ಚಿರು ಸರ್ಜಾಗೆ ಶುಭಕೋರಿದ ಮೇಘನಾ, ಯಾಕೆ.?

By Bharath Kumar

Recommended Video

ಮದುವೆಯ ನಂತರ ಚಿರು ಮೊದಲ ಸಂಭ್ರಮ..! | Filmibeat Kannada

ಸ್ಯಾಂಡಲ್ ವುಡ್ ನ ಸುಂದರ ಜೋಡಿಯಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಜೋಡಿಯೂ ಒಂದು. ಮದುವೆಯ ನಂತರ ತಮ್ಮ ತಮ್ಮ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ಜೋಡಿ ಒಂದೇ ಸಿನಿಮಾದಲ್ಲಿ ಮತ್ಯಾವಾಗ ಕಾಣಿಸಿಕೊಳ್ತಾರೆ ಎಂಬ ಕಾತುರ ಅಭಿಮಾನಿಗಳದ್ದು.

ಹೀಗಿರುವಾಗ, ಚಿರಂಜೀವಿ ಸರ್ಜಾ ಪತ್ನಿ ಮೇಘನಾ ತಮ್ಮ ಪತಿಗೆ ಶುಭಕೋರಿದ್ದಾರೆ. ಚಿರು ಅಭಿನಯಿಸಿದ್ದ 'ಅಮ್ಮ ಐ ಲವ್ ಯೂ' ಸಿನಿಮಾ ಐವತ್ತು ದಿನ ಪೂರೈಸಿದ ಹಿನ್ನೆಲೆ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ.

ಜೂನ್ 15 ರಂದು ಬಿಡುಗಡೆಯಾಗಿದ್ದ 'ಅಮ್ಮ ಐ ಲವ್ ಯೂ' ಸಿನಿಮಾ ಯಶಸ್ವಿ ಹಾಫ್ ಸೆಂಚುರಿ ಬಾರಿಸಲಿದೆ. ಈ ಶನಿವಾರಕ್ಕೆ 50 ದಿನಕ್ಕೆ ಕಾಲಿಡಲಿದೆ.

Meghana raj wish to chiru sarja

ಕೆ ಎಂ ಚೈತನ್ಯ ನಿರ್ದೇಶನ ಮಾಡಿದ್ದ ಈ ಚಿತ್ರವನ್ನ ದ್ವಾರಕೀಶ್ ಬ್ಯಾನರ್ ನಲ್ಲಿ ಯೋಗಿ ದ್ವಾರಕೀಶ್ ನಿರ್ಮಾಣ ಮಾಡಿದ್ದರು. ನಟ ಚಿರಂಜೀವಿ ಸರ್ಜಾ ಜೊತೆ ನಿಶ್ವಿಕಾ ನಾಯ್ದು ನಾಯಕಿಯಾಗಿ ಅಭಿನಯಿಸಿದ್ದರು. ಗುರು ಕಿರಣ್ ಅವರ ಸಂಗೀತ ನಿರ್ದೇಶನವಿತ್ತು.

ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನಿಮಾ ಇನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. 2016 ರಲ್ಲಿ ಬಿಡುಗಡೆ ಆದ ತಮಿಳಿನ 'ಪಿಚೈಕ್ಕಾರನ್' ಸಿನಿಮಾದ ರೀಮೇಕ್ ಆದರೂ, 'ಅಮ್ಮ ಐ ಲವ್ ಯು' ಚಿತ್ರವನ್ನ ಕನ್ನಡ ಮಣ್ಣಿನ ಸೊಗಡಿಗೆ ತಕ್ಕ ಹಾಗೆ ತಯಾರು ಮಾಡಲಾಗಿತ್ತು. ಅಮ್ಮ-ಮಗನ ಅನುಬಂಧ ಸಾರುವ 'ಅಮ್ಮ ಐ ಲವ್ ಯು' ಚಿತ್ರ ಹೆಂಗಳೆಯರ ಮನಮಿಡಿಯುವಲ್ಲಿ ಯಶಸ್ವಿಯಾಗಿತ್ತು.

More from Filmibeat

English summary
Kannada actor chiranjeevi sarja starrer amma i love you movie completed 50 days in box office. the movie has released on june 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X