ಮೇಘನಾ ರಾಜ್ ಬಗ್ಗೆ ಹರಿದಾಡುತ್ತಿದೆ ಸುಳ್ಳು ಸುದ್ದಿ: ಸ್ಪಷ್ಟನೆ ನೀಡಿದ ಚಿರು ಪತ್ನಿ

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಪತಿಯ ಅಗಲಿಕೆಯ ನೋವಿನಲ್ಲಿರುವ ಮೇಘನಾಗೆ ಸುಳ್ಳು ಸುದ್ದಿಯ ಕಾಟ ಜಾಸ್ತಿ ಆಗುತ್ತಿದೆ. ಇತ್ತೀಚಿಗಷ್ಟೆ ಚಿರಂಜೀವಿ ಸರ್ಜಾ ಬಗ್ಗೆ ಕೇಳಿ ಬಂದಿದ್ದ ಆರೋಪದ ಬಗ್ಗೆ ಭಾವುಕ ಪತ್ರ ಬರೆದಿದ್ದ ಮೇಘನಾ, ಇದೀಗ ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Recommended Video

ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಮೇಲೆ ಕೋಪಗೊಂಡ ಮೇಘನಾ ರಾಜ್ ಸರ್ಜಾ | Filmibeat Kannada

ಅಷ್ಟಕ್ಕು ಮೇಘನಾ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿ ಎಂದರೆ, ಕೆಲವು ಯೂ ಟ್ಯೂಬ್ ಚಾನೆಲ್ ಗಳು ಮೇಘನಾ ಅಳುತ್ತಿರುವ ಫೋಟೋವನ್ನು ಮತ್ತು ಮೇಘನಾ ಕೈಯಲ್ಲಿ ಎರಡು ಪುಟ್ಟ ಅವಳಿ ಮಕ್ಕಳಿರುವ ಹಾಗೆ ಫೋಟೋಶಾಪ್ ಮಾಡಿ ಶೇರ್ ಮಾಡಿದ್ದಾರೆ. ಮೇಘನಾಗೆ ಅವಳಿ ಗಂಡು ಮಕ್ಕಳು ಎಂದು ಸುದ್ದಿ ಹಬ್ಬಿಸಿದ್ದಾರೆ. ಇದನ್ನು ನೋಡಿ ಶಾಕ್ ಆಗಿರುವ ಮೇಘನಾ ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

ಮೇಘನಾ ರಾಜ್ ಬಗ್ಗೆ ಹೀಗೆಲ್ಲ ಸುಳ್ಳು ಸುದ್ದಿ

ಮೇಘನಾ ರಾಜ್ ಬಗ್ಗೆ ಹೀಗೆಲ್ಲ ಸುಳ್ಳು ಸುದ್ದಿ

ಪೋಟೋಶಾಪ್ ಮಾಡುವ ಜೊತೆಗೆ ಎರಡು ಗಂಡು ಮಕ್ಕಳ ಜೊತೆ ಮೇಘನಾ, ಮೇಘನಾ ಪರಿಸ್ಥಿತಿ ಏನಾಗಿದೆ, ಮಗು ಹಿಡಿದು ಕಣ್ಣೀರು ಹಾಕುತ್ತಿರುವ ಮೇಘನಾ ಎಂದೆಲ್ಲ ಬಾಯಿಗೆ ಬಂದಹಾಗೆ ಬರೆದು ವಿಡಿಯೋ ಮಾಡಿ ವೈರಲ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ಶಾಕ್ ಆಗಿರುವ ಮೇಘನಾ ಫೋಟೋಶಾಪ್ ಮಾಡಿರುವ ಯೂ ಟ್ಯೂಬ್ ಚಾನಲ್ ಮತ್ತು ಸುಳ್ಳು ಸುದ್ದಿಯನ್ನು ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ಹೇಗೆ ಗೊತ್ತು?

ನನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ಹೇಗೆ ಗೊತ್ತು?

ಇದು ಸುಳ್ಳು ಸುದ್ದಿ ನಂಬಬೇಡಿ ಎಂದಿರುವ ಮೇಘನಾ, "ನನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ಇವರಿಗೆ ಹೇಗೆ ಗೊತ್ತು. ನನ್ನ ಬಗ್ಗೆ ನನಗೇ ಗೊತ್ತಿಲ್ಲದ ವಿಚಾರಗಳು ಇವರಿಗೆ ಎಷ್ಟು ಚೆನ್ನಾಗಿ ಗೊತ್ತು. ಎಷ್ಟು ಚೆನ್ನಾಗಿ ಫೋಟೋಶಾಪ್ ಮಾಡಿದ್ದಾರೆ. ಇವರಿಂದ ಪಾಠ ಕಲಿಯಬೇಕು" ಎಂದು ಹೇಳಿದ್ದಾರೆ.

ಮೇಘನಾ ರಾಜ್ ಮನೆಯಲ್ಲಿ ಆಪ್ತ ಸ್ನೇಹಿತೆಯರು

ಮೇಘನಾ ರಾಜ್ ಮನೆಯಲ್ಲಿ ಆಪ್ತ ಸ್ನೇಹಿತೆಯರು

ಇತ್ತೀಚಿಗಷ್ಟೆ ಮೇಘನಾ ರಾಜ್ ಮನೆಗೆ ಹಿರಿಯ ನಟಿಯರಾದ ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್ ಭೇಟಿ ನೀಡಿದ್ದರು. ಹಲವು ಸಮಯವನ್ನು ಒಟ್ಟಿಗೆ ಕಳೆದ ಇವರು ಮೇಘನಾ ಗೆ ಹೊಸ ಹುರುಪು ತುಂಬುವ ಯತ್ನ ಮಾಡಿದ್ದಾರೆ. ಶ್ರುತಿ, ಸುಧಾರಾಣಿ ಅವರು ಸುಂದರ್‌ ರಾಜ್ ಮತ್ತು ಪ್ರಮಿಳಾ ಜೋಷಾಯ್ ಅವರಿಗೆ ತಂಬಾ ಆಪ್ತರು. ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಮನೆಗೆ ಭೇಟಿ ನೀಡಿ ಒಟ್ಟಿಗೆ ಸಮಯ ಕಳೆದಿದ್ದಾರೆ. ಪ್ರಮಿಳಾ ಜೋಷಾಯ್ ಅವರು ಮಸಾಲೆ ದೋಸೆ ಉಣಬಡಿಸಿದ್ದಾರೆ.

More from Filmibeat

English summary
Meghana Raj clarify about fake news and She Request Fans Not to Believe in Fake News about her baby delivery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X