ಚಿರು- ಮೇಘನಾ ಮದುವೆಗೆ ಬಂದ ವಿಶೇಷ ಅತಿಥಿಗಳು ಇವರು

By Naveen

ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಕಲ್ಯಾಣ ನಿನ್ನೆ ನಡೆದಿದೆ. ಕಳೆದ ಭಾನುವಾರ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದ ಈ ಜೋಡಿ ಇವತ್ತು ಹಿಂದು ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ನಿನ್ನೆ ಬೆಳ್ಳಗೆ 10.30 ರಿಂದ 11 ಗಂಟೆವರೆಗೆ ಇದ್ದ ಮಿಥುನ ಲಗ್ನದಲ್ಲಿ ಮಾಂಗಲ್ಯಧಾರಣೆ ನೆರವೇರಿದೆ.

ಚಿರು - ಮೇಘನಾ ಅವರ ಮದುವೆಯ ಮುಹೂರ್ತ ಬೆಳ್ಳಗೆ ಆಗಿದ್ದು, ಅದೇ ದಿನ ಸಂಜೆ 7 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಮೂರನೇ ಗೇಟ್ ವೈಟ್ ಪೆಟಲ್ಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಸಾಕಷ್ಟು ಗಣ್ಯರು ಭಾಗಿಯಾಗಿದ್ದಾರೆ. ನಟ ರವಿಚಂದ್ರನ್, ದರ್ಶನ್, ರಚಿತಾ ರಾಮ್, ಧನಂಜಯ್, ರಾಗಿಣಿ, ಪ್ರಿಯಾಂಕ ಉಪೇಂದ್ರ ನಾಗತಿಹಳ್ಳಿ ಚಂದ್ರಶೇಖರ್, ಗುರುಕಿರಣ್ ರಾಧಿಕ, ಶ್ರೀ ಮುರಳಿ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಆಗಮಿಸಿ ನೂತನ ವಧು - ವರ ಇಬ್ಬರಿಗೆ ಶುಭ ಹಾರೈಸಿದ್ದರೆ. ಮುಂದೆ ಓದಿ...

ರವಿಚಂದ್ರನ್

ರವಿಚಂದ್ರನ್

ಪ್ರೀತಿ ಮಾಡಿ ಮದುವೆ ಆದ ಚಿರಂಜೀವಿ ಸರ್ಜಾ ಮತ್ತು ಮೇಘನಾಗೆ ಲವ್ ಗುರು, ಕ್ರೇಜಿಸ್ಟಾರ್ ರವಿಚಂದ್ರನ್ ಆಶೀರ್ವಾದ ಮಾಡಿದ್ದಾರೆ.

ದರ್ಶನ್

ದರ್ಶನ್

ಡಿ ಬಾಸ್ ದರ್ಶನ್ ಚಿರು - ಮೇಘನಾ ಆರತಕ್ಷತೆಗೆ ಆಗಮಿಸಿ ಇಬ್ಬರಿಗೆ ವಿಶ್ ಮಾಡಿದ್ದಾರೆ.

ಸಿಹಿ ಕಹಿ ದಂಪತಿ

ಸಿಹಿ ಕಹಿ ದಂಪತಿ

ಹಾಲು ಜೇನಿನಂತೆ ಇರುವ ಜೋಡಿ ಸಿಹಿ ಕಹಿ ಚಂದ್ರು ಹಾಗೂ ಸಿಹಿ ಕಹಿ ಗೀತಾ ಜೋಡಿ ಅದೇ ರೀತಿ ಇರುವ ಹೊಸ ಜೋಡಿಗೆ ಮನಸಾರೆ ಶುಭ ಹಾರಸಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್

ನಾಗತಿಹಳ್ಳಿ ಚಂದ್ರಶೇಖರ್

ಲವ್ ಸ್ಟೋರಿ ಸಿನಿಮಾಗಳ ಮಾಸ್ಟರ್, ಖ್ಯಾತ ನಿರ್ದೇಶನ ನಾಗತಿಹಳ್ಳಿ ಚಂದ್ರಶೇಖರ್ ಚಿರಂಜೀವಿ - ಮೇಘನಾಗೆ ಆಶೀರ್ವಾದ ಮಾಡಿದರು.

ರಾಧಿಕಾ ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ

ನಟಿ ರಾಧಿಕಾ ಕುಮಾರಸ್ವಾಮಿ ಬಹಳ ದಿನಗಳ ನಂತರ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಚಿರು - ಮೇಘನಾ ಮದುವೆಗೆ ಬಂದ ವಿಶೇಷ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬರಾಗಿದ್ದರು.

ಧನಂಜಯ್

ಧನಂಜಯ್

ಟಗರು ಡಾಲಿ ಧನಂಜಯ್ ಸಹ ಹೊಸ ಜೀವನಕ್ಕೆ ಕಾಲಿಟ್ಟ ಹೊಸ ಜೋಡಿಗೆ ಶುಭಾಶಯ ಕೋರಿದ್ದಾರೆ.

ಪ್ರಿಯಾಂಕ ಉಪೇಂದ್ರ

ಪ್ರಿಯಾಂಕ ಉಪೇಂದ್ರ

ನಟಿ ಪ್ರಿಯಾಂಕ ಉಪೇಂದ್ರ ಕೂಡ ಚಿರಂಜೀವಿ ಮೇಘನಾ ದಂಪತಿಗೆ ವಿಶ್ ಮಾಡಿದ್ದಾರೆ. ಉಪೇಂದ್ರ 'ಹೋಮ್ ಮಿನಿಸ್ಟರ್' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿ ಇರುವ ಕಾರಣ ಮದುವೆಗೆ ಬರಲು ಆಗಿಲ್ಲ.

ರಚಿತಾ ರಾಮ್

ರಚಿತಾ ರಾಮ್

ಬುಲ್ ಬುಲ್ ರಚಿತಾ ರಾಮ್ ತಮ್ಮ ಎಂದಿನ ನಗು ಮೊಗದಲ್ಲಿ ನೂತನ ದಂಪತಿಗೆ ಶುಭ ಹಾರೈಸಿದ್ದಾರೆ.

ಗುರುಕಿರಣ್ ದಂಪತಿ

ಗುರುಕಿರಣ್ ದಂಪತಿ

ಸಂಗೀತ ನಿರ್ದೇಶಕ ಗುರುಕಿರಣ್ ತಮ್ಮ ಪತ್ನಿಯ ಜೊತೆಗೆ ಮದುವೆಗೆ ಬಂದು ಚಿರು - ಮೇಘನಾಗೆ ಶುಭಾಶಯ ತಿಳಿಸಿದ್ದಾರೆ.

More from Filmibeat

English summary
Kannada actress Meghna Raj and Chiranjeevi Sarja wedding reception held yesterday at Palace Ground. Most of Sandalwood's stars are involved in the reception.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X