For Quick Alerts
  ALLOW NOTIFICATIONS  
  For Daily Alerts

  ಮದುವೆಯ ಮಧುರ ಅನುಭವದ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಿಲನಾ-ಕೃಷ್ಣ ಮಾತು

  |

  ಜನಪ್ರಿಯ ತಾರಾ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ, ಪ್ರೇಮಿಗಳ ದಿನವಾದ ಇಂದು ಮದುವೆಯಾಗಿದ್ದಾರೆ. ತಮ್ಮ ಎಂಟು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.

  ಪ್ರತಿಯೊಬ್ಬರ ಜೀವನದಲ್ಲೂ ಬಹುಮುಖ್ಯ ಘಟ್ಟವೆಂದು ಪರಿಗಣಿಸಲಾಗುವ ಮದುವೆ ಬಗ್ಗೆ ಈ ನವದಂಪತಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ. ಮದುವೆ ಶಾಸ್ತ್ರ ಮುಗಿಸಿ ಹೊರಬಂದು ಮಾಧ್ಯಮಗಳೊಟ್ಟಿಗೆ ಸಂತಸ ಹಂಚಿಕೊಂಡಿದ್ದಾರೆ ಈ ಕ್ಯೂಟ್ ದಂಪತಿ.

  ಎಂಟು ವರ್ಷದ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಮಿಲನಾ-ಕೃಷ್ಣಎಂಟು ವರ್ಷದ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಮಿಲನಾ-ಕೃಷ್ಣ

  'ಲವ್ ಮಾಕ್ಟೆಲ್ ಸಿನಿಮಾದಲ್ಲಿ ಹುಟ್ಟುಹಬ್ಬ ಮರೆತು ಒದಿಸಿಕೊಂಡ ಹಾಗೆ ನಿಜ ಜೀವನದಲ್ಲಿ ದಿನಾಂಕ ಮರೆಯಬಾರದಲ್ಲ ಅದಕ್ಕೆ ಈ ದಿನ ಮದುವೆ ಆಗಿದ್ದೇನೆ' ಎಂದು ತಮಾಷೆ ಮಾಡಿದರು ಡಾರ್ಲಿಂಗ್ ಕೃಷ್ಣ.

  'ಫೆಬ್ರವರಿ 14 ರಂದು ಮದ್ವೆ ಆಗಬೇಕು ಎಂದು ನಾವು ಯೋಚಿಸಿ ಆಗಿದ್ದಲ್ಲ. ಮದುವೆಗೆ ದಿನ ಕೇಳಿದಾಗ ಶಾಸ್ತ್ರಿಗಳೇ ಈ ದಿನ ಕೊಟ್ಟರು. ರವಿಚಂದ್ರನ್ ಸರ್ ಅವರ ಮದುವೆಯೂ ಇದೇ ದಿನ ಆಗಿರುವುದು. ಹಾಗಾಗಿ ನಾವು ಸಹ ಇದೇ ದಿನ ಇರಲಿ ಎಂದುಕೊಂಡೆವು' ಎಂದಿದ್ದಾರೆ ಕೃಷ್ಣ.

  ಮಿಲನಾ ಸ್ವಿಮ್ಮರ್ ಹಾಗಾಗಿ ನೀರಿನ ಮಧ್ಯೆ ಮಂಟಪ ಹಾಕಿದೆವು: ಕೃಷ್ಣ

  ಮಿಲನಾ ಸ್ವಿಮ್ಮರ್ ಹಾಗಾಗಿ ನೀರಿನ ಮಧ್ಯೆ ಮಂಟಪ ಹಾಕಿದೆವು: ಕೃಷ್ಣ

  'ಸಿನಿಮಾದವರಾದ್ದ ಕಾರಣ ಏನಾದರೂ ಡಿಫರೆಂಟ್ ಆಗಿ ಮಾಡೋಣ ಎಂದುಕೊಂಡಿದ್ದೆವು. ಮಿಲನಾ ಗೆ ಈಜು ಇಷ್ಟ. ಆಕೆ ಒಳ್ಳೆಯ ಸ್ವಿಮ್ಮರ್ ಸಹ ಹಾಗಾಗಿ ಪೂಲ್ ಮಧ್ಯೆ ಮಂಟಪ ಮಾಡಿದರೆ ಚೆನ್ನಾಗಿರುತ್ತೆ ಎಂದುಕೊಂಡು. ಹಾಗೆಯೇ ಮಾಡಿದೆವು. ಈ ಎಲ್ಲ ಅರೆಂಜ್‌ಮೆಂಟ್ಸ್ ಗೆ ಐದು-ಆರು ದಿನ ತಗುಲಿತು' ಎಂದು ಮಂಟಪದ ಪರಿಕಲ್ಪನೆ ಬಗ್ಗೆ ಹೇಳಿದರು ಕೃಷ್ಣ.

