For Quick Alerts
  ALLOW NOTIFICATIONS  
  For Daily Alerts

  'ಇಂದ್ರಜಿತ್ ಕ್ಷಮೆ ಕೇಳಲಿ': ಫಿಲಂ ಚೇಂಬರ್‌ಗೆ ಪತ್ರ ಬರೆದ ನಟಿ ಮೇಘನಾ ರಾಜ್

  |

  ಡ್ರಗ್ಸ್ ಪ್ರಕರಣದಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಹೆಸರು ತಂದಿದ್ದಕ್ಕಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಹಲವರು ಬೇಸರ ವ್ಯಕ್ತಪಡಿಸಿದ್ದರು. ಸತ್ತ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ ಎಂದು ನಟ ದರ್ಶನ್, ಸುದೀಪ್ ಸೇರಿದಂತೆ ಹಲವರು ಖಂಡಿಸಿದ್ದರು.

  ನಾನು ಅವತ್ತೇ ಸಾಯಬೇಕಿತ್ತು, ಸುದೀಪ್ ಬಂದು ನನ್ನನ್ನು ಬದುಕಿಸಿದ್ರು

  ಈವರೆಗೂ ಚಿರು ಸರ್ಜಾ ಕುಟುಂಬದವರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಆದ್ರೀಗ, ಚಿರು ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದು, ''ನನ್ನ ಗಂಡನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಇಂದ್ರಜಿತ್ ಲಂಕೇಶ್ ಅವರು ಸಾರ್ವಜನಿಕ ಕ್ಷಮೆ ಕೇಳಲಿ'' ಎಂದು ವಿನಂತಿಸಿಕೊಂಡಿದ್ದಾರೆ. ಹಾಗಾದ್ರೆ, ಮೇಘನಾ ಬರೆದ ಪತ್ರದಲ್ಲಿ ಏನಿದೆ? ಮುಂದೆ ಓದಿ...

  ಆಧಾರ ರಹಿತ ಆರೋಪಗಳು

  ಆಧಾರ ರಹಿತ ಆರೋಪಗಳು

  ''ನನ್ನ ಪತಿ ಚಿರಂಜೀವಿ ಸರ್ಜಾ ನಮ್ಮನ್ನಗಲಿ ಇನ್ನು ಮೂರು ತಿಂಗಳು ಕಳೆದಿಲ್ಲ. ಇಡೀ ನಮ್ಮ ಸಂಸಾರ ಆ ದುಃಖದಿಂದ ಹೊರಬರುವಷ್ಟರಲ್ಲೇ ಆಧಾರರಹಿತವಾದ ಆಪಾದನೆಗಳನ್ನು ಮತ್ತು ದುರುದ್ದೇಶಪೂರ್ವಕವಾಗಿ ಹೇಳಿಕೆಗಳನ್ನು ನನ್ನ ದಿವಂಗತ ಪತಿಯ ಮೇಲೆ ಇಂದ್ರಜಿತ್ ಲಂಕೇಶ್ ವರಿಸುತ್ತಿದ್ದಾರೆ.'' ಎಂದು ಮೊದಲ ಪ್ರತಿಕ್ರಿಯಿಸಿದ್ದಾರೆ.

  ಅತೀವ ವೇದನೆ ಉಂಟು ಮಾಡಿದೆ

  ಅತೀವ ವೇದನೆ ಉಂಟು ಮಾಡಿದೆ

  ''ನನ್ನ ದಿವಂಗತ ಪತಿಯ ಅಕಾಲಿಕ ಮರಣದ ಬಗೆಗಿನ ಅವಹೇಳನಕಾರಿ ಹಾಗೂ ಪ್ರಚೋದಿತ ಆಪಾದನೆಗಳಿಂದ ನನಗೆ ಮತ್ತು ನನ್ನ ಇಡೀ ಕುಟುಂಬಕ್ಕೆ ಮಾನಸಿಕವಾಗಿ ಅತೀವ ವೇದನೆ ಉಂಟು ಮಾಡಿರುತ್ತದೆ. ಗರ್ಭಾವತಿಯಾಗಿರುವ ನನ್ನನ್ನು ಈ ರೀತಿಯ ಮಾನಸಿಕ ತೊಳಲಾಟಕ್ಕೆ ತಳ್ಳುವುದು ಅತೀವವಾದ ಅವಮಾನವೀಯ ಕೃತ್ಯ'' ಎಂದು ಬೇಸರವ್ಯಕ್ತಪಡಿಸಿದ್ದಾರೆ.

