ಕೊನೆಗೂ ಜೂ.ಚಿರುಗೆ ಸಿಕ್ತು ಹೆಸರು: ಮೇಘನಾ ಪುತ್ರನ ನಾಮಕರಣದ ಬಗ್ಗೆ ಇಲ್ಲಿದೆ ವಿವರ

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಮುದ್ದಾದ ಪುತ್ರ ಜೂ.ಚಿರು ಫೋಟೋ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಆಗಾಗ ಮೇಘನಾ ಮಗನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗಷ್ಟೆ ಕೃಷ್ಣ ವೇಷ ಧರಿಸಿದ ಮುದ್ದು ಜೂ.ಚಿರು ಫೋಟೋವನ್ನು ಮೇಘನಾ ಶೇರ್ ಮಾಡಿದ್ದರು. ಜೂ.ಚಿರು ಫೋಟೋ ಅಥವಾ ವಿಡಿಯೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುವ ಜೊತೆಗೆ ಲೈಕ್ಸ್ ಮತ್ತು ಕಾಮೆಂಟ್ ಗಳು ಹರಿದುಬರುತ್ತಿರುತ್ತದೆ.

ನಾನಾಹೆಸರುಗಳಿಂದ ಕರೆಯಲ್ಪಡುತ್ತಿರುವ ಮೇಘನಾ ಮತ್ತು ಚಿರಂಜೀವಿ ಪುತ್ರನಿಗೆ ಈಗ ಕೊನೆಗೂ ಹೆಸರು ಸಿಕ್ಕಿದೆ. ಜೂ.ಚಿರು ಎಂದೇ ಖ್ಯಾತಿಗಳಿಸಿರುವ ಮೇಘನಾ ಪುತ್ರನ ಹೆಸರೇನು ಎನ್ನುವುದು ಅಭಿಮಾನಿಗಳ ಕುತೂಹಲವಾಗಿತ್ತು. ಮೇಘನಾ ತನ್ನ ಮುದ್ದಿನ ಪುತ್ರನಿಗೆ ಏನೆಂದು ಹೆಸರಿಡಲಿದ್ದಾರೆ ಎಂದು ಅನೇಕ ತಿಂಗಳಿಂದ ಕಾಯುತ್ತಿದ್ದರು. ಇದೀಗ ಈ ಕುತೂಹಲಕ್ಕೆ ತೆರೆಬೀಳುವ ಸಮಯ ಹತ್ತಿರಬಂದಿದೆ.

ಈಗಾಗಲೇ ಮೇಘನಾ-ಚಿರು ಪುತ್ರನನ್ನು ಜೂ.ಚಿರು, ಸಿಂಬ, ಚಿಂಟು, ಬರ್ಫಿ, ಚಿರು ಬಚ್ಚ, ಮರಿ ಸಿಂಗ, ಕುಟ್ಟಿ ಪಾಪ ಹೀಗೆ ನಾನಾಹೆಸರುಗಳಿಂದ ಕರೆಯುತ್ತಿದ್ದಾರೆ. ಕುಟುಂಬದವರು, ಅಭಿಮಾನಿಗಳು, ಸ್ನೇಹಿತರು ಹೀಗೆ ಒಬ್ಬರು ಒಂದೊಂದು ಹೆಸರುಗಳಿಂದ ಕರೆಯುತ್ತಿದ್ದಾರೆ. ಆದರೀಗ ಜೂ.ಚಿರು ಹೆಸರು ಅಂತಿಮವಾಗಿದೆ. ಅಂದಹಾಗೆ ಜೂ.ಚಿರು ಹೆಸರನ್ನು ಸೆಪ್ಟಂಬರ್ 3ರಂದು ರಿವೀಲ್ ಮಾಡುವುದಾಗಿ ಮೇಘನಾ ಹೇಳಿದ್ದಾರೆ.

Meghana Raj will reveal his son name on September 3rd

ಸದ್ಯ ಮೇಘನಾ ಮಗನ ಹೆಸರಿನ ಬಗ್ಗೆ ಪುಟ್ಟ ಟೀಸರ್ ಬಿಡುಗೆ ಮಾಡಿದ್ದು, ಟೀಸರ್ ನಲ್ಲಿ ಮೇಘನಾ ಮತ್ತು ಚಿರು ಇಬ್ಬರ ನಿಶ್ಚಿತಾರ್ಥದ ವಿಡಿಯೋ ಶೇರ್ ಮಾಡಿ, ಬಳಿಕ ಮಗನ ವಿಡಿಯೋ ಮಗನ ನಾನಾಹೆಸರುಗಳನ್ನು ಬಹಿರಂಗ ಪಡಿಸಿದ್ದಾರೆ. ಜೊತೆಗೆ ಸೆಪ್ಟಂಬರ್ 3ರಂದು ಮಗನ ಹೆಸರು ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ. ಚಿರು ಪುತ್ರನ ಹೆಸರು ಏನಾಗಿರಲಿದೆ ಎನ್ನುವ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ.

ಅಂದಹಾಗೆ ಮೇಘನಾ ಸದ್ಯ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ಒಂದು ವರ್ಷದ ಬಳಿಕ ಮತ್ತೆ ಬಣ್ಣಹಚ್ಚಿರುವ ಮೇಘನಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಮಗನಿಗೆ 9 ತಿಂಗಳು ತುಂಬಿದ ಸಂತಸದಲ್ಲಿ ಮೇಘನಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದು ಅಭಿಮಾನಿಗಳ ಖುಷಿಗೆ ಕಾರಣವಾಗಿತ್ತು. ಮದುವೆ ಬಳಿಕ ಸಂಸಾರದ ಕಡೆ ಹೆಚ್ಚು ಗಮನ ಹರಿಸಿದ್ದ ಮೇಘನಾ ನಂತರ ಪತಿಯ ನಿಧನ ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗುವತ್ತ ಗಮನ ಹರಿಸಿದ್ದಾರೆ.

ಮಗನಿಗೆ ಒಂಬತ್ತು ತಿಂಗಳು ತುಂಬಿದ ಸಂತಸದ ಸುದ್ದಿಯನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕ್ಯಾಮರಾ ಮುಂದೆ ನಿಂತಿರುವ ಫೋಟೋ ಶೇರ್ ಮಾಡುವ ಜೊತೆಗೆ, "ಜೂ. ಚಿರುಗೆ ಒಂಬತು ತಿಂಗಳು ತುಂಬಿದೆ. ನಾನು ವರ್ಷದ ನಂತರ ಚಿತ್ರೀಕರಣಕ್ಕೆ ಹಾಜರಾಗುವ ಮೂಲಕ ಸಂಭ್ರಮಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದರು. ಆದರೆ ಇದು ಸಿನಿಮಾನಾ ಅಥವಾ ಜಾಹೀರಾತು ಚಿತ್ರೀಕರಣನಾ ಎನ್ನುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ ಜಾಹೀರಾತು ಬಿಡುಗಡೆಯಾಗುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ.

More from Filmibeat

English summary
Actress Meghana Raj will reveal his son name on September 3rd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X