ಚಿರು ಒಪ್ಪಿದರೆ ಮಾತ್ರ 'ಆ ವ್ಯಕ್ತಿ'ಯ ಜೊತೆ ನನ್ನ ಮದುವೆ ಸಾಧ್ಯ- ಮೇಘನಾ ರಾಜ್...!

2020ರ ಜೂನ್ ನಲ್ಲಿ ಯಾರು ನಂಬಲು ಸಾಧ್ಯವಿಲ್ಲದಂತಾ ವಿಚಾರ ಬರಸಿಡಿಲಿನಂತೆ ಬಂದೆರಗಿತ್ತು. ಬದುಕಿ ಬಾಳಬೇಕಿದ್ದ ಚಿರು ಇನ್ನಿಲ್ಲ ಎಂಬ ಸುದ್ದಿ ಅದು. ಮೇಘನಾ ರಾಜ್ ಆಕ್ರಂದನ ಅವತ್ತು ಮುಗಿಲು ಮುಟ್ಟಿತ್ತು. ತುಂಬು ಗರ್ಭಿಣಿಯಾಗಿದ್ದ ಮೇಘನಾ ಕಣ್ಣೀರು ಕಂಡು ಕರುನಾಡು ಕಣ್ಣೀರು ಹಾಕಿತ್ತು.

ಆದರೆ ಚಿರು ಕಳೆದುಕೊಂಡ ನೋವು ಇನ್ನೂ ಕಡಿಮೆಯಾಗಿರಲಿಲ್ಲ. ಅಷ್ಟರಲ್ಲಿಯೇ ಮೇಘನಾ ರಾಜ್ ಮತ್ತೊಂದು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ಒಂದು ವರ್ಗ ತೇಲಿ ಬಿಡ್ತು. ನೋಡ ನೋಡುತ್ತಾ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಶುರುವಾಯಿತು. ಕೆಲವರು ಮೇಘನಾ ರಾಜ್ ಮತ್ತೊಂದು ಮದುವೆಯಾಗಬೇಕು ಅಂದರು ಮತ್ತೂ ಕೆಲವರು ಮೇಘನಾ ರಾಜ್ ಚಿರುನ ಬಹುಬೇಗ ಮರೆತರು ಅಂದರು. ಈ ಎಲ್ಲ ವಿಚಾರಗಳ ಕುರಿತು ಮೇಘನಾ ರಾಜ್ ಮೌನ ಮುರಿದಿದ್ದಾರೆ. ಮುಕ್ತವಾಗಿ ಮಾತನಾಡಿದ್ದಾರೆ.

meghana-raj-talks-about-her-second-marriage-and-the-importance-of-a-father-figure-in-her-sons-life

ಹೌದು, ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಎರಡನೇ ಮದುವೆಯ ಕುರಿತು ಮಾತನಾಡಿರುವ ಮೇಘನಾ ರಾಜ್ ಜನ ಹೀಗೆ ಮಾತನಾಡುವುದು ಅಂತ ನಾವು ಒಪ್ಪಿಕೊಳ್ಳಬೇಕು ಯಾಕೆಂದರೆ ನನ್ನ ಬಗ್ಗೆ ಮಾತ್ರವಲ್ಲ ವಿಜಯ್ ರಾಘವೇಂದ್ರ ವಿಚಾರದಲ್ಲಿ ಕೂಡ ಜನ ಹೀಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ನಮಗೆ ಸಮಾಧಾನವಾಗುತ್ತೆ ಎಂದು ಅಂದುಕೊಂಡು ಅವರು ಹೀಗೆ ಮಾತನಾಡುತ್ತಾರಾ ಅಥವಾ ನೋವಲ್ಲಿರುವ ನಮಗೆ ಇನ್ನೂ ನೋವು ಕೋಡಬೇಕು ಎಂಬ ಉದ್ದೇಶದಲ್ಲಿ ಮಾತನಾಡುತ್ತಾರಾ, ಟ್ರೋಲ್ ಮಾಡುತ್ತಾರಾ ಗೊತ್ತಿಲ್ಲ, ಆದರೆ ಅದೆಲ್ಲ ನೋಡಿದಾಗ ನನಗೆ ಸ್ವಲ್ಪ ಮನರಂಜನೆ ಸಿಗುತ್ತೆ ಎಂದು ಮೇಘನಾ ಹೇಳಿದ್ದಾರೆ.

