ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್‌ಗಿರಿ ; ರಣ್‌ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?

ಅನಿಮಲ್ ಚಿತ್ರದ ಬಗ್ಗೆ ಒಬ್ಬೊಬ್ಬರಲ್ಲಿ ಒಂದು ಅಭಿಪ್ರಾಯ ಇದೆ. ಕೆಲವರ ಪ್ರಕಾರ ಅನಿಮಲ್ ಬಾಲಿವುಡ್ ಇತಿಹಾಸದಲ್ಲಿಯೇ ಬಂದ ಅತ್ಯುತ್ತಮ ಸಿನಿಮಾ. ಇನ್ನೂ ಕೆಲವರ ಪ್ರಕಾರ ಅನಿಮಲ್ ಹಿಂಸಾವಿನೋದದ ಪರಾಕಾಷ್ಠೆ. ಇನ್ನೂ ಬಹುತೇಕರ ಪ್ರಕಾರ ಪುರುಷಾಹಂಕಾರದ ಮಾನಸಿಕತೆಗೆ ಕೈಗನ್ನಡಿ ಹಿಡಿದ ಸಿನಿಮಾ ಈ ಅನಿಮಲ್.

ಸಂದೀಪ್ ರೆಡ್ಡಿ ವಂಗಾ ಸೃಷ್ಟಿಸಿದ ಈ ಅನಿಮಲ್ ಚಿತ್ರದ ಪ್ರಭಾವ ಎಷ್ಟಿದೆ ಅಂದರೆ, ಚಿತ್ರ ತೆರೆಗೆ ಬಂದು ನಾಲ್ಕು ತಿಂಗ್ಳಾದರೂ ಈ ಚಿತ್ರದ ಕುರಿತು ಚರ್ಚೆ ಇನ್ನೂ ನಿಂತಿಲ್ಲ. ನಿಲ್ಲುವ ಲಕ್ಷಣವೂ ಕಾಣುತ್ತಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ.. ಸಕಾರಾತ್ಮಕ ಹಾಗೂ ಋಣಾತ್ಮಕ ವಿಮರ್ಶೆಗಳನ್ನ ಏಕಕಾಲಕ್ಕೆ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನಿಮಲ್ ಬಗ್ಗೆ ಮೇಘನಾ ರಾಜ್ ಈಗ ಮಾತನಾಡಿದ್ದಾರೆ. ಈ ತರಹದ ಚಿತ್ರವನ್ನ ಮಾಡಲು, ನಿಜಕ್ಕೂ ಎಂಟೆದೆ ಬೇಕು ಎಂಬ ಅರ್ಥದಲ್ಲಿ ಚಿತ್ರವನ್ನ ವಿಮರ್ಷಿಸಿದ್ದಾರೆ

Meghana Raj Sarja praised Ranbir Kapoor starrer Animal

ಹೌದು. ರ‍್ಯಾಪಿಡ್ ರಶ್ಮಿ ಅವರ ಜೊತೆ ತಮ್ಮ ಮನದ ಮಾತನ್ನ ಇತ್ತೀಚೆಗಷ್ಟೇ ಹಂಚಿಕೊಂಡಿರುವ ಮೇಘನಾ ರಾಜ್, ತಮ್ಮ ದೃಷ್ಟಿಕೋನದಲ್ಲಿ ಅನಿಮಲ್ ಚಿತ್ರವನ್ನ ವಿಶ್ಲೇಷಿಸಿದ್ದಾರೆ. ನಿಜಾ.. ಅನಿಮಲ್ ಚಿತ್ರದಲ್ಲಿ ಎಲ್ಲವೂ ಅಗತ್ಯಕ್ಕಿಂತ ಹೆಚ್ಚಿದೆ. ಆದರೆ.. ಅನಿಮಲ್ ಚಿತ್ರದಲ್ಲಿ ಬದುಕಿನ ಬ್ಲ್ಯಾಕ್ & ವೈಟ್ ಬಣ್ಣಗಳಿವೆ ಅಂದಿದ್ದಾರೆ. ಈ ರೀತಿಯ ಸಿನಿಮಾ ಮಾಡಲು ನಿಜಕ್ಕೂ ಧೈರ್ಯ ಬೇಕು ಅಂದಿದ್ದಾರೆ

