'ಲವ್ ಬರ್ಡ್ಸ್' ಆಗಲಿದ್ದಾರೆ ನಿಜ ಜೀವನದ ಲವ್ ಬರ್ಡ್ಸ್ ಕೃಷ್ಣ-ಮಿಲನಾ

'ಲವ್ ಮಾಕ್ಟೆಲ್ 2' ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ. 'ಲವ್ ಮಾಕ್ಟೆಲ್ 3' ಸಿನಿಮಾಕ್ಕಾಗಿ ಈಗಾಗಲೇ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಈ ಜೋಡಿಯಿಂದ ಹೊರಬಂದಿಲ್ಲ.

ಆದರೆ ಈ ನಡುವೆ ಈ ಕ್ಯೂಟ್ ಜೋಡಿ ಹೊಸ ಸಿನಿಮಾಕ್ಕೆ ಸಹಿ ಹಾಕಿದೆ. 'ಲವ್ ಮಾಕ್ಟೆಲ್' ಮೋಡಿಯನ್ನೇ ಹೊಸ ಸಿನಿಮಾದಲ್ಲಿ ಮಾಡಲು ಮುಂದಾಗಿದೆ. ಸಿನಿಮಾದ ಹೆಸರು 'ಲವ್ ಬರ್ಡ್ಸ್'.

ಮದುವೆ ಆದಮೇಲಿನ ಪ್ರೇಮಕತೆಯನ್ನು 'ಲವ್ ಬರ್ಡ್ಸ್' ಒಳಗೊಂಡಿದ್ದು, ಇತ್ತೀಚೆಗಷ್ಟೆ ಮದುವೆಯಾಗಿರುವ ಯುವ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಈ ಸಿನಿಮಾಕ್ಕೆ ಸೂಕ್ತವಾದ ಆಯ್ಕೆ ಎಂದೆನಿಸಿ ಈ ಇಬ್ಬರು ನಟರನ್ನು ಆಯ್ದುಕೊಳ್ಳಲಾಗಿದೆ.

'ಲವ್ ಬರ್ಡ್ಸ್' ಸಿನಿಮಾವನ್ನು ಪಿಸಿ ಶೇಖರ್ ನಿರ್ದೇಶನ ಮಾಡುತ್ತಿದ್ದು, ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ಅರ್ಜುನ್ ಜನ್ಯ ಅವರದ್ದು.

ಮಿಲನಾ ನಾಗರಾಜ್ ಹೇಳಿದ್ದೇನು?

ಮಿಲನಾ ನಾಗರಾಜ್ ಹೇಳಿದ್ದೇನು?

''ನಾನು ಹಾಗೂ ಕೃಷ್ಣ ಮತ್ತೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಅದಕ್ಕಾಗಿ ಚಿತ್ರಕತೆ ಬರೆಯಬೇಕು ಎಂದುಕೊಂಡಿದ್ದೆವು. ಆದರೆ ಕೃಷ್ಣ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ಅದು ಸಾಧ್ಯವಾಗಿರಲಿಲ್ಲ. ಆದರೆ ಈ ನಡುವೆ ಒಳ್ಳೆಯ ಸ್ಕ್ರಿಪ್ಟ್ ನಮ್ಮಿಬ್ಬರನ್ನು ಹುಡುಕಿಕೊಂಡು ಬಂತು. ಚಿತ್ರಕತೆ ಕನೆಕ್ಟ್ ಆದ ಕಾರಣ ನಟಿಸಲು ಒಪ್ಪಿಕೊಂಡೆವು'' ಎಂದಿದ್ದಾರೆ ಮಿಲನಾ ನಾಗರಾಜ್.

