twitter
    For Quick Alerts
    ALLOW NOTIFICATIONS  
    For Daily Alerts

    ಸಣ್ಣ ತಪ್ಪಿನಿಂದಾಗಿ ಮತ್ತೆ ಕೊರೊನಾ ಭಯಕ್ಕೆ ಸಿಲುಕಿದ ಮೇಘನಾ ರಾಜ್

    |

    ನಟಿ ಮೇಘನಾ ರಾಜ್ ಮತ್ತೆ ಕೊರೊನಾ ವೈರಸ್‌ ಆತಂಕಕ್ಕೆ ಸಿಲುಕಿದ್ದರು. ಇನ್ನೂ ವರ್ಷ ತುಂಬದ ಪುಟ್ಟ ಮಗು ಹೊಂದಿರುವ ಮೇಘನಾ, ತಾವು ತೋರಿದ ಸಣ್ಣ ಅಜಾಗರೂಕತೆಯಿಂದಾಗಿ ಸಾಕಷ್ಟು ಆತಂಕ ಎದುರಿಸಬೇಕಾಗಿ ಬಂದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    Recommended Video

    ಕೊರೊನಾ ಭಯಕ್ಕೆ ಮೇಘನಾ ಸಿಲುಕಿಕೊಂಡಿದ್ದು ಹೇಗೆ? | Filmibeat Kannada

    'ನಾನು ಮಾಡಿದ ಸಣ್ಣ ತಪ್ಪಿನಿಂದಾಗಿ ಮತ್ತೊಮ್ಮೆ ಕೊರೊನಾ ಭಯ ಅನುಭವಿಸುವಂತಾಯಿತು. ಇತ್ತೀಚೆಗೆ ನನ್ನ ಗೆಳೆಯರೊಬ್ಬರೊಂದಿಗೆ ಸಂಪರ್ಕದಲ್ಲಿದ್ದೆ. ಆದರೆ ಅವರಿಗೆ ಕೊರೊನಾ ಪಾಸಿಟಿವ್ ಆಯಿತು. ಕೂಡಲೇ ನಾನು ಸೆಲ್ಫ್ ಐಸೋಲೇಷನ್‌ಗೆ ಒಳಗಾದೆ. ಆದರೆ ಆ ಸಮಯದಲ್ಲಿ ನನ್ನ ಸಣ್ಣ ಮಗು, ನನ್ನ ತಂದೆ-ತಾಯಿಯ ಆರೋಗ್ಯದ ಬಗ್ಗೆ ಯೋಚಿಸಿ ತೀವ್ರವಾಗಿ ಆತಂಕಗೊಂಡಿದ್ದೆ. ತೀವ್ರ ಮಾನಸಿಕ ಒತ್ತಡ ಅನುಭವಿಸಿದೆ' ಎಂದಿದ್ದಾರೆ ಮೇಘನಾ ರಾಜ್.

    ನನಗೆ ಯಾವುದೇ ರೋಗಲಕ್ಷಣಗಳು ಇರಲಿಲ್ಲ ಆದರೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಂಡೆ. ನೆಗೆಟಿವ್ ವರದಿ ಬಂತು. ಆದರೆ ಐಸೋಲೇಷನ್‌ನಲ್ಲಿದ್ದ ಕೆಲವು ದಿನಗಳು ವಿಪರೀತ ಆತಂಕಕ್ಕೆ ಒಳಗಾಗಿದ್ದೆ ಎಂದಿದ್ದಾರೆ ಮೇಘನಾ ರಾಜ್.

    ಡಿಸೆಂಬರ್‌ನಲ್ಲಿ ನಾವೆಲ್ಲ ಬಹುವಾಗಿ ಕಷ್ಟಪಟ್ಟೆವು: ಮೇಘನಾ ರಾಜ್

    ಡಿಸೆಂಬರ್‌ನಲ್ಲಿ ನಾವೆಲ್ಲ ಬಹುವಾಗಿ ಕಷ್ಟಪಟ್ಟೆವು: ಮೇಘನಾ ರಾಜ್

    ಕಳೆದ ಡಿಸೆಂಬರ್‌ನಲ್ಲಿ ನನ್ನ ತಂದೆ-ತಾಯಿ, ನನಗೆ ಕೋವಿಡ್ ಪಾಸಿಟಿವ್ ಆಗಿತ್ತು. ಆ ಸಮಯದಲ್ಲಿ ಕೊರೊನಾ ನಮ್ಮನ್ನು ಹೈರಾಣ ಮಾಡಿಬಿಟ್ಟಿತ್ತು. ಆ ಸಂಕಷ್ಟದ ಸ್ಥಿತಿಯಲ್ಲಿ ನಾವುಗಳು ಬಹಳ ಆತಂಕಕ್ಕೆ ಒಳಗಾಗಿದ್ದೆವು, ಸಾಕಷ್ಟು ಮಾನಸಿಕ ಒತ್ತಡವನ್ನು ಅನುಭವಿಸಿದ್ದೆವು ಎಂದಿದ್ದಾರೆ ಮೇಘನಾ.

