For Quick Alerts
  ALLOW NOTIFICATIONS  
  For Daily Alerts

  ಚಿರು ನೆನಪಲ್ಲಿ ಕೇಕ್ ಕಟ್ ಮಾಡಿದ ಮೇಘನಾ ರಾಜ್!

  |

  ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟಿಯರಲ್ಲಿ ಮೇಘನಾ ರಾಜ್ ಕೂಡ ಒಬ್ಬರು. ಮೇಘನಾ ರಾಜ್‌ಗೆ ಇಂದು (ಮೇ 3) ಸಂತಸದ ದಿನ, ಯಾಕೆಂದರೆ ಇಂದು ಮೇಘನಾ ಹುಟ್ಟು ಹಬ್ಬ. 32ನೇ ವಸಂತಕ್ಕೆ ಮೇಘನಾ ರಾಜ್ ಕಾಲಿಟ್ಟಿದ್ದಾರೆ. ಹಿರಿಯ ನಟ ಸುಂದರ್ ರಾಜ್ ಹಾಗೂ ಹಿರಿಯ ನಟಿ ಪ್ರಮಿಳಾ ಜೋಷಾಯ್ ಪುತ್ರಿ ಮೇಘನಾ ರಾಜ್. ಮೇಘನಾ ಕನ್ನಡ ಚಿತ್ರರಂಗಕ್ಕೆ ಬರುವ ಮುನ್ನವೇ ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲೂ ಹೆಸರು ಮಾಡಿದ್ದರು.

  ಮೇಘನಾ ರಾಜ್ 1990ರ ಮೇ 3ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಹಿರಿಯ ನಟ ಸುಂದರ್ ರಾಜ್ ಹಾಗೂ ತಾಯಿ ಹಿರಿಯ ನಟಿ ಪ್ರಮೀಳಾ ಜೋಷಾಯ್. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿ, ಬೆಂಗಳೂರಿನ ಕ್ರೈಸ್ಟ್ ವಿವಿಯಲ್ಲಿ ಮನೋವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ.

  'ಚಿರು' ನೆನಪಲ್ಲೇ 'ಮೇಘನ ರಾಜ್' 4ನೇ ವಿವಾಹ ವಾರ್ಷಿಕೋತ್ಸವ'ಚಿರು' ನೆನಪಲ್ಲೇ 'ಮೇಘನ ರಾಜ್' 4ನೇ ವಿವಾಹ ವಾರ್ಷಿಕೋತ್ಸವ

  ಇನ್ನು ವಿ‍ಶೇಷ ಎಂದರೆ ನಟಿ ಮೇಘನಾ ರಾಜ್ ಮತ್ತು ಚಿರಂಜೀವಿ ಮೇಘಾನಾ ರಾಜ್ ಹುಟ್ಟು ಹಬ್ಬಕ್ಕೂ ಒಂದು ದಿನ ಮೊದಲು ಮದುವೆ ಆಗಿದ್ದಾರೆ. ಹಾಗಾಗಿ ಮೇ 2ರಂದು ಮದುವೆ ವಾರ್ಷಿಕೋತ್ಸವ ಇತ್ತು. ಮೇಘನಾ ಹಾಗೂ ಚಿರು ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಗೆಳೆಯರಾಗಿದ್ದ ಇಬ್ಬರು, 2018ರ ಏಪ್ರಿಲ್ 29 ಹಾಗೂ ಮೇ 2ರಂದು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು.

  ಆದರೆ ದುರಾದೃಷ್ಟ ಅಂದರೆ ಜೂನ್ 2020ರ ಜೂನ್ 7ರಂದು ಚಿರಂಜೀವಿ ಸರ್ಜಾ ಸಾವನ್ನಪ್ಪಿದರು. ತೀವ್ರ ಹೃದಯಾಘಾತಕ್ಕೆ ಒಳಗಾದ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದರು. ಆಗ ಮೇಘನಾ ರಾಜ್ ಗರ್ಭಿಣಿಯಾಗಿದ್ದರು. ಚಿರಂಜೀವಿ ನಿಧನಕ್ಕೆ ಬರೀ ಕುಟುಂಬಸ್ಥರಷ್ಟೇ ಅಲ್ಲದೇ, ಇಡೀ ಕರುನಾಡೇ ಕಣ್ಣೀರು ಸುರಿಸಿತ್ತು. ಆದರೆ ಸದ್ಯ ಚಿರು ಕುಟುಂಬ ಮಗ ರಾಯಾನ್ ನಗುವಿನಲ್ಲಿ ಚಿರುವನ್ನು ಕಾಣುತ್ತಿದ್ದಾರೆ.

  Meghana Raj Remember Chiranjeevi Sarja On Her 32nd Birthday

  ಮದುವೆ, ಮಗು ಆದ ಬಳಿಕ ನಟಿ ಮೇಘನಾ ರಾಜ್ ಹಲವು ದಿನಗಳು ಬಣ್ಣದ ಲೋಕದಿಂದ ದೂರ ಇದ್ದರು. ಆದರೆ ಇತ್ತೀಚೆಗೆ ಕೆಲವು ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ. ಜೊತೆಗೆ ಕಿರುತೆರೆ ರಿಯಾಲಿಟಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೂ ಹತ್ತಿರವಾಗಿದ್ದಾರೆ ಮೇಘನಾ.

  English summary
  Meghana Raj Remember Chiranjeevi Sarja On Her 32nd Birthday, Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X