ದರ್ಶನ್ ಗೆ ನಾಯಕಿಯಾಗ್ತಾರಾ ನಟಿ ಮೆಹ್ರೀನ್ ಪಿರ್ ಜಾದ?

Recommended Video

Robert Kannada Movie: ದರ್ಶನ್‍ಗೆ ಸಾಥ್ ನೀಡುವ ಆ ನಾಯಕಿ ಯಾರು ಗೊತ್ತಾ? | FILMIBEAT KANNADA

ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಚಿತ್ರ ರಾಬರ್ಟ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ನಾಯಕಿಯ ವಿಚಾರ ಸಖತ್ ಸದ್ದು ಮಾಡುತ್ತಿದೆ. ಚಿತ್ರ ಸೆಟ್ಟೇರಿ, ಚಿತ್ರೀಕರಣ ಪ್ರಾರಂಭವಾಗಿ ದಿನಗಳೇ ಆಗಿವೆ. ಆದ್ರಿನ್ನು ನಾಯಕಿಯ ವಿಚಾರ ಮಾತ್ರ ಬಹಿರಂಗವಾಗಿಲ್ಲ.

ಹಾಗಾಗಿಯೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ದಚ್ಚು ಜೊತೆ ರೋಮ್ಯಾನ್ಸ್ ಮಾಡುವ ಆ ಬೆಡಗಿ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೀಗ ಬಹುತೇಕ ತೆರೆ ಬಿದ್ದಿದೆ. ಯಾಕಂದ್ರೆ 'ರಾಬರ್ಟ್' ಚಿತ್ರಕ್ಕೆ ಈಗಾಗಲೆ ನಾಯಕಿಯ ಆಯ್ಕೆ ಬಹುತೇಕ ಖಚಿತವಾಗಿದೆ.

ಸದ್ಯ ಮೊದಲ ಹಂತದ ಚಿತ್ರೀಕರಣ ಮುಗಿಸಿ ಎರಡನೆ ಹಂತದ ಚಿತ್ರೀಕರಣದಲ್ಲಿ ಬ್ಯುಸಿ ಇರುವ 'ರಾಬರ್ಟ್'ಗೆ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಮೆಹ್ರೀನ್ ಪಿರ್ ಜಾದ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತಮಿಳಿನಲ್ಲೂ ಸುದ್ದಿಯಾಗುತ್ತಿದೆ. ಮುಂದೆ ಓದಿ..

ರಾಬರ್ಟ್ ನಾಯಕಿ ಮೆಹ್ರೀನ್?

ರಾಬರ್ಟ್ ನಾಯಕಿ ಮೆಹ್ರೀನ್?

ದರ್ಶನ್ ಜೊತೆ ನಾಯಕಿಯಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಮೆಹ್ರೀನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನಾಯಕಿಯ ವಿಚಾರವಾಗಿ ಬಾರಿ ಕುತೂಹಲ ಮೂಡಿಸಿದ್ದ 'ರಾಬರ್ಟ್'ಗೆ ಕೊನೆಗೂ ನಾಯಕಿ ಸಿಕ್ಕಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಜೊತೆ ರೋಮ್ಯಾನ್ಸ್ ಮಾಡುವುದು ಮೆಹ್ರೀನ್ ಬಹುತೇಕ ಖಚಿತವಾಗಿದೆ.

ಮೆಹ್ರೀನ್ ಸಿನಿಮಾಗಳು

ಮೆಹ್ರೀನ್ ಸಿನಿಮಾಗಳು

ಪಂಜಾಬಿ ಮೂಲದವರಾದ ಮೆಹ್ರೀನ್ ಖ್ಯಾತಿ ಗಳಿಸಿದ್ದು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ. ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಮೆಹ್ರೀನ್, 'ಜವಾನ್', 'ರಾಜ ದಿ ಗ್ರೇಟ್', 'ನೋಟ' ಚಿತ್ರಗಳಲ್ಲಿ ಮಿಂಚಿದ್ದಾರೆ. ಜೊತೆಗೆ ಹಿಂದಿ ಚಿತ್ರದಲ್ಲು ಅಭಿನಯಿಸಿದ್ದಾರೆ. ಅನುಷ್ಕಾ ಶರ್ಮಾ ಅಭಿನಯದ 'ಫಿಲೌರಿ' ಚಿತ್ರದಲ್ಲಿ ಮೆಹ್ರೀನ್ ಕಾಣಿಸಿಕೊಂಡಿದ್ದಾರೆ.

ಮೆಹ್ರೀನ್ ಆಯ್ಕೆ ಬಗ್ಗೆ ನಿರ್ದೇಶಕರ ಮಾತು

ಮೆಹ್ರೀನ್ ಆಯ್ಕೆ ಬಗ್ಗೆ ನಿರ್ದೇಶಕರ ಮಾತು

ಬಹಳ ದಿನಗಳ ಹಿಂದೆಯೆ ಮೆಹ್ರೀನ್ ಜೊತೆ ಮಾತುಕತೆ ನಡೆಸಿದ್ದಾರಂತೆ. ಆದ್ರೆ ಇನ್ನು ಫೈನಲ್ ಆಗಿಲ್ಲವಂತೆ. ಮೆಹ್ರೀನ್ ಮಾತ್ರವಲ್ಲದೆ ಸಾಕಷ್ಟು ನಟಿಮಣಿಯರ ಜೊತೆಯು ಮಾತುಕತೆ ಮಾಡಿದ್ದಾರಂತೆ. ಆದ್ರೆ ಯಾರು ಇನ್ನು ಅಂತಿಮ ವಾಗಿಲ್ಲವಂತೆ. ಡೇಟ್ಸ್ ಮತ್ತು ಸಂಭಾವನೆ ಹೊಂದಾಣಿಕೆ ಯಾವ ನಟಿಯ ಜೊತೆ ಆಗುತ್ತೊ ಅವರು ನಾಯಕಿಯಾಗ್ತಾರಂತೆ. ಹಾಗಂತ ಮೆಹ್ರೀನ್ ಆಯ್ಕೆಯನ್ನು ತಳ್ಳಿ ಹಾಕಿಲ್ಲ.

ರಾಬರ್ಟ್ ಚಿತ್ರಕ್ಕೆ ನಾಯಕಿಯರ ಲಿಸ್ಟೇ ಇದೆ

ರಾಬರ್ಟ್ ಚಿತ್ರಕ್ಕೆ ನಾಯಕಿಯರ ಲಿಸ್ಟೇ ಇದೆ

ದರ್ಶನ್ ಗೆ ನಾಯಕಿಯಾಗಿ ಯಾರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ದೊಡ್ಡ ಲಿಸ್ಟ್ ಇದೆ. ಮೊದಲ ನಟಿ ಐಶ್ವರ್ಯ ರೈ ಹೆಸರು ಬಾರಿ ಸುದ್ದಿಯಾಗಿತ್ತು. ಆ ನಂತರ ಅನುಷ್ಕಾ ಶೆಟ್ಟಿ, ರಾಕುಲ್ ಪ್ರೀತ್ ಸಿಂಗ್, ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಸೇರಿದಂತೆ ಅನೇಕರ ಹೆಸರು ಕೇಳಿ ಬಂದಿತ್ತು. ಆದ್ರೆ ಚಿತ್ರತಂಡ ಮಾತ್ರ ನಾಯಕಿ ಯಾರು ಎನ್ನುವ ಬಗ್ಗೆ ಇನ್ನು ಸ್ಪಷ್ಟಪಡಿಸಿಲ್ಲ.

More from Filmibeat

English summary
Tamil and telugu actress Mehreen Pirzada may heroin in Darshan starrer Robert film. This movie is directed by Tarun Sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X