ಜಾತಿ-ಮತ-ಧರ್ಮ ಮೀರಿ ನಿಂತ ಮೆಹಬೂಬಾ ; ಮಾರ್ಚ್ 15ಕ್ಕೆ ಕಾರ್ತಿಕ್ -ನಜ್ರೀಯಾ ಪ್ರೇಮಕಥೆ ..!

ಮಾಡ್ರನ್ ರೈತ ಎಂದೇ ಜನಮನ್ನಣೆ ಗಳಿಸಿದವರು ಶಶಿ. ಬಿಗ್ ಬಾಸ್ ಸೀಸನ್ 06ರಲ್ಲಿ ಕನ್ನಡಿಗರ ಹೃದಯವನ್ನ ಗೆಲ್ಲುವುದಲ್ಲದೇ ಬಿಗ್ ಬಾಸ್ ಕಿರೀಟವನ್ನೂ ಮುಡಿಗೇರಿಸಿಕೊಂಡ ಶಶಿ, ಸದ್ಯಕ್ಕೆ ನಿಮ್ಮೆಲ್ಲರ ಆಶೀರ್ವಾದವನ್ನ ಮತ್ತೊಮ್ಮೆ ನನ್ನ ಮೇಲೆ ಇರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

ಹೌದು, ನಿಮಗೆ ಗೊತ್ತಿರಲಿ ಮಾಡ್ರನ್ ರೈತನಿಂದ ಶಶಿ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಮೆಹಬೂಬಾ ಚಿತ್ರದ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ.ಇನ್ನೇನು ಈ ಮಾರ್ಚ್ 15ಕ್ಕೆ ತಮ್ಮ ಕನಸಿನ ಚಿತ್ರವನ್ನ ನಿಮ್ಮ ಮಡಿಲಿಗೆ ಹಾಕುತ್ತಿದ್ದಾರೆ. ವಿಧಾನಸೌಧ ,ನ್ಯಾಯಾಲಯ,ಪೊಲೀಸ್ ಠಾಣೆ, ಮಸೀದಿ,ಮಾರ್ಕೆಟ್ ,ಮಂದಿರದ ಎದುರು ವಿಭಿನ್ನವಾಗಿ ಚಿತ್ರದ ಬಿಡುಗಡೆಯ ದಿನವನ್ನ ಘೋಷಿಸಿದ್ದಾರೆ

Mehabooba Gets a Release date

ಸರ್ವ ಧರ್ಮ ಸಮಾನತೆ ಸಂದೇಶವನ್ನೊತ್ತ ಮೆಹಬೂಬಾ, ಕೇರಳದಲ್ಲಿ ನಡೆದ ಸತ್ಯಘಟನೆಯನ್ನಾಧರಿಸಿದ ಸಿನಿಮಾ. ಇನ್ನೂ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಪಾವನಾ ಗೌಡ ಈ ಚಿತ್ರದ ನಾಯಕಿ. ಇನ್ನೂ ನಿಮಗೆ ಗೊತ್ತಿರಲಿ ಪಾವನಾ ಪಾತ್ರ ಎಂಥದ್ದೇ ಆದರೂ ನುಂಗಿಕೊಂಡಂತೆ ನಟಿಸುತ್ತಾರೆ. ಹೀಗಾಗಿ ಅಭಿನಯದ ವಿಚಾರದಲ್ಲಿ ಶಶಿ ಹಾಗೂ ಪಾವನಾ ಅವರ ನಡುವೆ ಪೈಪೋಟಿಯನ್ನ ನಾವು ನೀವು ನಿರೀಕ್ಷೆ ಮಾಡಬಹುದು

ಅಂದ್ಹಾಗೇ ಮೆಹಬೂಬಾ ಚಿತ್ರಕ್ಕೆ ಶಶಿ ಕೇವಲ ನಾಯಕರಷ್ಟೇ ಅಲ್ಲ, ಚಿತ್ರದ ನಿರ್ಮಾಪಕರು ಹೌದು. ಅನೂಪ್ ಆಂಟೋನಿ ಈ ಚಿತ್ರದ ನಿರ್ದೇಶಕರು. ಪತ್ರಕರ್ತ ಹಾಗೂ ಪ್ರತಿಭಾವಂತ ನಟ ಸಂದೀಪ್ ಕುಮಾರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ. ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನ ಹಾಗೂ ಕಿರಣ್ ಹಂಪಾಪುರ ಛಾಯಾಗ್ರಹಣ ಚಿತ್ರಕ್ಕಿದೆ.

ನಾಯಕ ಶಶಿ ಹಿಂದೂ ಹುಡುಗನಂತೆ ಮತ್ತು ನಾಯಕಿ ಪಾವನಾ ಗೌಡ ಮುಸ್ಲಿಂ ಹುಡುಗಿಯಂತೆ ವೇಷ ತೊಟ್ಟು,ಕೈಯಲ್ಲಿ ರಿಲೀಸ್ ಡೇಟ್ ಬೋರ್ಡ್ ಇಟ್ಟುಕೊಂಡು,ವಿಧಾನಸೌಧ ,ನ್ಯಾಯಾಲಯ,ಪೊಲೀಸ್ ಠಾಣೆ, ಮಸೀದಿ,ಮಾರ್ಕೆಟ್ ,ಮಂದಿರದ ಬಳಿ ಸರ್ವ ಧರ್ಮ ಸಮಾನತೆಯನ್ನ ಸಾರೋ ವಿಚಾರ ಹೇಳುತ್ತಾ ಸಿನಿಮಾ ರಿಲೀಸ್ ಡೇಟ್ನ ಅನೌನ್ಸ್ ಮಾಡಿ ಥಿಯೇಟರ್ಗೆ ಕರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಈಗ ಚರ್ಚೆಯಲ್ಲಿದೆ.

Mehabooba Gets a Release date

ಒಟ್ಟಿನಲ್ಲಿ ಹಾಡುಗಳ ಮೂಲಕ ಈಗಾಗ್ಲೇ ಒಂದು ಸುತ್ತು ಸಿಕ್ಕಾಪಟ್ಟೆ ಸದ್ದು ಮಾಡಿರುವ ಮೆಹಬೂಬಾ ಇದೇ ಮಾರ್ಚ್ 15ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಕಾರ್ತೀಕ್ ಗೌಡ ಹಾಗೂ ನಜ್ರೀಯಾ ಬಾನುವಿನ‌ ಪ್ರೇಮಕಥೆ ಬೆಳ್ಳಿ ತೆರೆಯಲ್ಲಿ ಅನಾವರಣವಾಗಲಿದೆ.

More from Filmibeat

English summary
Mehabooba, Starring Bigg Boss Fame Shashi & Pavana Gowda Gets a Release Date. The Film Based On Real Incidents Is Set To Release On March 15
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X