ಇನ್ನು ರಾಯನ್ ಕಣ್ಣೇದುರು ದೈಹಿಕವಾಗಿ ತಂದೆಯ ಸ್ಥಾನದಲ್ಲಿ ಒಬ್ಬರು ಇರಬೇಕಿತ್ತು ಎಂಬ ಆಲೋಚನೆ ನನಗೆ ಬಂದಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತೆ ಯಾಕೆಂದರೆ ನನ್ನ ಮಗ ಚಿರು ಬಗ್ಗೆ ಮಾತನಾಡದ ದಿನ ಇಲ್ಲ ಎಂದು ಹೇಳಿರುವ ಮೇಘನಾ, ಚಿರು ಹಾಡುಗಳನ್ನು ರಾಯನ್ ನೋಡುತ್ತಾನೆ, ಸಿನಿಮಾಗಳನ್ನು ನೋಡುತ್ತಾನೆ, ಅಪ್ಪ ಅಂದರೆ ಅದು ಚಿರು ಎಂದು ಅವನಿಗೆ ಗೊತ್ತು ಎಂದು ಹೇಳಿದ್ದಾರೆ.

ನೀನು ನಿನ್ನ ಅಪ್ಪನ ತರಹನೇ ಮಾಡ್ತೀಯಾ ಎಂದು ನಾನು ಅವನಿಗೆ ಹೇಳುತ್ತಲೇ ಇರುತ್ತೀನಿ ಎಂದಿರುವ ಮೇಘನಾ ತಂದೆ ಅಂತ ಒಬ್ಬರು ನನ್ನ ಜೀವನದಲ್ಲಿ ಇದ್ದಾರೆ ನಮ್ಮ ಸುತ್ತ ಮುತ್ತ ಇದ್ದಾರೆ ಎನ್ನುವುದು ರಾಯನ್‌ಗೆ ಗೊತ್ತು ಆದರೆ ದೈಹಿಕವಾಗಿ ಅವನು ನೋಡಿಲ್ಲ ಅಷ್ಟೇ ಎಂದು ಹೇಳಿದ್ದಾರೆ. ಫಿಸಿಕಲ್ ಫಿಗರ್ ನಮ್ಮ ನಡುವೆ ಇದ್ದರೆ ಚೆನ್ನಾಗಿರುತ್ತೆ ಎನ್ನುವ ಆಲೋಚನೆ ನನಗೆ ಆಗಾಗ ಬಂದಿದೆ ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ಮುಂಬರುವ ದಿನಗಳಲ್ಲಿ ಎರಡನೇ ಮದ್ವೆಯಾಗ್ತಾರಾ ಹಾಗೊಂದು ವೇಳೆ ಆದರೆ ಸಮಾಜ ಒಪ್ಪಿಕೊಳ್ಳುತ್ತಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಮೇಘನಾ ಸಮಾಜ ಒಪ್ಪಿಕೊಳ್ಳುತ್ತಾ ಅಥವಾ ನನ್ನ ನಿರ್ಧಾರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಒತ್ತಡ ಇದ್ದೇ ಇದೆ ಎಂದು ಹೇಳಿದ್ದಾರೆ. ನನಗೆ ಇರುವ ಇಮೇಜ್ ನನ್ನದಲ್ಲ ಬದಲಿಗೆ ಅದು ನನ್ನ ಸುತ್ತ ಮುತ್ತ ಇರುವ ವ್ಯಕ್ತಿಗಳಿಂದ, ಅಭಿಮಾನಿಗಳಿಂದ, ಸೋಶಿಯಲ್ ಮೀಡಿಯಾ ಫ್ಯಾಮಿಲಿಯಿಂದ ಸೃಷ್ಟಿಯಾಗಿದ್ದು ಹೀಗಾಗಿ ಬೇರೆ ರೀತಿ ಯೋಚನೆ ಮಾಡಬೇಕು ಎಂದು ಅಂದುಕೊಂಡರು ಕೂಡ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಮೇಘನಾ ತೀರಾ ಇತ್ತೀಚೆಗೆ ನನ್ನಂತೆಯೇ ನೋವು ಅನುಭವಿಸಿರುವ ಚಿತ್ರರಂಗದಲ್ಲಿನ ವ್ಯಕ್ತಿಯೊಬ್ಬರು ಅಕ್ಕನ ಸ್ಥಾನದಲ್ಲಿ ನಿಂತು ನನಗೆ ಸಲಹೆ ನೀಡಿದರು. ನೀನು ಖುಷಿಯಾಗಿರುವುದನ್ನು ನೋಡಬೇಕು ಎಂದು ಹೇಳಿದರು ಆಗ ನಮಗೆ ಅರಿವು ಇಲ್ಲದೆ ಮದುವೆ ಯೋಚನೆ ಬರುತ್ತೆ ಎಂದು ಹೇಳಿದ್ದಾರೆ.

