ನಿಮ್ಮ ರೀತಿ ನನ್ನನ್ನು ಯಾರು ಪ್ರೀತ್ಸಲ್ಲ: ಭಾವಿ ಪತಿ ಕೃಷ್ಣ ಹುಟ್ಟುಹಬ್ಬಕ್ಕೆ 'ನಿಧಿಮಾ' ಪ್ರೀತಿಯ ವಿಶ್

ಸ್ಯಾಂಡಲ್ ವುಡ್ ನಟ ಮತ್ತು ನಿರ್ದೇಶಕ ಡಾರ್ಲಿಂಗ್ ಕೃಷ್ಣಗೆ ಹುಟ್ಟುಹಬ್ಬದ ಸಂಭ್ರಮ. ಲವ್ ಮಾಕ್ ಟೇಲ್ ಸಕ್ಸಸ್ ನ ಖುಷಿಯಲ್ಲಿರುವ ಕೃಷ್ಣಗೆ ಈ ಬಾರಿಯ ಹುಟ್ಟುಹಬ್ಬ ಮತ್ತಷ್ಟು ವಿಶೇಷ. ಕೊರೊನಾ ಲಾಕ್ ಡೌನ್ ಹಿನ್ನಲೆ ಕೃಷ್ಣ ಅದ್ದೂರಿ ಹುಟ್ಟುಹಬ್ಬಕ್ಕೆ ತೆರೆಬಿದ್ದಿದೆ. ಆದರೆ ಸರಳವಾಗಿ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Recommended Video

ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ದುನಿಯಾ ವಿಜಯ್ | Duniya vijay | Huccha Venkat

ಕೃಷ್ಣ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ. ಲವ್ ಮಾಕ್ ಟೇಲ್ ಸಿನಿಮಾದ ಆದಿ ಪಾತ್ರದ ಮೂಲಕ ಕನ್ನಡ ಚಿತ್ರಪ್ರಿಯರ ನಿದ್ದೆ ಗೆಡಿಸಿರುವ ಕೃಷ್ಣಗೆ ಭಾವಿ ಪತ್ನಿ ಮಿಲನಾ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ...

ನಿನ್ನಷ್ಟು ನನ್ನನ್ನು ಯಾರು ಪ್ರೀತ್ಸಲ್ಲ

ನಿನ್ನಷ್ಟು ನನ್ನನ್ನು ಯಾರು ಪ್ರೀತ್ಸಲ್ಲ

ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ಭಾವಿ ಪತ್ನಿ ಮಿಲನಾ ನಾಗರಾಜ್ ವಿಶೇಷವಾಗಿ ಶುಭಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸಿರುವ "ಮಿಲನಾ ನಿಮ್ಮ ರೀತಿ ನನ್ನನ್ನು ಯಾರು ಪ್ರೀತ್ಸಲ್ಲ. ಯು ಆರ್ ದಿ ಬೆಸ್ಟ್. ನಾನು ತುಂಬಾ ಅದೃಷ್ಟವಂತ. ಹುಟ್ಟುಹಬ್ಬದ ಶುಭಾಷಯಗಳು" ಎಂದು ಹೇಳಿದ್ದಾರೆ.

ಲವ್ ಮಾಕ್ ಟೇಲ್-2 ಪೋಸ್ಟರ್

ಲವ್ ಮಾಕ್ ಟೇಲ್-2 ಪೋಸ್ಟರ್

ಡಾರ್ಲಿಂಗ್ ಕೃಷ್ಣ ಸದ್ಯ ಲವ್ ಮಾಕ್ ಟೇಲ್ -2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಲಾಕ್ ಡೌನ್ ನಲ್ಲಿ ಕಥೆ ಮಾಡಿ ಮುಗಿಸಿರುವ ಕೃಷ್ಣ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಮಿಲನಾ ಪಾರ್ಟ್-2 ಸಿನಿಮಾದ ಪೋಸ್ಟರ್ ಶೇರ್ ಮಾಡಿ ವಿಶ್ ಮಾಡಿದ್ದಾರೆ.

'ಸಂತೋಷ ಏನು ಎಂದು ತೋರಿಸಿದವಳು ನೀನು

'ಸಂತೋಷ ಏನು ಎಂದು ತೋರಿಸಿದವಳು ನೀನು

ಈ ಹಿಂದೆ ಮಿಲನಾ ಹುಟ್ಟುಹಬ್ಬಕ್ಕೆ ಡಾರ್ಲಿಂಗ್ ಕೃಷ್ಣ ಶುಭಹಾರೈಸಿದ್ದರು. "ನಿನ್ನ ಪರಿಶುದ್ಧವಾದ ಪ್ರೀತಿ, ನಿನ್ನ ಪರಿಶುದ್ಧವಾದ ಹೃದಯ, ಪರಿಶುದ್ಧವಾದ ನಗು, ನಿನ್ನನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೆ. ನಿಜವಾದ ಸಂತೋಷ ಅಂದರೆ ಏನು ಎಂದು ನನಗೆ ತೋರಿಸಿದೆ. ಇದು ನನಗೆ ನಿಧಿಮಾ ಬರೆಯಲು ಪ್ರೇರಣೆಯಾಯಿತು. ಹುಟ್ಟುಹಬ್ಬದ ಶುಭಾಶಯಗಳು" ಎಂದು ವಿಶ್ ಮಾಡಿದ್ದಾರೆ.

ನಿಜ ಜೀವನದ ಪ್ರೇಮಿಗಳು

ನಿಜ ಜೀವನದ ಪ್ರೇಮಿಗಳು

ಆದಿ ಮತ್ತು ನಿಧಿ ಪಾತ್ರದಿಂದ ಕೃಷ್ಣ ಮತ್ತು ಮಿಲನಾ ನಾಗರಾಜ್ ಕನ್ನಡ ಚಿತ್ರಪ್ರೇಕ್ಷಕರ ಮನೆ ಮಾತಾಗಿದ್ದಾರೆ. ನಿಜ ಜೀವನದಲ್ಲಿಯೂ ಇಬ್ಬರೂ ಪ್ರೇಮಿಗಳೆಂಬ ವಿಚಾರ ಬಹಿರಂಗವಾಗಿದ್ದು ಲವ್ ಮಾಕ್ ಟೇಲ್ ಸಿನಿಮಾ ನಂತರ. ಈ ಸಿನಿಮಾ ನಂತರ ಇಬ್ಬರೂ ಯಾವುದೇ ಮುಚ್ಚುಮರೆಯಿಲ್ಲದೆ ಪ್ರೀತಿ ವಿಚಾರವನ್ನು ಹೇಳಿಕೊಂಡಿದ್ದಾರೆ. ಸದ್ಯ ಈ ಜೋಡಿ ಲವ್ ಮಾಕ್ ಟೋಲ್-2 ನಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Actress Milana Nagaraj birthday wishes to Actor Darling Krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X