ಜೂ.ಚಿರುಗೆ ಫೈಟಿಂಗ್ ಹೇಳಿಕೊಡುತ್ತಿರುವ ಅರ್ಜುನ್ ಸರ್ಜಾ; ಫೋಟೋ ಶೇರ್ ಮಾಡಿದ ಮೇಘನಾ

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಮುದ್ದಾದ ಪುತ್ರ ಜ್ಯೂ.ಚಿರು ಫೋಟೋ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಆಗಾಗ ಮೇಘನಾ ಮಗನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಫೋಟೋ ಅಥವಾ ವಿಡಿಯೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುವ ಜೊತೆಗೆ ಲೈಕ್ಸ್ ಮತ್ತು ಕಾಮೆಂಟ್ ಗಳು ಹರಿದುಬರುತ್ತಿರುತ್ತದೆ.

ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದ ಮೇಘನಾಗೆ ಜೂ. ಚಿರು ಸಂತೋಷವನ್ನು ಹೊತ್ತುತಂದಿದ್ದಾನೆ. ಮಗನ ಆಗಮನ ಮೇಘನಾ ಬದುಕಲ್ಲಿ ಹೊಸ ಬೆಳಕು ಮೂಡಿಸಿದೆ. ಸದ್ಯ ಜೂ. ಚಿರು ಜನಿಸಿ 10 ತಿಂಗಳು ತುಂಬಿದೆ. ಮಗನ ಆರೈಕೆ ಮಾಡುತ್ತಾ ಪುತ್ರನ ಜೊತೆಯೇ ಹೆಚ್ಚು ಸಮಯ ಕಳೆಯುತ್ತಿರುವ ಮೇಘನಾ ಇದೀಗ ಮತ್ತೊಂದು ಕ್ಯೂಟ್ ಫೋಟೋ ಶೇರ್ ಮಾಡಿದ್ದಾರೆ.

ಚಿರಂಜೀವಿ ಸರ್ಜಾ ಮಾವ, ಖ್ಯಾತ ನಟ ಅರ್ಜುನ್ ಸರ್ಜಾ ಜೊತೆ ಜೂ.ಚಿರು ಆಟವಾಡುತ್ತಿರುವ ಫೋಟೋವನ್ನು ಮೇಘನಾ ಹಂಚಿಕೊಂಡಿದ್ದಾರೆ. ಆಗಾಗ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದ ಅರ್ಜುನ್ ಸರ್ಜಾ ಇದೀಗ ನೇರವಾಗಿ ಮನೆಗೆ ಬಂದು ಚಿರು ಪುತ್ರನನ್ನು ಎತ್ತಿ ಮುದ್ದಾಡಿದ್ದಾರೆ. ಜೂ.ಚಿರು ಜೊತೆ ಅರ್ಜುನ್ ಸರ್ಜಾ ಕೆಲವು ಆಟವಾಗಿ ಸಮಯ ಕಳೆದು. ಮುದ್ದಾದ ಮಗು ಜೊತೆ ಅರ್ಜುನ್ ಸರ್ಜಾ ಇರುವ ಫೋಟೋ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Meghana Raj shares Jr.Chiru photo with Arjun Sarja

ಅಂದಹಾಗೆ ಈ ಫೋಟೋವನ್ನು ಅರ್ಜುನ್ ಸರ್ಜಾ ಹುಟ್ಟುಹಬ್ಬದ ದಿನ ಮೇಘನಾ ಶೇರ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಅರ್ಜುನ್ ಸರ್ಜಾ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 59 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಅರ್ಜುನ್ ಸರ್ಜಾಗೆ ಅನೇಕರು ವಿಶ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಈ ಬಾರಿಯ ಹುಟ್ಟುಹಬ್ಬದ ವಿಶ್ ಗಳಲ್ಲಿ ಜೂ.ಚಿರು ವಿಶ್ ವಿಶೇಷವಾಗಿತ್ತು.

