»   » ದುರ್ಯೋಧನ ದರ್ಶನ್ ಮಡದಿ ಭಾನುಮತಿ ಲುಕ್ ಬಹಿರಂಗ

ದುರ್ಯೋಧನ ದರ್ಶನ್ ಮಡದಿ ಭಾನುಮತಿ ಲುಕ್ ಬಹಿರಂಗ

Posted By:
Subscribe to Filmibeat Kannada

'ಕುರುಕ್ಷೇತ್ರ' ಸಿನಿಮಾದಲ್ಲಿ ದುರ್ಯೋಧನ ಮಡದಿ ಭಾನುಮತಿ ಪಾತ್ರದಲ್ಲಿ ನಟಿ ಮೇಘನಾ ರಾಜ್ ನಟಿಸುತ್ತಿರುವ ಸುದ್ದಿ ಇತ್ತೀಚಿಗಷ್ಟೆ ಹೊರಬಂದಿತ್ತು. ಅದೇ ರೀತಿ ಇದೀಗ ಚಿತ್ರದ ಶೂಟಿಂಗ್ ನಲ್ಲಿ ಮೇಘನಾ ಭಾಗಿಯಾಗಿದ್ದಾರೆ.

ಕುರುಕ್ಷೇತ್ರದ 'ಬಿಗ್' ನ್ಯೂಸ್: ದರ್ಶನ್ ಗೆ ಕನ್ನಡದ ಸ್ಟಾರ್ ನಟಿ ನಾಯಕಿ.!

ಚಿತ್ರೀಕರಣದ ವೇಳೆ ನಟ ದರ್ಶನ್ ಮತ್ತು ಅರ್ಜುನ್ ಸರ್ಜಾ ಜೊತೆ ಮೇಘನಾ ಒಂದು ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋ ಮೂಲಕ ಚಿತ್ರದಲ್ಲಿ ಭಾನುಮತಿಯ ಲುಕ್ ಹೇಗಿರುತ್ತದೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಭಾನುಮತಿಯಾಗಿರುವ ಮೇಘನಾ ಲುಕ್ ಇದೀಗ ಬಹಿರಂಗವಾಗಿದೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ದರ್ಶನ್ ಜೊತೆ ಮೇಘನಾ ನಟಿಸುತ್ತಿದ್ದಾರೆ.

Meghana Raj will play Bhanumati character 'Kurukshetra'.

ಈ ಮೊದಲು ಚಿತ್ರದ ಭಾನುಮತಿ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯರಾದ ರೆಜಿನಾ ಮತ್ತು ರಮ್ಯಾ ನಂಬಿಸೇನ್ ಆಯ್ಕೆ ಆಗಿದ್ದರು ಎನ್ನಲಾಗಿತ್ತು. ಆದ್ರೀಗ, ಅವರಿಬ್ಬರ ಬದಲು ಮೇಘನಾ ಅವಕಾಶ ಪಡೆದುಕೊಂಡಿದ್ದಾರೆ. ಈ ಹಿಂದೆ 'ಅಲ್ಲಮ' ಚಿತ್ರದಲ್ಲಿ ಪೌರಾಣಿಕ ಪಾತ್ರ ಮಾಡಿದ್ದ ಮೇಘನಾ ಈಗ ಮತ್ತೆ ಅದೇ ರೀತಿಯ ಮಹತ್ವದ ಪಾತ್ರವನ್ನು ಮಾಡುತ್ತಿದ್ದಾರೆ.

English summary
Actress Meghana Raj will play Bhanumati character in 'Kurukshetra' movie. 'Kurukshetra' is Darshan's 50th movie and its directed by Naganna. 'ಕುರುಕ್ಷೇತ್ರ' ಸಿನಿಮಾದಲ್ಲಿ ಭಾನುಮತಿಯಾಗಿರುವ ಮೇಘನಾ ರಾಜ್ ಲುಕ್ ಇದೀಗ ಬಹಿರಂಗವಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada