ಧ್ರುವ ಸರ್ಜಾ ಪತ್ನಿ ಹುಟ್ಟುಹಬ್ಬಕ್ಕೆ ಶುಭಕೋರಿದ ಮೇಘನಾ ರಾಜ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಸರ್ಜಾ ಕುಟುಂಬದ ಅಭಿಮಾನಿಗಳು ಶುಭಕೋರಿದ್ದಾರೆ. ಅಕ್ಕರೆಯ ಸಹೋದರಿಯ ಬರ್ತಡೇಗೆ ಚಿರು ಸರ್ಜಾ ಪತ್ನಿ ಮೇಘನಾ ರಾಜ್ ಸಹ ಪ್ರೀತಿಪೂರ್ವಕವಾಗಿ ವಿಶ್ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪ್ರೇರಣಾ ಜೊತೆಗಿನ ಫೋಟೋ ಹಂಚಿಕೊಂಡಿರುವ ಮೇಘನಾ ''ಹ್ಯಾಪಿ ಬರ್ತಡೇ ಸಿಲ್, ಅದ್ಭುತವಾಗಿರು, ನಿನ್ನದು ಸುಂದರ ಮನಸ್ಸು'' ಎಂದು ಬರೆಯುವ ಮೂಲಕ ಶುಭಕೋರಿದ್ದಾರೆ.
ಮೇಘನಾ ರಾಜ್ ಅವರ ಶುಭಾಶಯಕ್ಕೆ ಪ್ರತಿಕ್ರಿಯಿಸಿರುವ ಪ್ರೇರಣಾ ''ಥ್ಯಾಂಕ್ ಯೂ ಸೋ ಮಚ್ ಸಿಲ್ ಮಾ'' ಎಂದಿದ್ದಾರೆ.

ಇನ್ನು ಪತ್ನಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿರುವ ಧ್ರುವ ಸರ್ಜಾ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಮುದ್ರತೀರಾದಲ್ಲಿರುವ ಹೋಟೆಲ್‌ವೊಂದರಲ್ಲಿ ಕಲರ್ ಫುಲ್ ಲೈಟಿಂಗ್ ಹಾಕಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಈ ವಿಡಿಯೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿರುವ ಧ್ರುವ ''ಹ್ಯಾಪಿ ಬರ್ತಡೇ ಮೈ ಫ್ರೆಂಡ್, ಮೈ ವೈಫ್ ಆಂಡ್ ಮೈ ಲವ್'' ಎಂದು ಕ್ಯಾಪ್ಷನ್ ಹಾಕಿದ್ದಾರೆ.
ಇನ್ನು ಮೇಘನಾ ರಾಜ್, ಮಗು ಹಾಗೂ ಸುಂದರ್ ರಾಜ್, ಪ್ರಮೀಳಾ ಜೋಷಾಯ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಮೇಘನಾ ಮತ್ತು ಮಗುವಿಗೆ ರೋಗಲಕ್ಷಣಗಳು ಇಲ್ಲದ ಕಾರಣ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೀಗಾಗಿ, ಪ್ರೇರಣಾ ಅವರ ಹುಟ್ಟುಹಬ್ಬವನ್ನು ಬಹಳ ಖಾಸಗಿಯಾಗಿ ಆಚರಿಸಲಾಗಿದೆ. ಧ್ರುವ ಮತ್ತು ಪ್ರೇರಣಾ ಇಬ್ಬರೇ ಖಾಸಗಿಯಾಗಿ ಬರ್ತಡೇ ಸಂಭ್ರಮಿಸಿದ್ದಾರೆ.


Click it and Unblock the Notifications











