Just In
Don't Miss!
- News
ಬಜೆಟ್ 2021; ಕೋವಿಡ್ ಪರೀಕ್ಷೆಗೆ ಒಳಗಾಗಲು ಸಂಸದರಿಗೆ ಕಟ್ಟುನಿಟ್ಟಿನ ಸೂಚನೆ
- Finance
ಆಕ್ಸಿಸ್ ಬ್ಯಾಂಕ್ Aura ಕ್ರೆಡಿಟ್ ಕಾರ್ಡ್ ಆರಂಭ; ಏನೇನು ಅನುಕೂಲ?
- Automobiles
ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಸ್ವದೇಶಿ ಕಾರು
- Lifestyle
ಚಳಿಗಾಲದಲ್ಲಿ ಕೂದಲ ಆರೈಕೆಗೆ ಇಲ್ಲಿವೆ ಸರಳ ಮನೆಮದ್ದುಗಳು
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಗು ತುಂಬಾ ಮುದ್ದಾಗಿದೆ..ಆದರೆ ಇದು ಜೂ. ಚಿರು ಅಲ್ಲ; ಮೇಘನಾ ರಾಜ್
ಸ್ಯಾಂಡಲ್ ವುಡ್ ನಟಿ, ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಸದ್ಯ ಮುದ್ದು ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಮೇಘನಾ ಕುಟುಂಬ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಮೇಘನಾ ಮತ್ತು ಮಗು ಸೇರಿದಂತೆ ತಂದೆ, ತಾಯಿಗೂ ಕೊರೊನಾ ವೈರಸ್ ವರದಿ ಪಾಸಿಟಿವ್ ಬಂದಿತ್ತು.
ಮೇಘನಾ ಮತ್ತು ಮಗು ಮನೆಯಲ್ಲೇ ಕ್ವಾರಂಟೈನ್ ಆಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಮೇಘನಾ 'ಈ ಮಗು ನಿಜಕ್ಕೂ ಕ್ಯೂಟ್ ಆಗಿದೆ. ಆದರೆ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಇದು ಜೂನಿಯರ್ ಚಿರು ಅಲ್ಲ' ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೇಘನಾ ಈ ಪೋಸ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಮುಂದೆ ಓದಿ...
ನಿಮ್ಮ ಮಗಳು ಸುರಕ್ಷಿತವಾಗಿರುವಂತೆ ನನ್ನ ಮಗನನ್ನು ಬೆಳೆಸುತ್ತೇನೆ: ಮೇಘನಾ ರಾಜ್

ಮೇಘನಾ ಪುತ್ರನ ಫೇಕ್ ವಿಡಿಯೋ ವೈರಲ್
ಮೇಘನಾ ರಾಜ್ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಅಂದಹಾಗೆ ಜೂ. ಚಿರು ಫೋಟೋ ಈಗಾಗಲೇ ವೈರಲ್ ಆಗಿದೆ. ಹುಟ್ಟಿದ ದಿನ ಮತ್ತು ತೊಟ್ಟಿಲ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿರುವ ಮಗು ಮೇಘನಾ ರಾಜ್ ಅವರ ಪುತ್ರ ಎಂದು ಹೇಳಲಾಗುತ್ತಿದೆ.

ಮೇಘನಾ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋದಲ್ಲಿ ಹರಿದಾಡುತ್ತಿರುವ ಮಗು ಮಗು ಜೂ.ಚಿರು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೇಘನಾ ಮತ್ತು ಚಿರು ಮಗು ಎಂದು ಇರುವ ಪೋಸ್ಟ್ ಅನ್ನು ಶೇರ್ ಮಾಡಿ, 'ಈ ಮಗು ನಿಜಕ್ಕೂ ಕ್ಯೂಟ್ ಆಗಿದೆ. ಆದರೆ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಇದು ಜೂನಿಯರ್ ಚಿರು ಅಲ್ಲ' ಎಂದು ಹೇಳಿದ್ದಾರೆ.
ಮೇಘನಾ ಮತ್ತು ಮಗುವಿಗೆ ಕೊರೊನಾ: ಎಲ್ಲರೂ ಆರೋಗ್ಯವಾಗಿದ್ದೇವೆ ಎಂದ ನಟಿ

ಫೇಕ್ ಫೋಟೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ
ಚಿರು ಪುತ್ರನ ವಿಚಾರದಲ್ಲಿ ಹೀಗೆ ಫೇಕ್ ಫೋಟೋಗಳು ಹರಿದಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಮೇಘನಾ ಗರ್ಭಿಣಿ ಆಗಿದ್ದಾಗ ಸಮಯದಲ್ಲಿ ಮೇಘನಾಗಿ ಅವಳಿ ಮಕ್ಕಳು ಜನಿಸಿದೆ ಎಂದು ಅನೇಕ ಫೋಟೋಗಳು ಹರಿದಾಡುತ್ತಿತ್ತು. ಆ ಸಮಯದಲ್ಲೂ ಮೇಘನಾ ಸ್ಪಷ್ಟನೆ ನೀಡಿ, ಇದೆಲ್ಲ ಫೇಕ್ ಫೋಟೋಗಳು ಎಂದು ಹೇಳಿದ್ದರು.
ವಿಡಿಯೋ ವೈರಲ್: ಮನೆಗೆ ಬರೋದಾ? ಮೇಘನಾರಾಜ್ ಗೆ ಪನ್ನಗಾಭರಣ ಪುತ್ರನ ಕ್ಯೂಟ್ ಮನವಿ

ಮಗನ ವಿಚಾರದಲ್ಲಿ ಪ್ರತಿಜ್ಞೆ ಮಾಡಿದ ಮೇಘನಾ
ಇತ್ತೀಚಿಗೆ ಮೇಘನಾ ಮಗನ ವಿಚಾರದಲ್ಲಿ ತುಂಬಾ ಸುಂದರವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. 'ನಿಮ್ಮ ಮಗಳು ಸುರಕ್ಷಿತವಾಗಿರುವಂತೆ ನಾನು ನನ್ನ ಮಗನನ್ನು ಬೆಳೆಸುತ್ತೇನೆ, ಇದು ನನ್ನ ಪ್ರತಿಜ್ಞೆ' ಎಂದು ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಮೇಘನಾ ರ ಈ ಪೋಸ್ಟ್ ಹಲವರ ಮನ ಗೆದ್ದಿದೆ. ಗಂಡು ಮಕ್ಕಳನ್ನು ಸರಿಯಾಗಿ ಬೆಳೆಸಿದರೆ ಹೆಣ್ಣುಮಕ್ಕಳು ಸುರಕ್ಷಿತರಾಗಿ ಇರುತ್ತಾರೆ ಎಂದು ಮೇಘನಾ ಹೇಳಿದ್ದಾರೆ.