»   » ವಯಸ್ಕರ ಚಿತ್ರ 'ಮಳ್ಳಿ' ಆಂಟಿಯೊಬ್ಬಳ ಲವ್ವಿ ಡವ್ವಿ ಕಥೆ

ವಯಸ್ಕರ ಚಿತ್ರ 'ಮಳ್ಳಿ' ಆಂಟಿಯೊಬ್ಬಳ ಲವ್ವಿ ಡವ್ವಿ ಕಥೆ

Posted By:
Subscribe to Filmibeat Kannada

ಬಹಳ ಗ್ಯಾಪ್ ನ ಬಳಿಕ ಗಾಂಧಿನಗರದಲ್ಲಿ ಮತ್ತೆ ಸಾಫ್ಟ್ ಸೆಕ್ಸ್ ಚಿತ್ರಗಳ ರಾಣಿ ಶಕೀಲಾ ಮಾದರಿಯ ಚಿತ್ರವೊಂದು ತೆರೆಕಾಣುತ್ತಿದೆ. ಇದೊಂದು ಆಂಟಿಯೊಬ್ಬಳ ಲವ್ವಿ ಡವ್ವಿ ಕಥೆ ಎನ್ನುತ್ತಿದೆ ಚಿತ್ರತಂಡ. ಚಿತ್ರದ ಹೆಸರು 'ಮಳ್ಳಿ'. ಸೆನ್ಸಾರ್ ನಲ್ಲಿ 'ಎ' ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರದ ಅಡಿಬರಹ 'ಪ್ರೀತಿಗೆ ಇಟ್ಟಳು ಕೊಳ್ಳಿ'.

ಈ ಚಿತ್ರಕ್ಕೆ ಕೆ.ಎಂ.ನಾರಾಯಣಗೌಡ ನಿರ್ಮಾಪಕರು. ಬೆಂಗಳೂರಿನ ಮೇನಕ ಪ್ರಮುಖ ಚಿತ್ರಮಂದಿರ ಸೇರಿದಂತೆ ರಾಜ್ಯದಾದ್ಯಂತ ಸುಮಾರು 50 ಚಿತ್ರಮಂದಿರಗಳಲ್ಲಿ ಪಡ್ಡೆಗಳ ಹೃದಯಕ್ಕೆ ಕೊಳ್ಳಿ ಇಡಲಿದ್ದಾಳೆ 'ಮಳ್ಳಿ'. [ಪ್ರಿಯಾಮಣಿ ಡಿಂಗ್ ಡಾಂಗ್ ಚಿತ್ರಗಳ ರಾದ್ಧಾಂತ]

A still from movie Malli

ಹಳ್ಳಿಯಿಂದ ದಿಲ್ಲಿವರೆಗೂ 'ಮಳ್ಳಿ' ಅಂತಹ ವ್ಯಕ್ತಿತ್ವ ಸಮಾಜದಲ್ಲಿ ಕಾಣಬಹುದು. ಪ್ರಭುಶ್ರೀ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ಸಮಾಜಕ್ಕೆ ಎರಡು ಸಂದೇಶಗಳಿವೆಯಂತೆ. ಅದರಲ್ಲಿ ಬಹು ಮುಖ್ಯ ಅಂದರೆ ಸಹಾಯ ಮಾಡಬೇಕಾದರೆ ಹುಷಾರಾಗಿ ನೋಡಿಕೊಂಡು ಮಾಡಿ ಎಂಬುದು ಒಂದು.

ಸಿ ಆರ್ ಬಾಬ್ಬಿ ಅವರ ಸಂಗೀತ, ವಾಸನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ಮಾಪಕ ಕೆ. ವಿಷ್ಣು ಪ್ರಿಯನ್ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ನಾಯಕನಾಗಿ ಸುಜೀತ್, ದಿಶಾ ಪೂವಯ್ಯ, ಸೌಜನ್ಯಾ, ಐಟಂ ಡಾನ್ಸರ್ ಆಗಿ ಸೋನಿಯ ಸೇನ್ ಹಾಗೂ ಇತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada message oriented movie 'Malli' will release on 25th April all over Karnataka. The movie directed by S Vishnupriyan. Disha Poovaiah, Sujith are in lead roles.
Please Wait while comments are loading...