twitter
    For Quick Alerts
    ALLOW NOTIFICATIONS  
    For Daily Alerts

    ಹೃದಯ ಕಲಕುತ್ತದೆ ಚಿರಂಜೀವಿ ಸರ್ಜಾ ಕುರಿತ ಮೇಘನಾ ರಾಜ್ ಬರಹ

    |

    ಚಿರಂಜೀವಿ ಸರ್ಜಾ ಎಂಬ ಎಲ್ಲರನ್ನೂ ಪ್ರೀತಿಸುವ, ಎಲ್ಲರಿಂದಲೂ ಪ್ರೀತಿಸಲ್ಪಡುವ ಜೀವ ನಮ್ಮನ್ನು ಅಗಲಿ ಎರಡು ವಾರವಾಗುತ್ತಾ ಬಂದರೂ ಆ ಸಾವನ್ನು ಒಪ್ಪಿಕೊಳ್ಳಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಅವರ ನಗುಮೊಗ ಕಣ್ಣಮುಂದೆ ಸುಳಿಯುತ್ತದೆ. ಅವರ ಸಿನಿಮಾಗಳನ್ನು ನೋಡಿದವರು, ಅವರ ಬಗ್ಗೆ ಕೇಳಿದವರು, ಅವರ ಅಭಿಮಾನಿಗಳಿಗೇ ಈ ನೋವು ಸಹಿಸಿಕೊಳ್ಳಲಾಗುತ್ತಿಲ್ಲ ಎಂದಾಗ ಅವರ ಹತ್ತಿರದ ಒಡನಾಡಿಗಳು?

    ಚಿರಂಜೀವಿ ಸರ್ಜಾ ಕೊನೆಯುಸಿರೆಳೆದ ಆಘಾತಕಾರಿ ಸುದ್ದಿ ಎಷ್ಟು ನೋವು ನೀಡಿತ್ತೋ, ಅವರ ಪತ್ನಿ ಮೇಘನಾ ರಾಜ್ ಗರ್ಭಿಣಿ ಎಂಬ ಸುದ್ದಿ ಅವರ ಸಾವನ್ನು ಅರಗಿಸಿಕೊಳ್ಳಲಾಗದಷ್ಟು ನೋವನ್ನು ದುಪ್ಪಟ್ಟುಗೊಳಿಸಿತ್ತು. ಎಲ್ಲರ ಮನ ಮೇಘನಾ ಅವರಿಗಾಗಿ ಮಿಡಿದಿತ್ತು. ಹತ್ತಾರು ವರ್ಷಗಳ ಪ್ರೀತಿಗೆ ಹಠಕಟ್ಟಿ ಮದುವೆಯ ರೂಪ ನೀಡಿದ ಇಬ್ಬರ ಜೋಡಿ ಚಿತ್ರರಂಗದ ಚೆಂದದ ಜೋಡಿಗಳಲ್ಲಿ ಒಂದು. ಚಿರು ಅಗಲಿಕೆಯ ನೋವನ್ನು ಮೇಘನಾ ಅತ್ಯಂತ ಹೃದಯಸ್ಪರ್ಶಿ ಬರಹ ಬರೆದಿದ್ದಾರೆ. ಆ ಬರಹ ಎಂಥಹವರ ಮನಸನ್ನೂ ಕಲಕುತ್ತದೆ. ಅವರ ಭಾವನೆಗಳನ್ನು ಅವರದೇ ಮಾತುಗಳಲ್ಲಿ ಓದಿ..

