»   » ಅಪ್ಪುಗೆ ಡ್ಯಾನ್ಸ್ ಮಾಡಲು 'ಈ ಇಬ್ಬರು' ಸ್ಪೂರ್ತಿ ಅಂತೆ

ಅಪ್ಪುಗೆ ಡ್ಯಾನ್ಸ್ ಮಾಡಲು 'ಈ ಇಬ್ಬರು' ಸ್ಪೂರ್ತಿ ಅಂತೆ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಕನ್ನಡದ ಅದ್ಭುತ ಡ್ಯಾನ್ಸರ್ ಎನ್ನುವುದು ಜಗತ್ ಜಾಹಿರ. ಪರಭಾಷಾ ನಟ-ನಟಿಯರು ಕೂಡ ಪುನೀತ್ ಅವರ ಡ್ಯಾನ್ಸ್ ಅಂದ್ರೆ ಇಷ್ಟ ಪಡ್ತಾರೆ. ಅದೇ ರೀತಿ ಕನ್ನಡದಲ್ಲೂ ಪವರ್ ಸ್ಟಾರ್ ಡ್ಯಾನ್ಸ್ ಅಂದ್ರೆ ಎಲ್ಲರಿಗೂ ಒಂಥರಾ ಕ್ರೇಜ್. ಅಂತವರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು.

ಹಾಗಿದ್ರೆ, ಪುನೀತ್ ರಾಜ್ ಕುಮಾರ್ ಅವರಿಗೆ ಡ್ಯಾನ್ಸ್ ನಲ್ಲಿ ಸ್ಫೂರ್ತಿ ಯಾರು ಗೊತ್ತಾ? ಪುನೀತ್ ಅವರಿಗೆ ಡ್ಯಾನ್ಸ್ ಮಾಡಬೇಕು ಎಂದು ಎನಿಸಿದ್ದು ಯಾರನ್ನ ನೋಡಿ ಗೊತ್ತಾ? ಬಹುಶಃ ಈ ವಿಷ್ಯ ಅನೇಕರಿಗೆ ಗೊತ್ತಿಲ್ಲ. ಪುನೀತ್ ರಾಜ್ ಕುಮಾರ್ ಗೆ ಡ್ಯಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಆದ್ರೆ, ಆ ಡ್ಯಾನ್ಸ್ ಹೆಚ್ಚು ಇಷ್ಟವಾಗಿದ್ದು, ಮೈಕಲ್ ಜಾಕ್ಸನ್ ಅವರ ಡ್ಯಾನ್ಸ್ ನೋಡಿದ್ಮೇಲಂತೆ.

ಅಪ್ಪು-ದೀಪು, ಅಂದು-ಇಂದು.!

Michael Jackson and Shiva rajkumar inspiration For Puneeth Dance

ಈ ವಿಷ್ಯವನ್ನ ಸ್ವತಃ ಪುನೀತ್ ಅವರೇ ಇತ್ತೀಚೆಗೆ ನಡೆದ 'ರಾಜಕುಮಾರ' ಸೆಂಚುರಿ ಸಂಭ್ರಮ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಆರಂಭದಲ್ಲಿ ಮೈಕಲ್ ಜಾಕ್ಸನ್ ಅವರನ್ನ ನೋಡಿ ಸ್ಪೂರ್ತಿಗೊಂಡ ಅಪ್ಪು, ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಂತೆ ಡ್ಯಾನ್ಸ್ ಮಾಡಬೇಕು ಎನ್ನುವ ಗುರಿ ಹೊಂದಿದ್ದರಂತೆ. ಹೀಗಾಗಿ, ಪುನೀತ್ ಅವರಿಗೆ ಮೈಕಲ್ ಜಾಕ್ಸನ್ ಮತ್ತು ಶಿವಣ್ಣ ಡ್ಯಾನ್ಸ್ ನಲ್ಲಿ ಸ್ಪೂರ್ತಿ ಆಗಿದ್ದಾರಂತೆ.

'ರಾಜಕುಮಾರ' ಸಂಭ್ರಮದಲ್ಲಿ ಡ್ಯುಯೆಟ್ ಹಾಡಿದ ಕಿಚ್ಚ-ಅಪ್ಪು ವಿಡಿಯೋ ನೋಡಿ

English summary
Michael Jackson and Shiva rajkumar inspiration For My Dance Says Kannada Actor Puneeth Rajkumar in Raajakumara 100 Days Celebartion Function

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada