For Quick Alerts
  ALLOW NOTIFICATIONS  
  For Daily Alerts

  ಮೇಘನಾ ರಾಜ್ ಪ್ರೀತಿಯ ಮೈದುನನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಹೀಗೆ

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿದ್ದರೂ ಅಭಿಮಾನಿಗಳು, ಗಣ್ಯರು ಮತ್ತು ಕುಟುಂಬದವರಿಂದ ಪ್ರೀತಿಯ ಶುಭಾಶಯಗಳ ಮಹಾಪೂರವೆ ಹರಿದು ಬಂದಿವೆ. ವಿಶೇಷ ಅಂದರೆ ಅತ್ತಿಗೆ ಮೇಘನಾ ರಾಜ್ ಪ್ರೀತಿಯ ಮೈದುನನಿಗೆ ಭಾವುಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

  ಅತ್ತಿಗೆಯನ್ನು ಧ್ರುವ ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ | Filmibeat Kannada

  ಧ್ರುವ ಸರ್ಜಾ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. "ನೀನು ನನ್ನ ಜೊತೆ ಬಲವಾಗಿ ನಿಂತ ಹಾಗೆ ನಾನು ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ. ಪ್ರೋಮಿಸ್! ನನ್ನ ಪ್ರೀತಿಯ ಬರ್ತಡೇ ಬಾಯ್, ನಾನು ಯಾವಾಗಲು ನಿನ್ನ ಸಂತೋಷವನ್ನು ಬಯಸುತ್ತೇನೆ. ನನ್ನ ಚಿರು ಯಾವಾಗಲು ನಗುತಿದ್ದಂತೆ ನೀನು ಯಾವಾಗಲು ನಗುತಿರು. ಹುಟ್ಟುಹಬ್ಬದ ಶುಭಾಶಯಗಳು ಮೈದುನ" ಎಂದು ಪ್ರೀತಿಯಿಂದ ಶುಭ ಹಾರೈಸಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧ್ರುವ ಸರ್ಜಾಗೆ ಶುಭ ಕೋರಿದ ಚಂದನವನದ ತಾರೆಯರುಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧ್ರುವ ಸರ್ಜಾಗೆ ಶುಭ ಕೋರಿದ ಚಂದನವನದ ತಾರೆಯರು

  ನಿನ್ನೆಯಷ್ಟೆ ಮೇಘನಾ ರಾಜ್ ಅವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಚಿರು ನೆನಪಲ್ಲೇ ತುಂಬು ಗರ್ಭಿಣಿ ಮೇಘನಾ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದವರು ಭಾಗಿಯಾಗಿದ್ದರು. ಸೀಮಂತ ಸಂಭ್ರಮದ ದಿನ ಸಂಜೆ ಧ್ರುವ ಸರ್ಜಾ ಹುಟ್ಟುಹಬ್ಬವನ್ನು ಆಚರಿಸಿಲಾಗಿದೆ.

  ಈ ಸಮಯದಲ್ಲಿ ಕುಟುಂಬದವರ ಜೊತೆಗೆ ಚಿತ್ರರಂಗ ಗಣ್ಯರು ಸಹ ಭಾಗಿಯಾಗಿ ಧ್ರುವ ಸರ್ಜಾಗೆ ವಿಶ್ ಮಾಡಿದ್ದಾರೆ. ಧ್ರುವ ಪ್ರೀತಿಯ ಅತ್ತಿಗೆ ಸಹ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಕೇಕ್ ಕತ್ತರಿಸಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಧ್ರುವ ಸರ್ಜಾ ಹುಟ್ಟುಹಬ್ಬದ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಧ್ರುವ ಯಾವಾಗಲು ಹೀಗೆ ನಗುತಾ, ಅಭಿಮಾನಿಗಳನ್ನು ರಂಜಿಸುತ್ತಿರಲಿ ಎಂದು ಅಪಾರ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  English summary
  Meghana Raj wishes to her dear brother in law Dhruva Sarja on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X