'ಓಲ್ಡ್ ಮಾಂಕ್' ಸಿನಿಮಾಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ ಶ್ರೀನಿ.
ನಟ ನಿರ್ದೇಶಕ ಶ್ರೀನಿ ನಟನೆ ಮತ್ತು ನಿರ್ದೇಶನದ ಓಲ್ಡ್ ಮಾಂಕ್ ಸಿನಿಮಾ ಫೆಬ್ರವರಿ 25ರಂದು ರಾಜ್ಯಾದ್ಯಂತ ತೆರೆಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಕೂಡ ಚಿತ್ರಕ್ಕೆ ಒಳ್ಳೆ ವಿಮರ್ಶೆ ಕೂಡ ನೀಡಿದ್ದಾರೆ.
ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರುವ ಓಲ್ಡ್ ಮಾಂಕ್ ಸಿನಿಮಾಗೆ ಇದೀಗ ಸಮಸ್ಯೆ ಎದುರಾಗಿದೆ. ಸಾಕಷ್ಟು ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಎದುರಾಗೋದು ಹೊಸತೇನಲ್ಲ.
ಈ ಹಿಂದೆ ಕೂಡ ತೆರೆಕಂಡಿದ್ದ ಕನ್ನಡದ ಹಲವು ಚಿತ್ರಗಳಿಗೆ ಥಿಯೇಟರ್ ಸಿಗದೇ, ಅಥವಾ ಒಂದೇ ವಾರಕ್ಕೆ ಸಿನಿಮಾವನ್ನು ತೆಗೆದುಹಾಕಿರುವಂತಹ ಪ್ರಸಂಗಗಳು ಎದುರಾಗಿದೆ. ಇದೀಗ ಅಂಥದ್ದೇ ತೊಂದರೆ ಓಲ್ಡ್ ಮಾಂಕ್ ಸಿನಿಮಾ ತಂಡಕ್ಕೂ ಎದುರಾಗಿದೆ.

ಹೀಗಿದ್ದರು ಕನ್ನಡ ಸಿನಿಮಾಗಳಿಗೆ ಸಿಗುತ್ತಿಲ್ಲ ಬೆಲೆ
ಕನ್ನಡ ಚಿತ್ರಗಳು ಯಾವ ಭಾಷೆಯ ಸಿನಿಮಾಗಳಿಗೂ ಕಡಿಮೆ ಇಲ್ಲ. ನಮ್ಮಲ್ಲೂ ಕೂಡ ಪರಭಾಷೆ ಸಿನಿಮಾಗಳಿಗಿಂತ ಹೆಚ್ಚು ಬಿಗ್ ಬಜೆಟ್ ಮಾತ್ರ ಅಲ್ಲದೆ ಚಿತ್ರದ ಕಥೆ ಮೇಕಿಂಗ್ ಸಾಂಗ್ ಲೊಕೇಶನ್ ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಕನ್ನಡ ಚಿತ್ರಗಳು ಅದ್ದೂರಿ ಆಗಿ ತಯಾರಾಗುತ್ತವೆ. ಕನ್ನಡ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗಿ ಇದೀಗ ದೇಶಾದ್ಯಂತ ಸದ್ದು ಮಾಡುತ್ತವೆ. ಅದರಂತೆ ಕನ್ನಡ ಚಿತ್ರರಂಗದ ಮಾರುಕಟ್ಟೆ ಕೂಡ ವಿಸ್ತಾರವಾಗಿ ಬೆಳೆಯುತ್ತಿದೆ ಹೀಗೆ ಸಾಕಷ್ಟು ಉತ್ತಮ ಮಟ್ಟದಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಮಾತುಗಳು ಕೇಳಿಬರುತ್ತಿರುವ ನಡುವೆ ಇದೀಗ ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಚಿತ್ರ ಮಂದಿರಗಳ ಸಮಸ್ಯೆ ಕಾಡುವುದು ಮಾತ್ರ ತಪ್ಪಿಲ್ಲ.

ಕಳೆದ ವಾರ ತೆರೆಕಂಡ ಸಿನಿಮಾಗಳು ಈ ವಾರ ಎತ್ತಂಗಡಿ
ಯಾರೋ ಪರಭಾಷಾ ನಟನ ಸಿನಿಮಾ ರಾಜ್ಯದ ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತವೆ. ಆದರೆ ಅದೇ ಕನ್ನಡ ಚಿತ್ರಗಳು ಚಿತ್ರ ಮಂದಿರಗಳಿಗೆ ಪರದಾಡುತ್ತಿರುವುದು ದುರದೃಷ್ಟಕರ. ಇತ್ತೀಚೆಗೆ ಕಳೆದ ವಾರ ಕನ್ನಡದಲ್ಲಿ ಜೋಗಿ ಪ್ರೇಮ್ ನಿರ್ದೇಶನ ಏಕ್ ಲವ್ ಯಾ, ಆರ್.ಜೆ ಶ್ರೀನಿ ನಟನೆಯ ಓಲ್ಡ್ ಮಾಂಕ್ ಸಿನಿಮಾ ರಿಲೀಸ್ ಆಗಿದೆ. ಇದರ ಜೊತೆಗೆ ಇನ್ನೊಂದೆರಡು ಕನ್ನಡ ಚಿತ್ರಗಳು ಕೂಡ ರಿಲೀಸ್ ಆಗಿವೆ. ಸ್ಟಾರ್ ಡಮ್ ಇರುವ ಕಾರಣ ನಿರೀಕ್ಷೆಯಂತೆ ನಿರ್ದೇಶಕ ಜೋಗಿ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿತು. ಅದರಂತೆ ಸಿನಿಮಾ ಕೂಡ ಉತ್ತಮ ಮೆಚ್ಚುಗೆ ಪಡೆದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಕಾಡದಿದ್ದರು, ಪೈರಸಿ ಭೂತ ಏಕ್ ಲವ್ ಯಾ ಚಿತ್ರಕ್ಕೆ ನಷ್ಟ ಉಂಟು ಮಾಡಿದೆ. ಆದರೆ ಶ್ರೀನಿ ಅವರ ಓಲ್ಡ್ ಮಾಂಕ್ ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಕಾಡಿದೆ.