    ''ಒಬ್ಬೊಬ್ಬರ ದೇಹದಲ್ಲಿ ಒಂದೊಂದು ರೀತಿ ವರ್ತಿಸುತ್ತದೆ ಕೊರೊನಾ''

    ''ಒಬ್ಬೊಬ್ಬರ ದೇಹದಲ್ಲಿ ಒಂದೊಂದು ರೀತಿ ವರ್ತಿಸುತ್ತದೆ ಕೊರೊನಾ''

    ''ಕೊರೊನಾ ಒಬ್ಬರ ದೇಹದಲ್ಲಿ ಒಂದೊಂದು ರೀತಿ ವರ್ತಿಸುತ್ತದೆ. ಕೆಲವರಿಗೆ ಏನೂ ಹಾನಿ ಮಾಡುವುದಿಲ್ಲ. ಕೆಲವರನ್ನು ಬಹಳ ಕಾಡಿಸುತ್ತದೆ. ಕೆಲವರ ಜೀವಕ್ಕೇ ಕುತ್ತು ತರುತ್ತದೆ. ರೋಗ ಬಂದವರನ್ನು, ಅವರ ಸುತ್ತ-ಮುತ್ತ ಇರುವವರನ್ನು, ಪ್ರೀತಿಪಾತ್ರರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತಗೊಳಿಸುತ್ತದೆ. ನಾವು ನಮ್ಮ ಜಾಗೃತೆಯಲ್ಲಿರದೆ ಬೇರೆ ದಾರಿಯೇ ಇಲ್ಲ' ಎಂದಿದ್ದಾರೆ ಮೇಘನಾ.

    'ನಮ್ಮಿಂದ ಬೇರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು'

    'ನಮ್ಮಿಂದ ಬೇರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು'

    ''ನಮ್ಮಿಂದ ಕೋವಿಡ್ ಹರಡದಂತೆ ನಾವು ಎಚ್ಚರಿಕೆ ವಹಿಸಬೇಕಿದೆ. ನಮ್ಮಿಂದಾಗಿ ಯಾರೋ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹರಡಿ ಅವರಿಗೆ ಆಗುವ ತೊಂದರೆಗೆ ನಾವು ಕಾರಣರಾಗುವುದು ಬೇಡ' ಎಂದಿದ್ದಾರೆ ಮೇಘನಾ ರಾಜ್.

    ಡಿಸೆಂಬರ್‌ನಲ್ಲಿ ಮೇಘನಾ ಹಾಗೂ ಪೋಷಕರಿಗೆ ಕೋವಿಡ್ ಆಗಿತ್ತು

    ಡಿಸೆಂಬರ್‌ನಲ್ಲಿ ಮೇಘನಾ ಹಾಗೂ ಪೋಷಕರಿಗೆ ಕೋವಿಡ್ ಆಗಿತ್ತು

    ನಟಿ ಮೇಘನಾ ರಾಜ್ ಹಾಗೂ ಅವರ ಪೋಷಕರಾದ ನಟ ಸುಂದರ್‌ ರಾಜ್, ಪ್ರಮೀಳಾ ಜೋಷಾಯ್ ಅವರಿಗೆ ಡಿಸೆಂಬರ್ ತಿಂಗಳಲ್ಲಿ ಕೊರೊನಾ ಪಾಸಿಟಿವ್ ಆಗಿತ್ತು. ಮೇಘನಾಗೆ ಕೊರೊನಾ ಪಾಸಿಟಿವ್ ಆದಾಗ ಮೇಘನಾ ಮಗುವಿಗೆ ಕೇವಲ ಎರಡು ತಿಂಗಳಷ್ಟೆ ಆಗಿತ್ತು. ಆಗ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಕುಟುಂಬದವರು ತೀವ್ರ ಆತಂಕಕ್ಕೆ ಸಿಲುಕಿದ್ದರು.

    English summary
    Actress Meghana Raj talked about how she was again experienced COVID 19 scare. She and her parents were tested COVID positive in last December.
    Wednesday, April 21, 2021, 18:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X