ಜೂ.ಚಿರು ಜೊತೆ ಅರ್ಜನ್ ಸರ್ಜಾ ಫೈಟಿಂಗ್ ಮಾಡುವ ಹಾಗೆ ಆಕ್ಷನ್ ಮಾಡಿದ್ದಾರೆ. ಅರ್ಜುನ್ ಸರ್ಜಾ ಆಕ್ಷನ್ ಅನ್ನು ಚಿರು ಪುತ್ರ ಅಷ್ಟೇ ಗಂಭೀರವಾಗಿ ವೀಕ್ಷಿಸುತ್ತಿದೆ. ಈ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಈ ಫೋಟೋ ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ ಮೇಘನಾ.

ಇತ್ತೀಚೆಗೆ ಮೇಘನಾ ಮಗನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದಕ್ಕೂ ಮೊದಲು ಅಪ್ಪನ ಡ್ಯಾನ್ಸ್ ವಿಡಿಯೋ ನೋಡುವುದರಲ್ಲಿ ಜೂ.ಚಿರು ಬ್ಯುಸಿಯಾಗಿದ್ದ ವೀಡಿಯೋವನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ಗಳಿಗೆ ಅಭಿಮಾನಿಗಳು ಸಹ ಮೆಚ್ಚುಗೆಯ ಕಮೆಂಟ್ ಮಾಡಿ, ಲೈಕ್ ಮೂಲಕ ಪ್ರೀತಿ ತೋರಿಸಿದ್ದರು.

Meghana Raj shares Jr.Chiru photo with Arjun Sarja

ಇನ್ನೂ ಪುತ್ರನಿಗೆ 9 ತಿಂಗಳು ತುಂಬಿದ ದಿವನೇ ಶೂಟಿಂಗ್ ಗೆ ತೆರಳುವ ಮೂಲಕ ವರ್ಷದ ಬಳಿಕ ಕ್ಯಾಮರಾ ಎದುರಿಸಿದ್ದರು. ಮೇಘನಾ ಮತ್ತೆ ಚಿತ್ರೀಕರಣ ಮರಳಿದ್ದ ಫೋಟೋವನ್ನು ಶೇರ್ ಮಾಡಿದ್ದರು. ಸುಮಾರು ಒಂದೂವರೆ ವರ್ಷದ ಬಳಿಕ ಮೇಘನಾ ನಟನೆಯತ್ತ ಮುಖ ಮಾಡಿರುವುದು ಅಭಿಮಾನಿಗಳಲ್ಲಿ ಅವರ ಸ್ನೇಹಿತರಲ್ಲಿ ಸಂತಸ ಮೂಡಿಸಿದೆ. ಮದುವೆ ಬಳಿಕ ಸಂಸಾರದ ಕಡೆ ಗಮನಕೊಟ್ಟಿದ್ದ ಮೇಘನಾ ನಂತರ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಮಗನಿಗೆ 9 ತಿಂಗಳು ತುಂಬಿದೆ. ಈ ಸಂಭ್ರದಲ್ಲಿ ಚಿತ್ರೀಕರಣಕ್ಕೆ ಹಾಜರಾಗಿದ್ದರು.

ಖುಷಿಯ ಸುದ್ದಿಯನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕ್ಯಾಮರಾ ಮುಂದೆ ನಿಂತಿರುವ ಫೋಟೋ ಶೇರ್ ಮಾಡುವ ಜೊತೆಗೆ, "ಜೂ. ಚಿರುಗೆ ಒಂಬತು ತಿಂಗಳು ತುಂಬಿದೆ. ನಾನು ವರ್ಷದ ನಂತರ ಚಿತ್ರೀಕರಣಕ್ಕೆ ಹಾಜರಾಗುವ ಮೂಲಕ ಸಂಭ್ರಮಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದರು. ಆದರೆ ಇದು ಸಿನಿಮಾನಾ ಅಥವಾ ಜಾಹೀರಾತು ಚಿತ್ರೀಕರಣನಾ ಎನ್ನುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ.

More from Filmibeat

English summary
Actress Meghana Raj shares Jr.Chiru photo with Arjun Sarja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X