ಪೋರ್ನ್ ಇಂಡಸ್ಟ್ರಿಯ ಕಹಿ ಸತ್ಯ ಬಯಲು ಮಾಡಿದ ಮಿಯಾ ಖಲೀಫಾ!
Recommended Video
ಪೋರ್ನ್ ಇಂಡಸ್ಟ್ರಿಯ ಪಾಪುಲರ್ ಹೆಸರು ಮಿಯಾ ಖಲೀಫಾ. ಈಕೆ ನೀಲಿ ಜಗತ್ತಿನ ನಂಬರ್ 1 ತಾರೆಯಾಗಿದ್ದಳು. ಗ್ಲಾಮರ್ ಲೋಕದಲ್ಲಿ ತನ್ನದೆ ಬ್ರಾಂಡ್ ಸೃಷ್ಟಿಸಿದ ಮಿಯಾ ಖಲೀಫಾ, ಈಗ ತನ್ನ ಬದುಕಿನ ಕಹಿ ಸತ್ಯವನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿಗಷ್ಟೆ ತನ್ನ ಸಂಪಾದನೆ ಬಗ್ಗೆ ಹೇಳಿಕೆ ನೀಡಿದ್ದ ಮಿಯಾ ಖಲೀಫಾ ಎಲ್ಲರಿಗೆ ಅಚ್ಚರಿ ನೀಡಿದ್ದರು. ಅದರ ಮುಂದುವರೆದ ಭಾಗವಾಗಿ ಇದೀಗ ತನ್ನ ಸ್ಥಿತಿಯ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ. 'ಬಿಸಿ' ಪ್ರಪಂಚದ ಹಸಿ ವಿಷಯವನ್ನು ಹೊರ ಹಾಕಿದ್ದಾರೆ.
ಪೋರ್ನ್ ಇಂಡಸ್ಟ್ರಿಯಿಂದ ದೂರವಾಗಿದ್ದರೂ, ಇಂದಿಗೂ ಆಕೆಯನ್ನು ಜನರ ನೋಡುತ್ತಿರುವ ರೀತಿ, ಸಮಾಜದ ವರ್ತನೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಸದ್ಯ, 'ಬಿಬಿಸಿ ವಾಹಿನಿ'ಗೆ ಮಿಯಾ ಖಲೀಫಾ ನೀಡಿರುವ ಒಂದು ಸಂದರ್ಶನ ಸಂಚಲನ ಉಂಟು ಮಾಡಿವೆ. ಆ ಸಂದರ್ಶನದ ಕೆಲ ವಿಷಯಗಳು ಇಲ್ಲಿವೆ.

ಸಮಾಜದ ಜೊತೆಗೆ ಕುಟುಂಬದಿಂದಲೂ ದೂರ
ಪೋರ್ನ್ ಇಂಡಸ್ಟ್ರಿಯಿಂದ ಮಿಯಾ ಖಲೀಫಾ ದೂರವಾಗಿ 4 ವರ್ಷಗಳು ಕಳೆದಿವೆ. ಆದರೆ, ಈಗಲೂ ನಾನು ನನ್ನ ಕುಟುಂಬದಿಂದ ದೂರವಾಗಿ ಇದ್ದೇನೆ ಎಂದಿದ್ದಾರೆ. ''ಕುಟುಂಬ ಸದಸ್ಯರು ಮತ್ತು ತಮ್ಮ ಸುತ್ತ ಮುತ್ತ ಇರುವವರು ದೂರ ಮಾಡಿದ್ದಾರೆ. ಕೆಲವು ತಪ್ಪುಗಳು ಮನ್ನಿಸಲು ಆಗದೆ ಇರುವ ರೀತಿ ಇರುತ್ತದೆ ನಿಜ. ಆದರೆ, ಕಾಲ ಎಲ್ಲವನ್ನು ಸರಿ ಮಾಡುತ್ತದೆ.'' ಎಂದು ಮಿಯಾ ಖಲೀಫಾ ಭಾವುಕವಾಗಿ ಮಾತನಾಡಿದ್ದಾರೆ.

ಜನರು ದಿಟ್ಟಿಸಿ ನೋಡಿದಾಗ ನಾಚಿಕೆ ಆಗುತ್ತದೆ
''ನೀಲಿ ಚಿತ್ರಗಳಲ್ಲಿ ನಟಿಸುವಾಗ ಮಾನಸಿಕ ಒತ್ತಡದಿಂದ ಬಳಲುತ್ತಿದ್ದೆ. ಆದರೆ, ಈಗಲೂ ಜನರ ನಡುವೆ ಹೋದಾಗ ಅದು ಮುಂದುವರೆದ ಹಾಗೆ ಆಗುತ್ತಿದೆ. ಜನರು ದಿಟ್ಟಿಸಿ ನನ್ನನ್ನು ನೋಡಿದಾಗ, ನನ್ನ ಬಟ್ಟೆಯನ್ನು ಗಮನಿಸಿದಾಗ ನಾಚಿಕೆ ಆಗುತ್ತದೆ. ಇದೆಲ್ಲ ನೋಡಿದಾಗ ನಾನು ನನ್ನ ವೈಯಕ್ತಿಕ ಬದುಕನ್ನು ಕಳೆದುಕೊಂಡಿದ್ದೇನೆಯೇ ಅನಿಸುತ್ತದೆ.'' ಎಂದಿದ್ದಾರೆ.