    ನೀನು ನನ್ನ ಆತ್ಮದ ತುಣುಕು

    ನೀನು ನನ್ನ ಆತ್ಮದ ತುಣುಕು

    ಚಿರು, ನಾನು ಮತ್ತೆ ಮತ್ತೆ ಪ್ರಯತ್ನಿಸಿದೆ. ಆದರೆ ನಿನಗೆ ಏನನ್ನು ಹೇಳಲು ಬಯಸಿದ್ದೆನೋ ಅದನ್ನು ಪದಗಳಲ್ಲಿ ಹೇಳಲು ಆಗುತ್ತಿಲ್ಲ. ನೀನು ನನಗೆ ಏನಾಗಿದ್ದೆ ಎಂಬುದನ್ನು ಜಗತ್ತಿನ ಎಲ್ಲ ಪದಗಳೂ ವರ್ಣಿಸಲು ಸಾಧ್ಯವಿಲ್ಲ. ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಸಂಗಾತಿ, ನನ್ನ ಮಗು, ನನ್ನ ಆತ್ಮವಿಶ್ವಾಸ, ನನ್ನ ಪತಿ- ನೀನು ಈ ಎಲ್ಲದಕ್ಕಿಂತಲೂ ಹೆಚ್ಚು. ನೀನು ನನ್ನ ಆತ್ಮದ ತುಣಕು ಚಿರು.

    ಮಗುವಾಗಿ ನೀನು ನಮ್ಮ ಮಡಿಲಿಗೆ ಬಂದ್ಬಿಡು ಕಂದ: ಕುಟುಂಬಸ್ಥರಿಂದ ಚಿರುಗೆ ಭಾವನಾತ್ಮಕ ಪತ್ರಮಗುವಾಗಿ ನೀನು ನಮ್ಮ ಮಡಿಲಿಗೆ ಬಂದ್ಬಿಡು ಕಂದ: ಕುಟುಂಬಸ್ಥರಿಂದ ಚಿರುಗೆ ಭಾವನಾತ್ಮಕ ಪತ್ರ

    ಆತ್ಮದೊಳಗೆ ಅಗಾಧ ನೋವು

    ಆತ್ಮದೊಳಗೆ ಅಗಾಧ ನೋವು

    ಪ್ರತಿ ಬಾರಿಯೂ ನಾನು ಬಾಗಿಲಿನತ್ತ ಕಣ್ಣು ಹಾಯಿಸುವಾಗಲೆಲ್ಲಾ ಮತ್ತು ನೀನು 'ನಾನು ಮನೆಗೆ ಬಂದೆ' ಎಂದು ಕೂಗುತ್ತಾ ಒಳಗೆ ನಡೆದು ಬಾರದೆ ಇರುವುದನ್ನು ನೋಡಿದಾಗ ನನ್ನ ಆತ್ಮದೊಳಗೆ ಅಗಾಧ ನೋವು ಸ್ಫೋಟಿಸುತ್ತದೆ.

    ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್‌ಗೆ ಗೌರವ ಸಲ್ಲಿಸಿದ ಗೂಗಲ್ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್‌ಗೆ ಗೌರವ ಸಲ್ಲಿಸಿದ ಗೂಗಲ್

    ಭಾವನೆಗಳು ಮುಳುಗುತ್ತಿವೆ...

    ಭಾವನೆಗಳು ಮುಳುಗುತ್ತಿವೆ...

    ಪ್ರತಿ ದಿನವೂ ಪ್ರತಿ ನಿಮಿಷವೂ ನಿನ್ನನ್ನು ಸ್ಪರ್ಶಿಸಲು ಸಾಧ್ಯವಾಗದೆ ಇದ್ದಾಗ ನನ್ನ ಹೃದಯದೊಳಗೆ ಭಾವನೆಗಳು ಮುಳುಗುವಂತೆ ಅನಿಸುತ್ತದೆ. ಸಾವಿರಾರು ಸಾವುಗಳಂತೆ, ನಿಧಾನ ಮತ್ತು ಯಾತನಾಮಯ. ಆದರೆ ಮಾಂತ್ರಿಕತೆಯಂತೆ ನೀನು ನನ್ನ ಸುತ್ತಲೂ ಇದ್ದೀಯ.

    ಚಿರು ಯಾವತ್ತೂ ಚಿರಂಜೀವಿನೇ...: ಹರಿಪ್ರಿಯಾ ಭಾವುಕ ಮಾತುಚಿರು ಯಾವತ್ತೂ ಚಿರಂಜೀವಿನೇ...: ಹರಿಪ್ರಿಯಾ ಭಾವುಕ ಮಾತು

    ಒಂಟಿಯಾಗಿ ಬಿಡಲು ಸಾಧ್ಯವೇ?