  ಕಾಡಿನ ಥೀಮ್‌ನಲ್ಲಿ ಆರತಕ್ಷತೆ ನಡೆಯಲಿದೆ: ಕೃಷ್ಣ

  ಕಾಡಿನ ಥೀಮ್‌ನಲ್ಲಿ ಆರತಕ್ಷತೆ ನಡೆಯಲಿದೆ: ಕೃಷ್ಣ

  'ಸಂಜೆ ಖಾಸಗಿ ಹೋಟೆಲ್‌ನಲ್ಲಿ ಆರತಕ್ಷತೆ ಇದ್ದು. ಕಾಡಿನ ಥೀಮ್‌ನಲ್ಲಿ ಆರತಕ್ಷತೆ ನಡೆಯಲಿದೆ. ಪ್ರತಿ ವರ್ಷ ಪ್ರೇಮಿಗಳ ದಿನಕ್ಕೆ ಏನಾದರೂ ಸ್ಪೆಷಲ್ ಆಗಿ ಮಾಡೋಣ ಎಂದುಕೊಳ್ಳುತ್ತಿದ್ದೆವು. 2021 ರ ವ್ಯಾಲೆಂಟೈನ್ಸ್ ಡೇ ಸಂಪೂರ್ಣ ಭಿನ್ನವೇ ಆಗಿಹೋಯಿತು' ಎಂದರು ಕೃಷ್ಣ.

  'ಹೇಗೆ ಬದುಕಬೇಕು ಎಂಬುದನ್ನು ಲವ್ ಮಾಕ್ಟೆಲ್ 2 ನಲ್ಲಿ ಹೇಳಲಿದ್ದೀವಿ'

  'ಹೇಗೆ ಬದುಕಬೇಕು ಎಂಬುದನ್ನು ಲವ್ ಮಾಕ್ಟೆಲ್ 2 ನಲ್ಲಿ ಹೇಳಲಿದ್ದೀವಿ'

  'ನಾನು ನಿರ್ದೇಶನ ಮಾಡುವ ಸಿನಿಮಾದಲ್ಲಿ ದಂಪತಿಗಳು, ಪ್ರೇಮಿಗಳು ಹೇಗಿರಬೇಕು ಎಂಬುದನ್ನು ತೋರಿಸಿಕೊಡುತ್ತೇವೆ. ಲವ್ ಮಾಕ್ಟೆಲ್ 2 ಸಿನಿಮಾದಲ್ಲಿ ಮುಂದಿನ ಬದುಕಿನಲ್ಲಿ ಹೇಗಿರಬೇಕು ಎಂಬುದನ್ನು ಹೇಳಲಿದ್ದೀವಿ' ಎಂದಿದ್ದಾರೆ ಕೃಷ್ಣ.

  ಲವ್ ಮಾಕ್ಟೆಲ್ 2 ಹಾಡು ಬಿಡುಗಡೆ

  ಲವ್ ಮಾಕ್ಟೆಲ್ 2 ಹಾಡು ಬಿಡುಗಡೆ

  ಇದೇ ದಿನ ಲವ್ ಮಾಕ್ಟೆಲ್ 2 ಸಿನಿಮಾದ ಲಿರಿಕಲ್ ಹಾಡು ಬಿಡುಗಡೆ ಆಗಿದೆ. 'ನಿನ್ನದೇ ಜನುಮ' ಎಂಬ ಈ ಹಾಡನ್ನು ನಕುಲ್ ಅಭ್ಯಂಕರ್ ಹಾಡಿದ್ದಾರೆ. ಹಾಡಿಗೆ ಸಂಗೀತವೂ ಅವರದ್ದೇ. ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶಿಸುತ್ತಿದ್ದು, ಕತೆಯನ್ನು ಮಿಲನಾ ಹಾಗೂ ಕೃಷ್ಣ ಒಟ್ಟಾಗಿ ಬರೆದಿದ್ದಾರೆ.

  ಸಿನಿಮಾ ರಿಲೀಸ್ ಗು ಮುಂಚೆಯೇ ಬರ್ತಿದೆ ಸಿಕ್ಕಾಪಟ್ಟೆ ಆಫರ್ | Zaid Khan | Filmibeat Kannada
  English summary
  Milana Nagaraj and Darling Krishna talked about their marriage which happen today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X