For Quick Alerts
  ALLOW NOTIFICATIONS  
  For Daily Alerts

  ಮೇಘನಾ ಮತ್ತು ಮಗುವಿಗೆ ಕೊರೊನಾ: ಎಲ್ಲರೂ ಆರೋಗ್ಯವಾಗಿದ್ದೇವೆ ಎಂದ ನಟಿ

  |

  ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರಿಗೆ ಕೊರೊನಾ ಸೋಂಕು ದೃಢವಾದ ಬೆನ್ನಲ್ಲೆ ಇಡೀ ಕುಟುಂಬಕ್ಕೆ ಸೋಂಕು ಹರಡಿದೆ. ಪತಿ ಸುಂದರ್ ರಾಜ್, ಮಗಳು ಮೇಘನಾ ರಾಜ್ ಹಾಗೂ ಚಿರು ಸರ್ಜಾ ಮಗುವಿಗೂ ಕೊರೊನಾ ಪಾಸಿಟಿವ್ ಬಂದಿದೆ.

  ಮೇಘನಾ ರಾಜ್ ಮತ್ತು ಮಗು ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮೀಳಾ ಮತ್ತು ಸುಂದರ್ ರಾಜ್ ದಂಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ನಟಿ ಮೇಘನಾ ರಾಜ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

  ಮೇಘನಾ ರಾಜ್ ಹಾಗೂ ಪುತ್ರ ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್

  ನಮ್ಮ ಕುಟುಂಬ ಸದಸ್ಯರಿಗೆ ಕೊರೊನಾ ತಗುಲಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಯಾರೂ ಬೇಸರ ಮಾಡಿಕೊಳ್ಳುವುದು ಎಂದು ವಿನಂತಿಸಿಕೊಂಡಿದ್ದಾರೆ.

  ''ನನ್ನ ತಂದೆ, ನನ್ನ ತಾಯಿ, ನನಗೆ ಹಾಗೂ ನನ್ನ ಮಗುವಿಗೆ ಕೊರೊನಾ ವೈರಸ್ ತಗುಲಿದೆ. ನಮ್ಮ ಜೊತೆ ಸಂಪರ್ಕದಲ್ಲಿದ್ದವರಿಗೆಲ್ಲ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ. ನಾವೆಲ್ಲರೂ ಆರೋಗ್ಯಕರವಾಗಿದ್ದೇವೆ. ಜೂನಿಯರ್ ಸಹ ಸುರಕ್ಷಿತವಾಗಿದ್ದಾನೆ. ನಮ್ಮ ಕುಟುಂಬ ಈ ಕೊರೊನಾದಿಂದ ಆದಷ್ಟೂ ಬೇಗ ಚೇತರಿಕೆ ಕಾಣುತ್ತೇವೆ'' ಎಂದು ಸ್ಪಷ್ಟನೆ ನೀಡಿದ್ದಾರೆ.

  ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಇಬ್ಬರಿಗೂ ವಯಸ್ಸಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಘನಾ ಮತ್ತು ಮಗುವಿಗೆ ಯಾವುದೇ ಕೊರೊನಾ ಲಕ್ಷಣ ಕಾಣಿಸಿಕೊಂಡಿಲ್ಲ. ಹಾಗಾಗಿ, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯ್‌ಗೆ ಕೊರೊನಾ ಪಾಸಿಟಿವ್

  ಜೀವನದಲ್ಲಿ ಯಾವತ್ತು ಒಂದೇ ಗುರಿ ಇರ್ಬೇಕು | Shivraj K R Pete | Filmibeat Kannada

  ಈ ಹಿಂದೆ ಮೇಘನಾ ರಾಜ್ ಮೈದುನ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ತಗುಲಿತ್ತು. ನಂತರ ಸೋಂಕಿನಿಂದ ಚೇತರಿಸಿಕೊಂಡಿದ್ದರು.

  English summary
  Chiranjeevi Sarja Wife Meghana Raj Request Fans to Not Fret after Her Family Tests Positive for Coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X