ಸರ್ಜಾ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳಸಂಚು: ಸ್ಫೋಟಕ ಸುದ್ದಿ ನೀಡಿದ ಪ್ರಶಾಂತ್ ಸಂಬರ್ಗಿ
ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರ ನಡುವಿನ ಮೀಟೂ ವಿವಾದ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಈ ವಿಷ್ಯಗಳನ್ನ ನೋಡಿದ್ರೆ, ಒಂದು ಕ್ಷಣ ದಿಗ್ಬ್ರಮೆಯಾಗುವುದಂತೂ ನಿಜ.
ಸರ್ಜಾ ಮೇಲೆ ಮೀಟೂ ಆರೋಪ ಕೇಳಿಬಂದಾಗನಿಂದಲೂ ಅವರ ಪರ ನಿಂತಿರುವ ಪ್ರಶಾಂತ್ ಸಂಬರ್ಗಿ ಅವರು, ಇಂದು ಮಧ್ಯಾಹ್ನದ ವೇಳೆ ಬೆಚ್ಚಿಬೀಳಿಸುವ ಸುದ್ದಿಗಳನ್ನ ಕೊಡ್ತೀನಿ ಎಂದಿದ್ದರು. ಅದರಂತೆ ಸಂಜೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಹೌದು, ಅರ್ಜುನ್ ಸರ್ಜಾ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳಸಂಚು ನಡೆದಿತ್ತು ಎಂದು ಬೆಚ್ಚಬೀಳಿಸುವ ಸುದ್ದಿ ಬಿಚ್ಚಿಟ್ಟಿದ್ದಾರೆ. ಸರ್ಜಾ ವಿರುದ್ಧ ಈ ಸಂಚು ರೂಪಿಸಲು ಗ್ರೌಂಡ್ ವರ್ಕ್ ನಡೆದಿದೆಯಂತೆ. ತಂತ್ರಜ್ಙಾನವನ್ನ ಬಳಸಿಕೊಂಡು ಕ್ರಿಮಿನಲ್ ಸ್ಕೆಚ್ ಹಾಕಿದ್ರಂತೆ. ಹೀಗೆ, ಪ್ರಶಾಂತ್ ಸಂಬರ್ಗಿ ಮಾಡಿರುವ ಆರೋಪಗಳು ಭಾರಿ ಅನುಮಾನಕ್ಕೆ ಕಾರಣವಾಗಿದೆ.. ಮುಂದೆ ಓದಿ......

ಶ್ರುತಿ ಫೇಸ್ ಬುಕ್ ಅಮೇರಿಕಾದಲ್ಲಿ ಬಳಕೆಯಾಗಿದೆ
ಮೀಟೂ ಅಭಿಯಾನವನ್ನ ಶ್ರುತಿ ಹರಿಹರನ್ ದುರುಪಯೋಗ ಮಾಡಿಕೊಂಡಿದ್ದು, ದೇಶದ್ರೋಹದ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂದು ಪ್ರಶಾಂತ್ ಸಂಬರ್ಗಿ ದೂರಿದ್ದಾರೆ. ಶ್ರುತಿ ಅವರ ಫೇಸ್ ಬುಕ್ ಅಕೌಂಟ್ ನ್ಯೂಯಾರ್ಕ್, ವಾಷಿಂಗ್ ಟನ್, ಬೆಂಗಳೂರು ಮೂರು ಕಡೆ ಆಪರೇಟ್ ಆಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ದುಡ್ಡು ಕೊಟ್ಟ ಅಪಪ್ರಚಾರ ಮಾಡಿದ್ದಾರೆ
ಶ್ರುತಿ ಹರಿಹರನ್ ಅವರು ಸರ್ಜಾ ವಿರುದ್ಧ ಅಪ್ರಚಾರ ಮಾಡುವುದಕ್ಕಾಗಿ ದುಡ್ಡು ಕೊಟ್ಟು ಸೋಶಿಯಲ್ ಮೀಡಿಯಾವನ್ನ ಬಳಸಿಕೊಂಡಿದ್ದಾರೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಬಂಡವಾಳ ಹೂಡಿದೆ. ಅದಕ್ಕೆ ಸಾಕ್ಷಿ ನಮ್ಮಲ್ಲಿ ಇದೆ, ಪೊಲೀಸರಿಗೆ ನೀಡಿದ್ದೇವೆ ಎಂಬ ಸ್ಫೋಟಕ ಸುದ್ದಿ ಹೊರಹಾಕಿದ್ದಾರೆ.

ಅರ್ಜುನ್ ಸರ್ಜಾ ಟಾರ್ಗೆಟ್ ಯಾಕೆ.?
ಚೆನ್ನೈನಲ್ಲಿ 25 ಕೋಟಿ ವೆಚ್ಚದ ಹನುಮಾನ್ ಮಂದಿರವನ್ನ ನಿರ್ಮಾಣ ಮಾಡ್ತಿದ್ದಾರೆ. ಅದಕ್ಕೆ ವಿರೋಧವಾಗಿ ಈ ಷಡ್ಯಂತ್ರ ಮಾಡಲಾಗಿದೆ. ಕ್ರಿಶ್ಚಿಯನ್ ಮಿಷನರಿಗಳಿಂದ ಇದಕ್ಕೆ ಹಣ ಸಂಗ್ರಹ ಮಾಡಿದ್ದಾರೆ. 'ಹಿಂದೂ ವಿರೋಧಿ ಕ್ಯಾಂಪೈನ್' ಎಂಬ ಹೆಸರಿನಲ್ಲಿ ಅರ್ಜುನ್ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ ಪ್ರಶಾಂತ್ ಸಂಬರ್ಗಿ.

ಶ್ರುತಿ ಯಾಕೆ ಈ ಕೆಲಸ ಮಾಡ್ತಿದ್ದಾರೆ
ಶ್ರುತಿ ಹರಿಹರನ್ ಅವರು ಕೇರಳ ಮೂಲದ ಕಮ್ಯೂನಿಸ್ಟ್ ಹಿನ್ನೆಲೆ ಹೊಂದಿರುವವರು. ಹಾಗಾಗಿ, ಶ್ರುತಿ ಮೂಲಕ ಸರ್ಜಾ ವ್ಯಕ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ 400 ಪುಟಗಳ ದಾಖಲಾತಿಗಳನ್ನ ಸೈಬರ್ ಪೊಲೀಸರಿಗೆ ನೀಡಲಾಗಿದೆ ಎಂದು ಈ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ ಪ್ರಶಾಂತ್ ಸಂಬರ್ಗಿ.


Click it and Unblock the Notifications











