ಮೇಘನಾ ರಾಜ್ ಈಗ ನಿರ್ಮಾಪಕಿ: ಚಿರು ಪತ್ನಿ ನಿರ್ಮಾಣದ ಮೊದಲ ಸಿನಿಮಾ ಇದೇ

ಅನೇಕ ನಟಿಮಣಿಯರು ಅಭಿನಯದ ಜೊತೆಗೆ ಸಿನಿಮಾ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದಾರೆ. ಸ್ವಂತ ಬ್ಯಾನರ್ ಪ್ರಾರಂಭಿಸಿ ವಿಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಇತ್ತೀಚಿಗೆ ಪಾರುಲ್ ಯಾದವ್ ಕೂಡ ಒಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇನ್ನು ನಟಿ ರಚಿತಾ ರಾಮ್ ಮತ್ತು ಶ್ರುತಿ ಹರಿಹರನ್ ಕಿರುಚಿತ್ರ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಮದುವೆ ನಂತರ ಅನೇಕ ನಟಿಯರು ತಮ್ಮದೆ ಬ್ಯಾನರ್ ಪ್ರಾರಂಭಿಸಿ ಸಿನಿಮಾ ನಿಮಾರ್ಣದಲ್ಲಿ ತೊಡಗಿಕೊಂಡಿದ್ದಾರೆ. ಆ ಸಾಲಿಗೀಗ ನಟಿ ಮೇಘನಾ ರಾಜ್ ಕೂಡ ಸೇರಿಕೊಂಡಿದ್ದಾರೆ. ಹೌದು, ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಈಗ ನಾಯಕಿಯಿಂದ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ.

ಸಿನಿಮಾ ನಿರ್ಮಾಣ ಮಾಡಬೇಕು ಎನ್ನುವುದು ಮೇಘನಾ ಅವರ ಬಹುದಿನಗಳ ಕನಸಾಗಿತ್ತಂತೆ. ಆ ಕನಸು ಈಗ ನನಸಾಗುವ ಸಮಯ ಬಂದಿದೆ. 'ಮೇಘನಾ ಸಿನಿಮಾಸ್' ಎನ್ನುವ ಹೊಸ ಪ್ರೊಡಕ್ಷನ್ ಸಂಸ್ಥೆ ಪ್ರಾರಂಭಿಸಿರುವ ಮೇಘನಾ

ಈಗ ಮೊದಲ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಮುಂದೆ ಓದಿ..

ಮೇಘನಾ ನಿರ್ಮಾಣದ ಮೊದಲ ಸಿನಿಮಾ

ಮೇಘನಾ ನಿರ್ಮಾಣದ ಮೊದಲ ಸಿನಿಮಾ

ಮೇಘನಾ ಸಿನಿಮಾಸ್ ನಿಂದ ನಿರ್ಮಾಣ ಆಗುತ್ತಿರುವ ಮೊದಲ ಚಿತ್ರ ಮಕ್ಕಳ ಸಿನಿಮಾ. 'ಪುಟಾಣಿ ಪಂಟರ್ಸ್' ಎನ್ನುವ ಮಕ್ಕಳ ಸಿನಿಮಾಗೆ ಮೇಘನಾ ಬಂಡವಾಳ ಹೂಡುತ್ತಿದ್ದಾರೆ. ಮೇಘನಾ ಮೊದಲು 'ಕರಡಿಪುರ' ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. ಮೊದಲಿನಿಂದಲು ಅರ್ಜುನ್ ಸರ್ಜಾ ಸಿನಿಮಾ ಸೇರಿದಂತೆ ಅನೇಕ ಮಕ್ಕಳ ಸಿನಿಮಾ ನೋಡಿ ಬೆಳೆದವರಂತೆ. ಹಾಗಾಗಿ ಸಿನಿಮಾ ನಿರ್ಮಾಣ ಮಾಡಿದ್ರೆ ಮೊದಲು ಮಕ್ಕಳ ಸಿನಿಮಾನೆ ಮಾಡಬೇಕು ಎನ್ನುವುದು ಮೇಘನಾ ಆಸೆ. ಹಾಗಾಗಿ ತನ್ನ ಬ್ಯಾನರ್ ನ ಮೊದಲ ಚಿತ್ರವನ್ನು ಮಕ್ಕಳ ಸಿನಿಮಾಗಳ ಮೂಲಕ ಪ್ರಾರಂಭಿಸುತ್ತಿದ್ದಾರೆ.