    ಒಂಟಿಯಾಗಿ ಬಿಡಲು ಸಾಧ್ಯವೇ?

    ಪ್ರತಿ ಬಾರಿ ನಾನು ದುರ್ಬಳಲು ಎನಿಸಿದಾಗ ರಕ್ಷಕ ದೇವತೆಯಂತೆ ನೀನು ನನ್ನ ಸುತ್ತಲೂ ಇರುತ್ತೀಯ. ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದಿ ಎಂದರೆ ನನ್ನನ್ನು ನಿನ್ನ ಹಿಂದೆ ಒಂಟಿಯಾಗಿ ಬಿಟ್ಟು ಹೋಗಲು ಸಾಧ್ಯವಿಲ್ಲ. ಸಾಧ್ಯವೇ ನಿನಗೆ?

    ಮಗುವಿನ ರೂಪದಲ್ಲಿ ನೋಡಲು ಕಾತರ

    ಮಗುವಿನ ರೂಪದಲ್ಲಿ ನೋಡಲು ಕಾತರ

    ನಮ್ಮ ಪ್ರೀತಿಯ ಸಂಕೇತವಾದ ನಮ್ಮ ಪುಟಾಣಿ ನನಗೆ ನಿನ್ನ ಅಮೂಲ್ಯ ಕಾಣಿಕೆ. ಈ ಸಿಹಿಯಾದ ಪವಾಡಕ್ಕಾಗಿ ನಾನು ಎಂದೆಂದಿಗೂ ನಿನಗೆ ಋಣಿ. ನಿನ್ನನ್ನು ನಮ್ಮ ಮಗುವಿನ ರೂಪದಲ್ಲಿ ಮತ್ತೆ ಭೂಮಿಗೆ ಮರಳಿ ತರುವ ಗಳಿಗೆಗಾಗಿ ಕಾಯಲು ಸಾಧ್ಯವಾಗುತ್ತಿಲ್ಲ. ನಿನ್ನನ್ನು ಮತ್ತೆ ಹಿಡಿದುಕೊಳ್ಳುವುದನ್ನು ಕಾಯಲಾಗುತ್ತಿಲ್ಲ. ನಿನ್ನ ನಗುವನ್ನು ಮತ್ತೆ ನೋಡಲು ಕಾಯಲಾಗುತ್ತಿಲ್ಲ.

    ಚಿರು ಮಣ್ಣಾದ ಸ್ಥಳದಲ್ಲಿ ಭವ್ಯ ಮಂಟಪ ನಿರ್ಮಿಸಲಿದ್ದಾರೆ ಧ್ರುವ ಸರ್ಜಾಚಿರು ಮಣ್ಣಾದ ಸ್ಥಳದಲ್ಲಿ ಭವ್ಯ ಮಂಟಪ ನಿರ್ಮಿಸಲಿದ್ದಾರೆ ಧ್ರುವ ಸರ್ಜಾ

    ನನ್ನ ಉಸಿರಲಿ ನೀನಿರುತ್ತೀಯಾ

    ನನ್ನ ಉಸಿರಲಿ ನೀನಿರುತ್ತೀಯಾ

    ಇಡೀ ಕೊಠಡಿಯನ್ನು ಬೆಳಗಿಸುವ ನಿನ್ನ ಹೂನಗುವನ್ನು ಕೇಳಲು ಕಾಯಲು ಆಗುತ್ತಿಲ್ಲ. ನಾನು ನಿನಗಾಗಿ ಕಾಯುತ್ತಿದ್ದೇನೆ. ಇನ್ನೊಂದು ಕಡೆ ನೀನು ನನಗಾಗಿ ಕಾದಿರು. ನಾನು ಉಸಿರಾಡುವವರೆಗೂ ನೀನು ಜೀವಿಸುತ್ತಿರುತ್ತೀಯ, ನೀನು ನನ್ನೊಳಗೆ ಇದ್ದೀಯ. ಐ ಲವ್ ಯೂ. ನನ್ನ ಚಿರು ಎಂದೆಂದಿಗೂ...

    English summary
    Meghana raj shares emotional post on her husband chiranjeevi sarja for the first time after his death. Read on.
    Thursday, June 18, 2020, 12:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X