ಚಿತ್ರಕ್ಕೆ ಎದುರಾಗಿರುವ ಸಂಕಷ್ಟದ ಬಗ್ಗೆ ಶ್ರೀನಿ ಬೇಸರ
ಹೌದು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಟೋಪಿವಾಲ ಎಂಬ ಸಿನಿಮಾ ನಿರ್ದೇಶನ ಮಾಡಿ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದ ಆರ್.ಜೆ ಶ್ರೀನಿ ಅವರು ನಟನೆಯಲ್ಲಿ ಕೂಡ ತಾನು ಸಮರ್ಥ ಎಂಬುದನ್ನು ಶ್ರೀನಿವಾಸ ಕಲ್ಯಾಣ, ಬೀರ್ ಬಲ್ ಚಿತ್ರದ ಮೂಲಕ ಸಾಬೀತು ಮಾಡಿಕೊಂಡರು. ಅದರಂತೆ ಇದೀಗ ತಾವೇ ನಿರ್ದೇಶನ ಮಾಡಿ ನಟನೆ ಮಾಡಿರುವ ಓಲ್ಡ್ ಮಾಂಕ್ ಎಂಬ ಚಿತ್ರ ಕೂಡ ರಿಲೀಸ್ ಮಾಡಿದ್ದಾರೆ. ಫೆಬ್ರವರಿ 25ರಂದು ಓಲ್ ಮಾಂಕ್ ಸಿನಿಮಾ ರಾಜ್ಯಾದ್ಯಂತ ಸರಿ ಸುಮಾರು ನೂರಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಒಳ್ಳೆಯ ರಿಯಾಕ್ಷನ್ ಕೇಳಿ ಬಂದರು ಕೂಡ ಒಂದೇ ವಾರದೊಳಗೆ ಅನೇಕ ಸೆಂಟರ್ ಗಳಿಂದ ಓಲ್ಡ್ ಮಾಂಕ್ ಸಿನಿಮಾ ಎತ್ತಂಗಡಿ ಆಗಿದೆ. ಇದರಿಂದ ನಟ, ನಿರ್ದೇಶಕ ಶ್ರೀನಿ ಅವರು ಬೇಸರ ವ್ಯಕ್ತಪಡಿಸಸಿದ್ದಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ಶ್ರೀನಿ ಅವರಿಗೆ ನೀವು ಓಲ್ಡ್ ಮಾಂಕ್ ಸಿನಿಮಾವನ್ನು ರಾಜ್ಯದ್ಯಂತ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಬೇರೆ ಯಾವ ಸಿನಿಮಾಗು ಹೀಗೆ ಆಗದಿರಲಿ ಎಂದ ನಿರ್ದೇಶಕ ಶ್ರೀನಿ
ಇದಕ್ಕೆ ಉತ್ತರವಾಗಿ ಶ್ರೀನಿ ಅವರು ನನಗೆ ನಿಜವಾಗಲೂ ಬೇಜರಾಗೋದು ಬೇರೆ ಭಾಷೆ ಸಿನಿಮಾ ರಿಲೀಸ್ ಆಗುತ್ತಿದೆ ಎಂಬುದಕ್ಕಲ್ಲ. ಬೇರೆ ಭಾಷೆ ಚಿತ್ರಗಳಿಗೆ ಸಿಗುವ ಪ್ರದರ್ಶನ ಸಂಖ್ಯೆ ನಮಗೆ ಕನ್ನಡ ಚಿತ್ರ ಗಳಿಗೆ ಸಿಗುತ್ತಿಲ್ಲ. ನಮ್ಮ ಕನ್ನಡ ಸಿನಿ ಪ್ರೇಕ್ಷಕರು ಬೇರೆ ಅವರು ಚಿತ್ರ ಚೆನ್ನಾಗಿದೆ ಎಂದು ಹೇಳಿದಾಗ ಹೋಗಿ ಸಿನಿಮಾ ನೋಡ್ತಾರೆ. ಬೇರೆ ಭಾಷೆ ಚಿತ್ರ ಗಳನ್ನು ಮೊದಲು ನೋಡಲು ಪ್ರಾಮುಖ್ಯತೆ ನೀಡ್ತಾರೆ. ನಾವು ಕೂಡ ಉತ್ತಮ ಸಿನಿಮಾ ಮಾಡುವ ಎಲ್ಲಾ ರೀತಿಯ ಸಾಮರ್ಥ್ಯ ಹೊಂದಿದ್ದೇವೆ ದಯಮಾಡಿ ಕನ್ನಡ ಚಿತ್ರಗಳಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಈ ಓಲ್ಡ್ ಮಾಂಕ್ ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಜಯ್ ಶಾಸ್ತ್ರಿ, ಅರುಣ ಬಾಲರಾಜ್, ಎಸ್.ನಾರಾಯಣ್, ಸಿಹಿ ಕಹಿ ಚಂದ್ರು ಹೀಗೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ


Click it and Unblock the Notifications











