿಸುತ್ತದೆ.
Recommended Video
ಆದರೆ, ಚಿರು ಅವರ ಕುಟುಂಬದವರು ಮತ್ತು ಗೆಳೆಯರು ಭಾವುಕ ಪದಗಳ ನಡುವೆಯೂ ನಗು ಮೂಡಿಸಿದ್ದಾರೆ. ಚಿರಂಜೀವಿ ಅವರ ನಗುವನ್ನು, ಅವರು ಹೇಳುತ್ತಿದ್ದ ಮಾತುಗಳನ್ನು ಶಾಶ್ವತವಾಗಿರಿಸುವ ಪ್ರಯತ್ನ ಮಾಡಿದ್ದಾರೆ. ಚಿರಂಜೀವಿ ಅಗಲುವಿಕೆಯಲ್ಲಿ ನೋವಿನ ಬದಲು ನಗು ಹಂಚುತ್ತಿದ್ದಾರೆ. ಯಾವಾಗಲೂ ನಗುತ್ತಿರಬೇಕು ಎನ್ನುತ್ತಾ ಅದನ್ನು ಪಾಲಿಸುತ್ತಿದ್ದ ಚಿರಂಜೀವಿಗೆ ತಾವು ನೀಡುವ ಸೂಕ್ತ ಗೌರವ ಅದು ಎನ್ನುವುದು ಅವರ ಅಭಿಪ್ರಾಯ.
ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಕೂಡ ಆ ನೋವಿನಲ್ಲಿಯೂ ನಗು ಚೆಲ್ಲಿದ್ದಾರೆ. ಅದರ ಜತೆ ಭಾವನಾತ್ಮಕ ಮತ್ತು ಆಪ್ತವಾದ ಬರಹವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ನಾನು ನಗಲು ಚಿರು ಕಾರಣ
ನನ್ನ ಪ್ರೀತಿಯ ಚಿರು... ಚಿರು ಒಂದು ಸಂಭ್ರಮ. ಯಾವಾಗಲೂ... ಈಗಲೂ ಮತ್ತು ಮುಂದೆಯೂ... ಬೇರೆ ಯಾವ ರೀತಿಯನ್ನೂ ನೀನು ಇಷ್ಟಪಡುವುದಿಲ್ಲ ಎಂದು ನನಗೆ ತಿಳಿದಿದೆ. ನಾನು ನಗಲು ಕಾರಣ ಚಿರು.. ಆತ ನನಗೆ ನೀಡಿರುವುದು ಅತಿ ಅಮೂಲ್ಯ. ನನ್ನ ಕುಟುಂಬ. ನಾವು ಮಾತ್ರವೇ...

ನೀನು ಬಯಸಿದಂತೆ ಇರುತ್ತೇವೆ...
ನಮ್ಮ ಶಾಶ್ವತ ಪ್ರೀತಿಗಾಗಿ ಎಲ್ಲರೂ ಎಂದಿಗೂ ಜತೆಯಾಗಿರುತ್ತೇವೆ. ನೀನು ಇಷ್ಟಪಟ್ಟಂತೆಯೇ ಪ್ರತಿದಿನವೂ ಇರಲಿದೆ. ಪ್ರೀತಿ, ನಗು, ತಮಾಷೆ, ಪ್ರಾಮಾಣಿಕತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜತೆಯಾಗಿರುವಿಕೆಯಿಂದ ಕೂಡಿರುತ್ತದೆ. ಲವ್ ಯೂ ಬೇಬಿ ಮಾ ಎಂದು ಮೇಘನಾ ಬರೆದಿದ್ದಾರೆ.

ಹೂವಿನ ನಡುವೆ ಚಿರು ನಗು
ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿಯೂ ಮೇಘನಾ ರಾಜ್ ಭಾವನಾತ್ಮಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 'ಮೈ ಮಿಸ್ಟರ್ ಹಸ್ಬೆಂಡ್' ಎಂದು ಹೂವಿನ ಅಲಂಕಾರ ನಡುವೆ ಚಿರು ನಗುತ್ತಿರುವ ಫೋಟೊವನ್ನು ಅವರು ಪೋಸ್ಟ್ ಮಾಡಿದ್ದಾರೆ.

ಚಿರು ತೋಳುಗಳಲ್ಲಿ...
'ಎಂದೆಂದಿಗೂ ಕುಟುಂಬ. ಚಿರು ನನಗೆ ಸದಾ ಹೇಳುತ್ತಿದ್ದ... ನಿನ್ನ ಕ್ರಿಯೆಗಳಿಗೆ ಇಡೀ ಜಗತ್ತು ನಿನ್ನನ್ನು ಹೀಗೆ ಎಂದು ತೀರ್ಮಾನಿಸುವಾಗ ನಾನು ನಿನ್ನನ್ನು ಮುಕ್ತ ತೋಳುಗಳನ್ನು ಬಾಚಿಕೊಳ್ಳುತ್ತೇನೆ ಎಂದು...' ಎಂಬುದಾಗಿ ಮೇಘನಾ ಬರೆದಿದ್ದಾರೆ. ಚಿರು ಗೆಳೆಯರ ಫೋಟೊಕ್ಕೆ 'ಮೈ ಬಾಯ್ಸ್' ಎಂದು ಮೇಘನಾ ಕ್ಯಾಪ್ಷನ್ ನೀಡಿದ್ದಾರೆ.


Click it and Unblock the Notifications











