ಬ್ಯಾಚಿಲ್ಲೋರೆಟ್ ಪಾರ್ಟಿಯಲ್ಲಿ ಮಿಂಚಿದ ಕೃಷ್ಣ-ಮಿಲನ ನಾಗರಾಜ್
'ಲವ್ ಮಾಕ್ಟೈಲ್' ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಜೋಡಿಯ ಮದುವೆ 2021ರ ಫೆಬ್ರವರಿಯಲ್ಲಿ ನಿಶ್ಚಯವಾಗಿದೆ. ಮದುವೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಎಲ್ಲ ತಯಾರಿ ನಡೆಸುತ್ತಿದ್ದಾರೆ.
ಇದೀಗ, ಮದುವೆಗೂ ಮುನ್ನ ಸ್ನೇಹಿತರ ಜೊತೆ ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಿದ್ದಾರೆ ನಟಿ ಮಿಲನ. ಈ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಿಲನ ಗೆಳತಿಯರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಮಿಲನ ನಾಗರಾಜ್ ಮತ್ತು ಕೃಷ್ಣ ಜೋಡಿ ತಮಿಳುನಾಡಿನ ಕಾಂಚೀಪುರಂಗೆ ಹೋಗಿದ್ದರು. ಮದುವೆ ಹಿನ್ನೆಲೆ ಅಗತ್ಯ ವಸ್ತುಗಳನ್ನು ಖರೀದಿಸಲು ತೆರಳಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

ಡಾರ್ಲಿಂಗ್ ಕೃಷ್ಣ ಸಹ ಈ ಬ್ಯಾಚಿಲ್ಲೋರೆಟ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಮಿಲನ ಮತ್ತು ಕೃಷ್ಣ ಅವರು ಪಾರ್ಟಿಯಲ್ಲಿ ಒಟ್ಟಿಗೆ ಹೆಜ್ಜೆ ಹಾಕಿರುವ ಫೋಟೋವನ್ನು ಸ್ವತಃ ಕೃಷ್ಣ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂದ್ಹಾಗೆ, ಕೃಷ್ಣ ಮತ್ತು ಮಿಲನ ಅವರ ಮದುವೆ 2021ರ ಫೆಬ್ರಸವರಿ 14 ರಂದು ನಡೆಯಲಿದೆ. ಪ್ರೇಮಿಗಳ ದಿನದ ವಿಶೇಷವಾಗಿ ಲವ್ ಮಾಕ್ಟೈಲ್ ಜೋಡಿ ಹೊಸ ಜೀವನ ಆರಂಭಿಸಲಿದೆ. ಬೆಂಗಳೂರಿನಲ್ಲಿ ಮದುವೆ ನಡೆಸಲು ಹಿರಿಯ ನಿರ್ಧರಿಸಿದ್ದು, ಸದ್ಯಕ್ಕೆ ಎಲ್ಲಿ ಎಂಬುದು ಬಹಿರಂಗವಾಗಿಲ್ಲ.

ಒಂದು ಕಡೆ ಮದುವೆ ತಯಾರಿ ನಡೆಸುತ್ತಿರುವ ಜೋಡಿ ಮತ್ತೊಂದೆಡೆ ಸಿನಿಮಾ ಶೂಟಿಂಗ್ ಸಹ ಮಾಡುತ್ತಿದ್ದಾರೆ. ಲವ್ ಮಾಕ್ಟೈಲ್ ಸಿನಿಮಾದ ಯಶಸ್ಸಿನ ಬಳಿಕ ಲವ್ ಮಾಕ್ಟೈಲ್ 2 ಚಿತ್ರದ ಕೆಲಸವನ್ನು ಜೊತೆ ಜೊತೆಯಾಗಿ ನಿರ್ವಹಿಸುತ್ತಿದ್ದಾರೆ.


Click it and Unblock the Notifications











