For Quick Alerts
  ALLOW NOTIFICATIONS  
  For Daily Alerts

  ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?

  |

  #ಮೀಟೂ ಚಳುವಳಿ ರಾಷ್ಟ್ರಾದ್ಯಂತ ಭಾರಿ ಸದ್ದು ಮಾಡುತ್ತಿದೆ. #ಮೀಟೂ ಅಭಿಯಾನ ಸ್ಯಾಂಡಲ್ ವುಡ್ ಗೂ ಬಂದ್ಮೇಲೆ, ಹೊಸ ತಿರುವು ಪಡೆದುಕೊಂಡಿದೆ.

  #ಮೀಟೂ ಅಭಿಯಾನಕ್ಕೂ ರಾಜಕೀಯಕ್ಕೂ ಲಿಂಕ್ ಇದೆ ಎನ್ನಲಾಗಿದೆ. ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇದರ ಹಿಂದೆ 'ಲಿಬರಲ್' ಗ್ಯಾಂಗ್ ಇದೆ ಎನ್ನುತ್ತಾರೆ ಉದ್ಯಮಿ ಪ್ರಶಾಂತ್ ಸಂಬರ್ಗಿ.

  ಹನುಮನ ಭಕ್ತ ಅರ್ಜುನ್ ಸರ್ಜಾ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. 10 ಲಕ್ಷಕ್ಕೋಸ್ಕರ ನಟಿ ಶ್ರುತಿ ಹರಿಹರನ್ ಗೆ ಚೇತನ್ ಸಪೋರ್ಟ್ ಮಾಡಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎನ್ನುವುದು ಪ್ರಶಾಂತ್ ಸಂಬರ್ಗಿ ಅವರ ವಾದ.

  ಫೇಸ್ ಬುಕ್ ನಲ್ಲಿ ಉದ್ಯಮಿ ಪ್ರಶಾಂತ್ ಸಂಬರ್ಗಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಅದರ ಅನುವಾದ ಇಲ್ಲಿದೆ, ಓದಿರಿ...

  ರಾಜಕೀಯ ಲಾಭ

  ರಾಜಕೀಯ ಲಾಭ

  ''#ಮೀಟೂ ಎಂಬ ಅಸ್ತ್ರವನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು ಲಿಬರಲ್ ಗ್ಯಾಂಗ್. ಈ ಪ್ಲಾನ್ ಹುಟ್ಟಿದ್ದು ಚೆನ್ನೈನ ಇಂಡಿಯಾ ಟುಡೇ ಕಾನ್ಕ್ಲೇವ್ ನಲ್ಲಿ. ಇದೇ ವೇಳೆ ನಟಿ ಶ್ರುತಿ ಹರಿಹರನ್ ಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು'' - ಪ್ರಶಾಂತ್ ಸಂಬರ್ಗಿ, ಉದ್ಯಮಿ

  'ರೆಸಾರ್ಟ್ ಗೆ ಹೋಗೋಣ ಬಾ' ಎಂದು ಕರೆದರು : ಸರ್ಜಾ ಮೇಲೆ ಶ್ರುತಿ ಬಾಂಬ್!'ರೆಸಾರ್ಟ್ ಗೆ ಹೋಗೋಣ ಬಾ' ಎಂದು ಕರೆದರು : ಸರ್ಜಾ ಮೇಲೆ ಶ್ರುತಿ ಬಾಂಬ್!

  ಹನುಮನ ಭಕ್ತ

  ಹನುಮನ ಭಕ್ತ

  ''ಅರ್ಜುನ್ ಸರ್ಜಾ ಮನೆಯಲ್ಲಿ ಗೋವು ಇದೆ. ಅವರು ಮೋದಿಯನ್ನ ಹೊಗಳಿದ್ದಾರೆ. ಸರ್ಜಾ ತಂದೆಗೆ ಆರ್.ಎಸ್.ಎಸ್ ಹಿನ್ನಲೆ ಇದೆ. ಅರ್ಜುನ್ ಸರ್ಜಾ ಹನುಮನ ಭಕ್ತ. ಚೆನ್ನೈನಲ್ಲಿ ಬೃಹತ್ ಆಂಜಿನೇಯನ ಮೂರ್ತಿಯನ್ನು ನಿರ್ಮಿಸಿದ್ದಾರೆ'' - ಪ್ರಶಾಂತ್ ಸಂಬರ್ಗಿ, ಉದ್ಯಮಿ