Take a Poll

ಹಾಗಂಥ ಮೇಘನಾ ರಾಜ್ ಎರಡನೇ ಮದುವೆಯಾಗುವುದಿಲ್ಲ ಅಂತ ಅಲ್ಲ. ಹಾಗೊಂದು ವೇಳೆ ಚಿರು ಹರಸಿ ಹಾರೈಸಿದರೆ ಒಪ್ಪಿಗೆ ನೀಡಿದರೆ ಖಂಡಿತ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ ಮೇಘನಾ. ಈ ಕುರಿತು ಮಾತನಾಡಿರುವ ಮೇಘನಾ ರಾಜ್ ಮುಂಬರುವ ದಿನಗಳಲ್ಲಿ ನನ್ನ ಬದುಕಿನಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಬಂದರೆ, ಚಿರುಗೆ ಆ ವ್ಯಕ್ತಿ ನನಗೆ ಸೂಕ್ತ ಎಂದು ಅನಿಸಿದರೆ ಖುದ್ದು ಚಿರು ಅವರೇ ಮುಂದುವರೆಸುತ್ತಾರೆ ಇಲ್ಲದಿದ್ದರೆ ಚಿರು ತಡೆಯುತ್ತಾರೆ ಎಂದು ಹೇಳಿದ್ದಾರೆ. ನಾನು ಹೀಗೆ ಇರುವುದು ಬೆಸ್ಟ್ ಎಂದು ಅನಿಸಿದರೆ ಚಿರು ಅದನ್ನು ನೋಡಿಕೊಳ್ಳುತ್ತಾರೆ ಎಂದಿರುವ ಮೇಘನಾ ನನಗೆ ದೇವರ ಮೇಲೆ ನಂಬಿಕೆ ಇದೆ, ನನ್ನ ಸುತ್ತ ಮುತ್ತ ಇರುವ ಎನರ್ಜಿಗಳ ಮೇಲೆ ನಂಬಿಕೆ ಇದೆ, ಚಿರುನ ಕಳೆದುಕೊಂಡ ನಂತರ ನನ್ನ ಬದುಕಿನಲ್ಲಿ ಕೆಲವು ಅಲ್ಲ ಹಲವು ಪವಾಡಗಳು ನಡೆದಿವೆ ಎಂದು ಹೇಳಿದ್ದಾರೆ. ನನಗೆ ದೇವರ ಆಶೀರ್ವಾದ ಸಿಕ್ಕಿದೆ ಎಂದು ಹೇಳಿದ್ದಾರೆ. ಚಿರು ದೇವರ ಹತ್ತಿರ ಹೋಗಿದ್ದಾರೆ, ಹೀಗಾಗಿ ಅಲ್ಲಿಂದನೇ ಚಿರು ನನಗೆ ಸದಾ ಒಳ್ಳೆಯದನ್ನು ಬಯಸುತ್ತಾರೆ, ಒಳ್ಳೆಯದನ್ನೇ ನನಗೆ ಮಾಡುತ್ತಾರೆ ಎಂದು ಕೂಡ ಮೇಘನಾ ರಾಜ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X