ಪವನ್ ಆಕ್ಷನ್ ಕಟ್

ಪವನ್ ಆಕ್ಷನ್ ಕಟ್

'ಪುಟಾನಿ ಪಂಟರ್ಸ್' ಮಕ್ಕಳ ಸಿನಿಮಾಗೆ ಪವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವ ನಟ ಮತ್ತು ಮಜಾ ಟಾಕೀಸ್ ಮೂಲಕ ಖ್ಯಾತಿಗಿಸಿರುವ ಪವನ್ ನಿರ್ದೇಶಕರಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಪವನ್ ಕತೆ ಕೇಳಿ ಇಂಪ್ರೆಸ್ ಆದ ಮೇಘನಾ ಬಂಡವಾಳ ಹೂಡಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಪ್ರಮಿಳಾ ಜೋಷಾಯ್, ಸುಂದರ್ ರಾಜ್, 'ಸ್ಪರ್ಶ' ರೇಖಾ, ರಮೇಶ್ ಪಂಡಿತ್ ಸೇರಿದಂತೆ ಅನೇಕ ಫೋಷಕ ನಟರು ಇರಲಿದ್ದಾರಂತೆ. ವಿಶೇಷ ಅಂದ್ರೆ ಮೂವರು ಸ್ಲಮ್ ಮಕ್ಕಳು ಕೂಡ ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ನಟಿ, ಗಾಯಕಿ, ನಿರ್ಮಾಪಕಿ

ನಟಿ, ಗಾಯಕಿ, ನಿರ್ಮಾಪಕಿ

ಮೇಘನಾ ರಾಜ್ ಬಾಲನಟಿಯಾಗಿ ಚಿತ್ರರಂಗವನ್ನು ಪ್ರವೇಶಿಸಿದವರು. ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ನಾಯಕಿಯಾಗಿ ಮಿಂಚುತ್ತಿರುವ ಮೇಘನಾ 'ಜಿಂದಾ' ಚಿತ್ರದ ಹಾಡನ್ನು ಹಾಡುವ ಮೂಲಕ ಗಾಯಕಿಯೂ ಆಗಿದ್ದಾರೆ. ಇತ್ತೀಚಿಗಷ್ಟೆ ಪತಿ ಚಿರಂಜೀವಿ ಸರ್ಜಾ ಅಭಿನಯದ 'ಸಿಂಗ' ಚಿತ್ರಕ್ಕೂ ದ್ವನಿಯಾಗಿದ್ದಾರೆ. ಈಗ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ.

ಸೃಜನ್ ಗೆ ನಾಯಕಿಯಾದ ಮೇಘನಾ

ಸೃಜನ್ ಗೆ ನಾಯಕಿಯಾದ ಮೇಘನಾ

ಇರುವುದೆಲ್ಲವ ಬಿಟ್ಟು ಚಿತ್ರದ ನಂತರ ಮೇಘನಾ ಅಭಿಮಾನಿಗಳ ಮುಂದೆ ಬಂದಿಲ್ಲ. ಚಿರು ಪತ್ನಿ ಸೃಜನ್ ಲೋಕೇಶ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕಾಮಿಡಿ ಸಿನಿಮಾ ವಾಗಿದ್ದು ಇದೆ ತಿಂಗಳು 26ರಿಂದ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಮೇಘನಾ ಸಖತ್ ಸ್ಟೈಲಿಶ್ ಐಟಿ ಉದ್ಯೋಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
kannada actress Meghana Raj producing children's movie titled 'Punaatni Pantars'. This movie is directed by Pawan. He is an actor and knows for his comedy show Majaa Talkies, this will be his directorial debut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X