ಅನಿಮಲ್ ಚಿತ್ರದ ವಿಮರ್ಶೆಯನ್ನ ಮಾಡುವ ಸಮಯದಲ್ಲಿ ನೈತಿಕ ಪೊಲೀಸ್‌ಗಿರಿ ಯನ್ನು ಪ್ರಶ್ನೆ ಮಾಡಿರುವ ಮೇಘನಾ ರಾಜ್, ಚಿತ್ರವನ್ನ ಚಿತ್ರವನ್ನಾಗಿಯಷ್ಟೇ ನೋಡಬೇಕು ಅಂದಿದ್ದಾರೆ. ಮನೆಯಲ್ಲಿ ನಾವು ಮಾಡೋದನ್ನೇ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಆದರೆ, ಅದನ್ನೇ ಸಿನಿಮಾದಲ್ಲಿ ತೋರಿಸಿದಾಗ ಹತ್ತಾರು ಪ್ರಶ್ನೆಗಳನ್ನ ನಾವೇ ಕೇಳುತ್ತೇವೆ, ನಮ್ಮಲ್ಲಿ ಮಾರಲ್ ಪೋಲಿಸಿಂಗ್ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮೇಘನಾ ರಾಜ್.

ಇನ್ನೂ ಮಾತಲ್ಲಿ ಕಥೆ ಹೇಳುವಾಗ ಒಬ್ಬ ಇದ್ದ, ಆತ ಹುಚ್ಚನಾಗಿದ್ದ ಎಂದು ಹೇಳುತ್ತೇವೆ. ಅದನ್ನು ಸಿನಿಮಾದಲ್ಲಿ ತೋರಿಸಿದರೆ, ಅದನ್ನ ಹೇಗೆ ತೋರಿಸಿದರು ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ ಎಂದಿರುವ ಮೇಘನಾ ರಾಜ್, ನನಗಂತೂ ಅನಿಮಲ್ ಚಿತ್ರ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಎನಿಸಿತು ಎಂದಿದ್ದಾರೆ.

Meghana Raj Sarja praised Ranbir Kapoor starrer Animal

ಅನಿಮಲ್ ಚಿತ್ರದ ಬಗ್ಗೆ ಮೇಘನಾ ರಾಜ್ ಅವರು ಆಡಿರುವ ಈ ಮಾತು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಮುನ್ನುಡಿಯನ್ನ ಬರೆದಿದೆ. ಕೆಲವರು.. ಮೇಘನಾ ರಾಜ್ ಅವರ ಮಾತುಗಳಿಗೆ ತಲೆಯಾಡಿಸಿದರೆ, ಇನ್ನೂ ಕೆಲವರು ಅಚರ ದೃಷ್ಟಿಕೋನದಲ್ಲಿ ಚಿತ್ರದ ವಿಮರ್ಶೆಯನ್ನ ಮಾಡಲು ಆರಂಭ ಮಾಡಿದ್ದಾರೆ.

ಒಟ್ನಲ್ಲಿ ಬಾಕ್ಸಾಫೀಸ್‌ನಲ್ಲಿ ಹೆಚ್ಚು ಕಡಿಮೆ 900 ಕೋಟಿಯನ್ನ ಗಳಿಸಿರುವ ಅನಿಮಲ್ ಸುತ್ತ ಮುತ್ತ ಇವತ್ತು ಕೂಡ ಚರ್ಚೆ ನಡೆಯುತ್ತಿದೆ. ಸರಿ-ತಪ್ಪುಗಳ ನಡುವೆ ಇರುವ ವ್ಯತ್ಯಾಸದ ಕುರಿತು ಕೂಡ ಚರ್ಚೆ ಆಗುತ್ತಿದೆ. ಎಲ್ಲವೂ ಅವರವರ ಭಾವಕ್ಕೆ ಅವರವರ ಭಕುತಿಗೆ...

More from Filmibeat

English summary
During An Interview With Rapid Rashmi Sandalwood Actress Meghana Raj Praised Ranbir Kapoor Starrer Animal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X