  ಮಾಧ್ಯಮಗಳ ಬಗ್ಗೆಯೂ ಅಸಮಾಧಾನ

  ಮಾಧ್ಯಮಗಳ ಬಗ್ಗೆಯೂ ಅಸಮಾಧಾನ

  ''ವಾರ್ತಾ ಮತ್ತು ದೃಶ್ಯ ಮಾಧ್ಯಮಗಳು ಯಾವುದೇ ರೀತಿಯ ಆಧಾರ ಹೊಂದದೆ ಇದ್ದರೂ ಮಾದಕ ವಸ್ತುಗಳ ಸುದ್ದಿಯ ಜೊತೆ ಜೊತೆಗೆ, ನಿರಾಧಾರ ಸುದ್ದಿ ಪ್ರಸಾರ ಮಾಡುವ ಮೂಲಕ ನಮ್ಮನಗಲಿದ ಆತ್ಮವೊಂದರ ನೆನಪಿಗೂ ಮಸಿ ಬಳಿಯಲಾಗುತ್ತದೆ. ಇದೆಲ್ಲ ಇಂದ್ರಜಿತ್ ಲಂಕೇಶ್ ಅವರ ಬೇಜವಾಬ್ದಾರಿಯಿಂದ ನಡೆದಿರುವುದು. ಮಾಧ್ಯಮದ ಬಗ್ಗೆ ನನಗೆ ಅತೀವವಾದ ಗೌರವವಿದೆ. ಆದರೆ, ಅವರು ಈ ಪ್ರಕರಣವನ್ನು ಪರಿಗಣಿಸಿದ ರೀತಿ ಮತ್ತು ನನ್ನ ಪತಿಯ ಹೆಸರು ಮತ್ತು ಫೋಟೋಗಳನ್ನು ಬಳಸಿದ ರೀತಿಗೆ ನಿರಾಸೆ ಉಂಟಾಗಿದೆ'' ಎಂದು ಅಸಮಾಧಾನ ಹೊರಹಾಕಿದ್ದಾರೆ.

  ಸಾರ್ವಜನಿಕ ಕ್ಷಮೆಯಾಚಿಸಲಿ

  ಸಾರ್ವಜನಿಕ ಕ್ಷಮೆಯಾಚಿಸಲಿ

  ''ಇಂದ್ರಜಿತ್ ಲಂಕೇಶ್ ಅವರ ಈ ರೀತಿಯ ನಡವಳಿಕೆಯಿಂದ ನನಗೆ ಉಂಟಾಗಿರುವ ಮಾನಸಿಕ ವೇದನೆಯನ್ನು ತೋಡಿಕೊಳ್ಳಲು ಯಾವುದೇ ಶಬ್ದಗಳು ಸಿಗದಂತಾಗಿದೆ. ನನಗೆ ಮತ್ತು ನನ್ನ ಕುಟುಂಬದವರಿಗೆ ಬೇಕಾಗಿರುವುದು ಇಂದ್ರಜಿತ್ ಲಂಕೇಶ್ ಅವರ ಬೇಷರತ್ ಸಾರ್ವಜನಿಕ ಕ್ಷಮೆಯಾಚನೆ'' ಎಂದು ವಿನಂತಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರ ಪತ್ರದ ಹಿನ್ನೆಲೆ ಇಂದ್ರಜಿತ್ ಅವರಿಗೆ ವಾಣಿಜ್ಯ ಮಂಡಳಿ ಕಡೆಯಿಂದ ಪತ್ರ ಬರೆಯಲು ನಿರ್ಧರಿಸಲಾಗಿದೆ.

  English summary
  Kannada actress Meghana Raj writes letter to film chamber damands indrajit lankesh to apologise in public.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X