ಮೇಘನಾ - ಚಿರು ಪುತ್ರನ ಹೆಸರು ಬಹಿರಂಗ: ಜೂ. ಚಿರು ಹೆಸರೇನು?
ಸ್ಯಾಂಡಲ್ ವುಡ್ ಖ್ಯಾತ ನಟಿ ಮೇಘನಾ ರಾಜ್ ತನ್ನ ಮುದ್ದು ಮಗನ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಜೂ.ಚಿರುಗೆ ಏನೆಂದು ಹೆಸರಿಟ್ಟಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಅನೇಕ ತಿಂಗಳಿಂದ ಜೂ.ಚಿರು ಹೆಸರೇನು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದರು. ಕೊನೆಗೂ ಜೂ.ಚಿರು ಹೆಸರು ಬಹಿರಂಗವಾಗಿದೆ.
ಇಂದು (ಸೆಪ್ಟಂಬರ್ 3) ಜು.ಚಿರು ಹೆಸರು ರಿವೀಲ್ ಮಾಡುವುದಾಗಿ ಮೇಘನಾ ಹೇಳಿದ್ದರು. ಇಂದು ಬೆಳಗ್ಗೆ 11.07ಕ್ಕೆ ಮೇಘನಾ-ಚಿರು ಪುತ್ರನ ಹೆಸರು ಬಹಿರಂಗವಾಗಲಿದೆ ಎಂದು ಪುಟ್ಟ ಟೀಸರ್ ಮೂಲಕ ಅನೌನ್ಸ್ ಮಾಡಿದ್ದರು. ಅದರಂತೆ ಸೆಪ್ಟಂಬರ್ 3ರಂದು ಪುತ್ರನ ಹೆಸರನ್ನು ಬಹಿರಂಗ ಪಡಿಸಿದ್ದಾರೆ ಮೇಘನಾ ರಾಜ್. ಕೊನೆಗೂ ಜೂ.ಚಿರುಗೆ ನಾಮಕರಣ ಮಾಡಿದ್ದಾರೆ. ಅಂದಹಾಗೆ ಮೇಘನಾ ತನ್ನ ಮುದ್ದು ಮಗನಿಗೆ "ರಾಯನ್ ರಾಜ್ ಸರ್ಜಾ" ಎಂದು ನಾಮಕರಣ ಮಾಡಿದ್ದಾರೆ. ಟೀಸರ್ ಮೂಲಕ ಮಗನ ಹೆಸರನ್ನು ಬಹಿರಂಗ ಪಡಿಸಿದ್ದಾರೆ ಮೇಘನಾ.
ಅಂದಹಾಗೆ ರಾಯನ್ ಎಂದರೇ ಲಿಟಲ್ ಪ್ರಿನ್ಸ್ ಎನ್ನುವ ಅರ್ಥವಿದೆ. ಅದೆ ಹೆಸರನ್ನು ಮುದ್ದು ಮಗವಿಗೆ ಇಟ್ಟಿರುವುದು ವಿಶೇಷ. ಅಂದಹಾಗೆ ಮೇಘನಾ ಪುತ್ರನಿಗೆ ಸದ್ಯ 11 ತಿಂಗಳು. ಅಕ್ಟೋಬರ್ ತಿಂಗಳಲ್ಲಿ ಮೇಘನಾ ಮುದ್ದಾದ ಮಗುವಿಗೆ ಜನ್ಮ ನೀಡಿದ್ದರು. ಪತಿ ಚಿರಂಜೀವಿ ಕಳೆದುಕೊಂಡು ದುಃಖದಲ್ಲಿದ್ದ ಮೇಘನಾಗೆ ರಾಯನ್ ರಾಜ್ ಸಂತೋಷ ಹೊತ್ತು ಬಂದಿದ್ದರು. ಮಗನ ಜೊತೆ ಸಂತಸದ ಕ್ಷಣ ಕಳೆಯುತ್ತಿರುವ ಮೇಘನಾ ಆಗಾಗ ಮುದ್ದು ಮಗನ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ಇದೀಗ ಹೆಸರು ಬಹಿರಂಗ ಪಡಿಸುವ ಮೂಲಕ ಮತ್ತೊಂದು ವಿಡಿಯೋ ಶೇರ್ ಮಾಡಿದ್ದಾರೆ. ಅಂದಹಾಗೆ ಮೇಘನಾ-ಚಿರು ಪುತ್ರನನ್ನು ಈಗಾಗಲೇ ಅನೇಕ ಹೆಸರುಗಳಿಂದ ಕರೆಯುತ್ತಿದ್ದರು. ಜೂ.ಚಿರು, ಸಿಂಬ, ಚಿಂಟು, ಬರ್ಫಿ, ಚಿರು ಬಚ್ಚ, ಮರಿ ಸಿಂಗ, ಕುಟ್ಟಿ ಪಾಪ ಹೀಗೆ ನಾನಾಹೆಸರುಗಳಿಂದ ಕರೆಯುತ್ತಿದ್ದ ಮಗನಿಗೆ ಈಗ ಅಧಿಕೃತವಾಗಿ ಹೆಸರಿಟ್ಟಿದ್ದಾರೆ.
ಅಂದಹಾಗೆ ಮೇಘನಾ ಸದ್ಯ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ಒಂದು ವರ್ಷದ ಬಳಿಕ ಮತ್ತೆ ಬಣ್ಣಹಚ್ಚಿರುವ ಮೇಘನಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಮಗನಿಗೆ 9 ತಿಂಗಳು ತುಂಬಿದ ಸಂತಸದಲ್ಲಿ ಮೇಘನಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದು ಅಭಿಮಾನಿಗಳ ಖುಷಿಗೆ ಕಾರಣವಾಗಿತ್ತು. ಮದುವೆ ಬಳಿಕ ಸಂಸಾರದ ಕಡೆ ಹೆಚ್ಚು ಗಮನ ಹರಿಸಿದ್ದ ಮೇಘನಾ ನಂತರ ಪತಿಯ ನಿಧನ ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗುವತ್ತ ಗಮನ ಹರಿಸಿದ್ದಾರೆ.
ಇತ್ತೀಚಿಗೆ ಅಂದರೆ ಮಗನಿಗೆ ಒಂಬತ್ತು ತಿಂಗಳು ತುಂಬಿದ ಸಂತಸದ ಸುದ್ದಿಯನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕ್ಯಾಮರಾ ಮುಂದೆ ನಿಂತಿರುವ ಫೋಟೋ ಶೇರ್ ಮಾಡುವ ಜೊತೆಗೆ, "ಜೂ. ಚಿರುಗೆ ಒಂಬತು ತಿಂಗಳು ತುಂಬಿದೆ. ನಾನು ವರ್ಷದ ನಂತರ ಚಿತ್ರೀಕರಣಕ್ಕೆ ಹಾಜರಾಗುವ ಮೂಲಕ ಸಂಭ್ರಮಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದರು. ಆದರೆ ಇದು ಸಿನಿಮಾನಾ ಅಥವಾ ಜಾಹೀರಾತು ಚಿತ್ರೀಕರಣನಾ ಎನ್ನುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಆದರೆ ಇತ್ತೀಚಿಗಷ್ಟೆ ಜಾಹೀರಾತು ಬಿಡುಗಡೆಯಾಗುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ.


Click it and Unblock the Notifications











