ಫೆಬ್ರವರಿ 14ಕ್ಕೆ ಜೂ.ಚಿರುಗೆ ಹಲೋ..ಹೇಳಿ ಎಲ್ಲರೂ; ವಿಡಿಯೋ ಹಂಚಿಕೊಂಡ ಮೇಘನಾ

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಸಿಹಿ ಸುದ್ದಿ ನೀಡುವುದಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. ಫೆಬ್ರವರಿ 12 ಬೆಳಗ್ಗೆ 9 ಗಂಟೆಗೆ ಮೇಘನಾ ಸಖತ್ ಸುದ್ದಿ ನೀಡುವುದಾಗಿ ಪೋಸ್ಟ್ ಮಾಡಿದ್ದರು. ಇದೀಗ ಸರಿಯಾಗಿ 9ಗಂಟೆಗೆ ಗುಡ್ ನ್ಯೂಸ್ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಅಂದಹಾಗೆ ಮೇಘನಾ ಹಂಚಿಕೊಂಡಿರುವ ಗುಡ್ ನ್ಯೂಸ್ ಮುದ್ದಿನ ಪುತ್ರನ ಬಗ್ಗೆ. ಹೌದು, ಫೆಬ್ರವರಿ 14ಕ್ಕೆ ಮಗನ ಫೋಟೋವನ್ನು ರಿವೀಲ್ ಮಾಡುವುದಾಗಿ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಮೇಘನಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಚಿರಂಜೀವಿ ಜೊತೆ ಇರುವ ಸುಂದರ ಕ್ಷಣಗಳ ಫೋಟೋಗಳ ಜೊತೆಗೆ ಮುದ್ದಾದ ಮಗನನ್ನು ಎತ್ತಿಕೊಂಡಿರುವ ಫೋಟೋಗಳು ಇರುವ ವಿಡಿಯೋವನ್ನು ಮೇಘನಾ ಶೇರ್ ಮಾಡಿದ್ದಾರೆ. ಮಗನ ನಗುವಿನ ಶಬ್ದ ವಿಡಿಯೋದ ಹೈಲೆಟ್ ಆಗಿದೆ. ಈ ವಿಡಿಯೋವನ್ನು ಶೇರ್ ಮಾಡಿ, 'ಫೆಬ್ರವರಿ 14ಕ್ಕೆ ಮಗನಿಗೆ ಎಲ್ಲರೂ ಹಲೋ ಹೇಳಿ' ಎಂದು ಬರೆದುಕೊಂಡಿದ್ದಾರೆ.

Meghana Raj reveals surprise and she says can’t wait for u all to see our little boy

ಮುದ್ದಾಗಿ ಬೆಳೆದಿರುವ ಜೂ.ಚಿರು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ತೊಟ್ಟಿಲ ಶಾಸ್ತ್ರದ ಬಳಿಕ ಮೇಘನಾ ಮಗನ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಪ್ರೇಮಿಗಳ ದಿನದಂದು ಮಗನನ್ನು ಅಭಿಮಾನಿಗಳಿಗೆ ತೋರಿಸುತ್ತಿದ್ದಾರೆ. ಜೂ.ಚಿರು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

ಮೇಘನಾ ಗುಡ್ ನ್ಯೂಸ್ ಹೇಳುವುದಾಗಿ ಪೋಸ್ಟ್ ಹಾಕುತ್ತಿದ್ದಂತೆ ಏನಿರ ಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಮಗನ ಹೆಸರು ರಿವೀಲ್ ಮಾಡುತ್ತಾರಾ ಎಂದು ಅನೇಕರು ಅಂದಿಕೊಂಡಿದ್ದರು. ಇನ್ನೂ ಇತ್ತೀಚಿಗಷ್ಟೆ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 1ಮಿಲಿಯನ್ ದಾಟಿರುವ ಖುಷಿಗೆ ಏನಾದರೂ ಸರ್ಪ್ರೈಸ್ ನೀಡುತ್ತಾರಾ ಎಂದು ಕಾತರದಿಂದ ಕಾಯುತ್ತಿದ್ದರು. ಇದೀಗ ಗುಡ್ ನ್ಯೂಸ್ ರಿವೀಲ್ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

More from Filmibeat

English summary
Actress Meghana Raj reveals surprise and she says can’t wait for u all to see our little boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X