ಪೋರ್ನ್ ಇಂಡಸ್ಟ್ರಿಯಲ್ಲಿ ಇದ್ದದ್ದು ಕೇವಲ ಮೂರೇ ತಿಂಗಳು
ಮಿಯಾ ಖಲೀಫಾ ಬಗ್ಗೆ ಅಚ್ಚರಿ ಎನ್ನಿಸುವ ವಿಷಯ ಏನೆಂದರೆ, ಆಕೆ ಪೋರ್ನ್ ಇಂಡಸ್ಟ್ರಿಯಲ್ಲಿ ಇದ್ದ ಅವಧಿ. ಮಿಯಾ ಖಲೀಫಾ ಬಗ್ಗೆ ಇರುವ ಕ್ರೇಜ್, ಆಕೆಯ ಬ್ರಾಂಡ್ ನೋಡಿದರೆ, ಎಷ್ಟೋ ವರ್ಷದಿಂದ ಇದೆಲ್ಲ ಬಂದಿದೆ ಎನಿಸುವುದು ಸಹಜ. ಆದರೆ, ಅದೆಲ್ಲ ಸುಳ್ಳು. ಮಿಯಾ ಖಲೀಫಾ ನೀಲಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕೇವಲ ಮೂರೇ ತಿಂಗಳು ಮಾತ್ರ.

ಗಂಡಸರಿಗೆ ತಿಳುವಳಿಕೆ ಹೇಳಬೇಕು ಎಂದ ಮಿಯಾ
ಇದೇ ಸಂದರ್ಶನದಲ್ಲಿ ಪೋರ್ನ್ ವಿಡಿಯೋಗಳ ಬಗ್ಗೆ ಗಂಡಸರಿಗೆ ತಿಳುವಳಿಕೆ ನೀಡಬೇಕು ಎಂದು ಹೇಳಿರುವ ಮಿಯಾ ಖಲೀಫಾ ಅದರಲ್ಲಿ ತೋರುವುದೆಲ್ಲ ನಿಜವಲ್ಲ ಎಂದಿದ್ದಾರೆ. ''ಪೋರ್ನ್ ವಿಡಿಯೋಗಳನ್ನು ನೋಡುವ ಗಂಡಸು ತಮ್ಮ ಪ್ರೇಮಿ ಅಥವಾ ಹೆಂಡತಿಯ ಬಳಿಯೂ ಅದನ್ನು ಬಯಸುತ್ತಾರೆ. ಆದರೆ, ಪೋರ್ನ್ ವಿಡಿಯೋದಲ್ಲಿ ನಡೆಯುವುದೆಲ್ಲ ನಿಜವಲ್ಲ. ಯಾರು ಕೂಡ ಆ ರೀತಿ ಮಾಡಲು ಇಷ್ಟ ಪಡುವುದಿಲ್ಲ'' ಎಂದು ತಿಳಿಸಿದ್ದಾರೆ.

ಒಟ್ಟು ದುಡಿಮೆ 8.5 ಲಕ್ಷ ಮಾತ್ರ
ಇತ್ತೀಚಿಗಷ್ಟೆ ತಮ್ಮ ಒಟ್ಟು ದುಡಿಮೆಯ ಲೆಕ್ಕ ಹೇಳಿದ ಮಿಯಾ ಖಲೀಫಾ ಅಚ್ಚರಿ ನೀಡಿದ್ದರು. ''ಪೋರ್ನ್ ಇಂಡಸ್ಟ್ರಿಯಲ್ಲಿ ಎಲ್ಲರೂ ತಿಳಿದ ಹಾಗೆ ಸಂಭಾವನೆ ಹೆಚ್ಚೆನೂ ಇರುವುದಿಲ್ಲ. ನಾನು ನನ್ನ ನೀಲಿ ಚಿತ್ರಗಳಿಂದ ಕೇವಲ 12 ಸಾವಿರ ಡಾಲರ್ (8.5 ಲಕ್ಷ) ಗಳಿಸಿದ್ದೇನೆ ಅಷ್ಟೇ'' ಎಂದಿದ್ದರು ಮಿಯಾ.

ಮಾರ್ಚ್ ತಿಂಗಳಿನಲ್ಲಿ ನಿಶ್ಚಿತಾರ್ಥ
1993 ರಲ್ಲಿ ಹುಟ್ಟಿದ ಮಿಯಾ ಖಲೀಫಾಗೆ ಸದ್ಯ 26 ವರ್ಷದ ಯೌವನ ತುಂಬಿದೆ. 2014ರಲ್ಲಿ ಪೋರ್ನ್ ಇಂಡಸ್ಟ್ರಿಗೆ ಬಂದ ಮಿಯಾ, ಕೇವಲ ಮೂರು ತಿಂಗಳು ಮಾತ್ರ ಅಲ್ಲಿದ್ದರು. ಕಳೆದ ಮಾರ್ಚ್ ತಿಂಗಳಿನಲ್ಲಿ ತಮ್ಮ ನಿಶ್ಚಿತಾರ್ಥ ಫೋಟೋವನ್ನು ಹಂಚಿಕೊಂಡಿದ್ದರು. ತಮ್ಮ ಬಾಯ್ ಫ್ರೆಂಡ್ ರಾಬರ್ಟ್ ಸ್ಯಾಂಡಬರ್ಗ್ ಜೊತೆ ಮಿಯಾ ಖಲೀಫಾ ಎಂಗೇಜ್ ಆಗಿದ್ದರು.


Click it and Unblock the Notifications











