»   » 'ಸರಿಗಮಪ' ಮೆಹಬೂಬ್ ಗೆ ಸಿಕ್ಕಿದೆ ಸಿನಿಮಾದಲ್ಲಿ ಹಾಡುವ ಅವಕಾಶ

'ಸರಿಗಮಪ' ಮೆಹಬೂಬ್ ಗೆ ಸಿಕ್ಕಿದೆ ಸಿನಿಮಾದಲ್ಲಿ ಹಾಡುವ ಅವಕಾಶ

Written By:
Subscribe to Filmibeat Kannada

ಮೆಹಬೂಬ್ ಸಾಬ್ 'ಜೀ ಕನ್ನಡ' ವಾಹಿನಿಯ 'ಸರಿಗಮಪ ಸೀಸನ್ 13' ಕಾರ್ಯಕ್ರಮದ ರನ್ನರ್ ಅಪ್ ಆಗಿದ್ದರು. ತಮ್ಮ ಸುಮಧುರವಾದ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದ ಮೆಹಬೂಬ್ ಸಾಬ್ ಈಗ ಸಿನಿಮಾದಲ್ಲಿ ಹಾಡಲಿದ್ದಾರೆ.

ಮೆಹಬೂಬ್ ಸಾಬ್ ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶವೊಂದು ಹುಡುಕಿಕೊಂಡು ಬಂದಿದೆ. 'ಕತ್ತಲ ಕೋಣೆ' ಎಂಬ ಚಿತ್ರದಲ್ಲಿ ಹಾಡುವ ಮೂಲಕ ಮೆಹಬೂಬ್ ಸಾಬ್ ತಮ್ಮ ಸಿನಿ ಜರ್ನಿಯನ್ನು ಶುರು ಮಾಡಲಿದ್ದಾರೆ. 'ಕತ್ತಲ ಕೋಣೆ' ಚಿತ್ರದ ನಿರ್ದೇಶಕ ಸಂದೇಶ್ ಶೆಟ್ಟಿ ಎಂಬುವವರು ಮೆಹಬೂಬ್ ಸಾಬ್ ಧ್ವನಿಯನ್ನು ಇಷ್ಟಪಟ್ಟು ಈ ಅವಕಾಶವನ್ನು ನೀಡಿದ್ದಾರೆ.

Mehbub Saab got the chance to sing in the movie


ಅಂದ್ಹಾಗೆ, ಶ್ರೀ ಪುಟ್ಟರಾಜ ಗವಾಯಿಗಳ ಸಂಗೀತ ಶಾಲೆಯ ಪ್ರತಿಭೆ ಆಗಿದ್ದ ಮೆಹಬೂಬ್ ಸಾಬ್ ಅವರು 'ಸರಿಗಮಪ 13'ನೇ ಆವೃತ್ತಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡರು. ಇವರಿಗೆ 'ಮುಗುಳುನಗೆ' ಚಿತ್ರತಂಡದಿಂದ 3 ಲಕ್ಷ ಹಾಗೂ ಜನರಿಂದ 1.5 ಲಕ್ಷ ಬಹುಮಾನ ನೀಡಲಾಗಿತ್ತು.

English summary
Zee Kannada channel's 'Sarigamapa Season 13' runner up Mehbub Saab got the chance to sing in the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada