For Quick Alerts
  ALLOW NOTIFICATIONS  
  For Daily Alerts

  ಹೊಸ ಹೆಜ್ಜೆ ಇಡಲು ಮೇಘನಾ ರಾಜ್ ಸಜ್ಜು!

  By Bhagya.s
  |

  ಮೇಘನಾ ರಾಜ್ ಮಗು ಆದ ಬಳಿಕ ಕೆಲವು ದಿನಗಳು ಬ್ರೇಕ್ ತೆಗೆದುಕೊಂಡು, ಮತ್ತೆ ಬಣ್ಣ ಹಚ್ಚಿದ್ದಾರೆ. ಕೆಲವು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಮೇಘನಾ ಕೆಲವು ದಿನಗಳ ಭಾಗಿ ಆಗಿದ್ದರು.

  ರಿಯಾಲಿಟಿ ಶೋ ಮುಗಿಸಿ ಮೇಘನಾ ರಾಜ್ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಕಳೆದ ವರ್ಷ ಅನೌನ್ಸ್ ಮಾಡಿದ್ದ ಸಿನಿಮಾಗಳು ಕಿಕ್ ಸ್ಟಾರ್ಟ್ ಆಗಿವೆ. ಈ ಬಗ್ಗೆ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

  ಇದೀಗ ಮೇಘನಾ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ರಿಯಾಲಿಟಿ ಶೋ ಮುಗಿಸಿ ಮೇಘನಾ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈ ಬಗ್ಗೆ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಮೇಘನಾ ರಾಜ್ "ಜುಲೈ 7, ಒಂದು ಸಣ್ಣ ಆಲೋಚನೆ ನಿಜವಾಯಿತು. ನಾವು ಪ್ರಾಜೆಕ್ಟ್ ಅಕ್ಟೋಬರ್ 17, 2021ರಲ್ಲಿ ಅನೌನ್ಸ್ ಮಾಡಿದ್ದೆವು. ಸಾಕಷ್ಟು ಚರ್ಚೆಗಳ ನಂತರ, ಸ್ಕ್ರಿಪ್ಟ್ ಮರುನಿರ್ಮಾಣ, ಲುಕ್ ಟೆಸ್ಟ್ ನಂತರ ಒಟ್ಟಾಗಿ ಸೇರಿ ಕನಸನ್ನು ಪ್ರಾರಂಭಿಸಿದ್ದೇವೆ. ಈ ಸಿನಿಮಾ ನನಗೆ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಕ್ಯಾಮೆರಾ, ರೋಲಿಂಗ್, ಆಕ್ಷನ್" ಎಂದು ಬರೆದುಕೊಂಡಿದ್ದಾರೆ.

  ಮೇಘನಾ ರಾಜ್ ಹೊಸ ಸಿನಿಮಾಗೆ ಅನೇಕರು ಶುಭಾಶಯ ತಿಳಿಸುತ್ತಿದ್ದಾರೆ. ಅಭಿಮಾನಿಗಳು ಮತ್ತು ಸಿನಿ ಗಣ್ಯರು ಶುಭಕೋರಿದ್ದಾರೆ. ಅಂದಹಾಗೆ ಮೇಘನಾ ಹೊಸ ಸಿನಿಮಾದಲ್ಲಿ ಯಾವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಮೇಘನಾ ಕೊನೆಯದಾಗಿ ಕುರುಕ್ಷೇತ್ರ ಮತ್ತು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾದಲ್ಲಿ ನಟಿಸಿದ್ದರು. ಕುರುಕ್ಷೇತ್ರ ಸಿನಿಮಾದಲ್ಲಿ ಭಾನುಮತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದ ಬಳಿಕ ಮೇಘನಾ ಮೊದಲ ಬಾರಿಗೆ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.

  ಮಗು ಆದ ಬಳಿಕ ಸದ್ಯ ಒಂದೊಂದೇ ಕಾರ್ಯಗಳನ್ನು ಆರಂಭಿಸಿದ್ದಾರೆ. ಎಲ್ಲರೂ ಸಂತೋಷವಾಗಿ ಇರುವುದು ಎಂದರೆ ಚಿರುಗೆ ಬಲು ಇಷ್ಟ ಎಂದು ಮೇಘನಾ ಹಲವು ಬಾರಿ ‌ಹೇಳಿಕೊಂಡಿದ್ದಾರೆ. ಅಂತೆಯೇ ಮೇಘನಾ ಮೂಲಕ ಎಲ್ಲರ ಮುಂದೆ ಬಂರಲಿದ್ದಾರೆ.

  ಇನ್ನು ಸಾಮಾಜಿಕ ಜಾಲತಾಣದಲ್ಲಿ ಮೇಘನಾ ರಾಜ್ ಸದಾ ಆ್ಯಕ್ಟಿವ್ ಆಗಿರುತ್ತಾರೆ. ಮಗ ರಾಯನ್ ರಾಜ್ ಬಗ್ಗೆ ಹಲವು ಪೋಸ್ಟ್‌ಗಳನ್ನು ಹಾಕುತ್ತಾ ಇರುತ್ತಾರೆ. ಜೊತೆಗೆ ರಾಯನ್ ಫೊಟೋಗಳನ್ನು ಹಂಚಿಕೊಳ್ಳುವ ಮೂಲಕ ರಾಯನ್ ಚಟುವಟಿಕೆಗಳ ಬಗ್ಗೆ ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

  English summary
  Meghana Raj Started Her New Film soon, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X