  'ನಾಚಿಕೆ ಆಗಬೇಕು' : ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಕೆಂಡಾಮಂಡಲ!'ನಾಚಿಕೆ ಆಗಬೇಕು' : ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಕೆಂಡಾಮಂಡಲ!

  ಶ್ರುತಿ ತಂದೆ ಕಮ್ಯೂನಿಸ್ಟ್

  ''ಕವಿತಾ ಲಂಕೇಶ್, ಚೇತನ್, ರೂಪಾ ಅಯ್ಯರ್... ಎಲ್ಲರೂ ಲಿಬರಲ್ ಗ್ಯಾಂಗ್ ನವರು. 'ಫೈರ್' ಮೂಲಕ ಪ್ರೆಸ್ ಮೀಟ್ ಮಾಡಿದರು. ಹತ್ತು ದಿನಗಳ ಹಿಂದೆಯೇ ಸೈಬರ್ ಎಕ್ಸ್ ಪರ್ಟ್ ಗೆ ಕರೆ ಮಾಡಿ ಎರಡು ವರ್ಷಗಳ ಹಿಂದಿನ ವಾಟ್ಸ್ ಆಪ್ ಹಿಸ್ಟರಿಯನ್ನ ಶ್ರುತಿ ಹರಿಹರನ್ ಪಡೆದುಕೊಂಡಿದ್ದಾರೆ. ಅಸಲಿಗೆ, ಶ್ರುತಿ ತಂದೆ ಕೇರಳದಲ್ಲಿ ಕಮ್ಯೂನಿಸ್ಟ್ ಬೆಂಬಲಿಗನಾಗಿದ್ದರು. ಹೀಗಾಗಿ ಆರೋಪದ ಹಿಂದೆ ಮೋದಿ ವಿರೋಧಿ, ಹಿಂದು ವಿರೋಧಿ ಅಜೆಂಡಾ ಇದೆ'' ಅಂತಾರೆ ಉದ್ಯಮಿ ಪ್ರಶಾಂತ್ ಸಂಬರ್ಗಿ.

  ನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲ

  ಸೇಡಿಗೆ ನಿಂತ್ರಾ ಚೇತನ್.?

  ಸೇಡಿಗೆ ನಿಂತ್ರಾ ಚೇತನ್.?

  ಅರ್ಜುನ್ ಸರ್ಜಾ ನಿರ್ದೇಶನದ ಐಶ್ವರ್ಯ ಅರ್ಜುನ್ ಅಭಿನಯದ 'ಪ್ರೇಮ ಬರಹ' ಚಿತ್ರಕ್ಕೆ ನಾಯಕನಾಗಿ ಮೊದಲು ಆಯ್ಕೆ ಆಗಿದ್ದವರು ನಟ ಚೇತನ್. ಇದಕ್ಕಾಗಿ ಚೇತನ್ ಗೆ ಹತ್ತು ಲಕ್ಷ ರೂಪಾಯಿಯನ್ನ ಅಡ್ವಾನ್ಸ್ ಆಗಿ ಅರ್ಜುನ್ ಸರ್ಜಾ ಕೊಟ್ಟಿದ್ದರು. ಆದ್ರೆ, ವರ್ಕ್ ಶಾಪ್ ವೇಳೆ ಚೇತನ್ ಅಭಿನಯ ಅರ್ಜುನ್ ಸರ್ಜಾಗೆ ಇಷ್ಟ ಆಗಲಿಲ್ಲ. ಹೀಗಾಗಿ, ಚಿತ್ರತಂಡದಿಂದ ಚೇತನ್ ರನ್ನ ಅರ್ಜುನ್ ಸರ್ಜಾ ಕೈಬಿಟ್ಟರು.

  ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!

  ಹತ್ತು ಲಕ್ಷ ವಾಪಸ್ ಕೇಳಿದ್ರೆ...

  ಹತ್ತು ಲಕ್ಷ ವಾಪಸ್ ಕೇಳಿದ್ರೆ...

  ಹತ್ತು ಲಕ್ಷ ವಾಪಸ್ ಕೊಡುವಂತೆ ಅರ್ಜುನ್ ಸರ್ಜಾ ಆಫೀಸ್ ನಿಂದ ಹಲವಾರು ಬಾರಿ ಚೇತನ್ ಗೆ ಕರೆ ಹೋಗಿದೆ. ಅರ್ಜುನ್ ಸರ್ಜಾಗೆ ಹಣ ಹಿಂದಿರುಗಿಸದ ಚೇತನ್ ಇದೀಗ ಶ್ರುತಿ ಹರಿಹರನ್ ಜೊತೆಗೆ ಸೇರಿಕೊಂಡಿದ್ದಾರೆ ಎನ್ನುತ್ತಾರೆ ಉದ್ಯಮಿ ಪ್ರಶಾಂತ್ ಸಂಬರ್ಗಿ.

  'ವಿಸ್ಮಯ' ಸೆಟ್ ನಲ್ಲಿ ಆಗಿದ್ದೇನು: ನಿರ್ದೇಶಕ ಅರುಣ್ ವೈದ್ಯನಾಥನ್ ಏನಂತಾರೆ.?'ವಿಸ್ಮಯ' ಸೆಟ್ ನಲ್ಲಿ ಆಗಿದ್ದೇನು: ನಿರ್ದೇಶಕ ಅರುಣ್ ವೈದ್ಯನಾಥನ್ ಏನಂತಾರೆ.?

  ಚೇತನ್ ಏನಂತಾರೆ.?

  ಚೇತನ್ ಏನಂತಾರೆ.?

  ''ನನಗೆ ಅರ್ಜುನ್ ಸರ್ಜಾ ಮೇಲೆ ವೈಯುಕ್ತಿಕವಾಗಿ ಯಾವುದೇ ಸಮಸ್ಯೆ ಇಲ್ಲ. ನನಗೆ ಅವರ ಬಗ್ಗೆ ಗೌರವ ಇದೆ. ಇದು ಶ್ರುತಿಯ ತೀರ್ಮಾನ. ಶ್ರುತಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಫೈರ್ ಸಂಸ್ಥೆಯಿಂದ ಶ್ರುತಿಗೆ ನಾವು ನೈತಿಕ ಬೆಂಬಲ ಕೊಟ್ಟಿದ್ದೇವೆ'' ಅಂತಾರೆ ನಟ ಚೇತನ್.

  ಶ್ರುತಿ ಹರಿಹರನ್ ಕೊಟ್ಟ ಏಟಿಗೆ ಐಶ್ವರ್ಯ ಅರ್ಜುನ್ ತಿರುಗೇಟು.!ಶ್ರುತಿ ಹರಿಹರನ್ ಕೊಟ್ಟ ಏಟಿಗೆ ಐಶ್ವರ್ಯ ಅರ್ಜುನ್ ತಿರುಗೇಟು.!

  ಶ್ರುತಿ ಹರಿಹರನ್ ಹೇಳಿದ್ದೇನು.?

  ಶ್ರುತಿ ಹರಿಹರನ್ ಹೇಳಿದ್ದೇನು.?

  ''#ಮೀಟೂಗೆ ರಾಜಕೀಯ ಬಣ್ಣ ಕಟ್ಟಿರುವುದು ನಿಜಕ್ಕೂ ನಗು ತರಿಸುತ್ತಿದೆ'' ಅಂತಾರೆ ನಟಿ ಶ್ರುತಿ ಹರಿಹರನ್.

  English summary
  MeToo is a political drama by Liberal gang says Prashanth Sambargi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X