ಪಿಸಿ ಶೇಖರ್ ಮಾತು

ಪಿಸಿ ಶೇಖರ್ ಮಾತು

ಕಳೆದ ಒಂದೆರಡು ದಶಕಗಳಲ್ಲಿ ಮದುವೆಯ ಬಗ್ಗೆ ದೃಷ್ಟಿಕೋನವೇ ಬದಲಾವಣೆ ಆಗಿದೆ. ಕುಟುಂಬದ ಅರ್ಥ, ಪುರುಷ ಮಹಿಳೆಯ ಜವಾಬ್ದಾರಿ ಎಲ್ಲವೂ ಬದಲಾಗಿದೆ. ಈಗ ಮಹಿಳೆ ಸ್ವಾವಲಂಬಿ ಆಗಿದ್ದಾಳೆ, ದುಡಿಯುವ ಮಹಿಳೆ ಸ್ವಾತಂತ್ರ್ಯ ಕೇಳುತ್ತಾಳೆ. ಹೊಸದಾಗಿ ಮದುವೆಯಾದ ಆಧುನಿಕ ಕಾಲಘಟ್ಟದ ದಂಪತಿಯ ಕತೆಯನ್ನು 'ಲವ್ ಬರ್ಡ್ಸ್' ಸಿನಿಮಾ ಒಳಗೊಂಡಿದೆ'' ಎಂದಿದ್ದಾರೆ ನಿರ್ದೇಶಕ ಪಿಸಿ ಶೇಖರ್. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಸೇರಿದಂತೆ ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್, ಅವಿನಾಶ್ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.

ಇಬ್ಬರೂ ಹಲವು ಸಿನಿಮಾಗಳಲ್ಲಿ ಬ್ಯುಸಿ

ಇಬ್ಬರೂ ಹಲವು ಸಿನಿಮಾಗಳಲ್ಲಿ ಬ್ಯುಸಿ

ಮದುವೆಯ ಬಳಿಕವೂ ಮಿಲನಾ ಹಾಗೂ ಕೃಷ್ಣ ಇಬ್ಬರೂ ಸಹ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಮಿಲನಾ ನಟಿಸಿರುವ 'ಫಾರ್ ರಿಜಿಸ್ಟ್ರೇಷನ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇನ್ನು ಕೃಷ್ಣ ನಟನೆಯ 'ಲಕ್ಕಿ ಮ್ಯಾನ್', 'ಶುಗರ್ ಫ್ಯಾಕ್ಟರಿ' ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿವೆ. ಜೊತೆಗೆ 'ದಿಲ್‌ಪಸಂದ್', 'ಲವ್ ಮಿ ಆರ್ ಹೇಟ್ ಮೀ' ಸಿನಿಮಾಗಳು ಸಹ ಬರಲಿವೆ. ಇದರ ಜೊತೆಗೆ ಈಗ 'ಲವ್ ಬರ್ಡ್ಸ್' ಸೇರಿಕೊಂಡಿದೆ.

ದೊಡ್ಡ ಹಿಟ್ ಅದ 'ಲವ್ ಮಾಕ್ಟೆಲ್'

ದೊಡ್ಡ ಹಿಟ್ ಅದ 'ಲವ್ ಮಾಕ್ಟೆಲ್'

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಹಲವು ವರ್ಷ ಪರಸ್ಪರ ಪ್ರೀತಿಸಿ 2020 ರಲ್ಲಿ ವಿವಾಹವಾದರು. ಮದುವೆಗೆ ಮುನ್ನ ಬಿಡುಗಡೆ ಆಗಿದ್ದ ಅವರಿಬ್ಬರ 'ಲವ್ ಮಾಕ್ಟೆಲ್' ಸಿನಿಮಾ ದೊಡ್ಡ ಹಿಟ್ ಆಗಿತ್ತು.ಅ ದರಲ್ಲಿಯೂ ಒಟಿಟಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿತು. ಮದುವೆಯ ಬಳಿಕ 'ಲವ್ ಮಾಕ್ಟೆಲ್ 2' ಸಿನಿಮಾವನ್ನು ಇದೇ ಜೋಡಿ ನಿರ್ಮಾಣ ಮಾಡಿದರು. ಆ ಸಿನಿಮಾ ಸಹ ಚಿತ್ರಮಂದಿರಗಳಲ್ಲಿ ಯಶಸ್ವಿಯಾಯಿತು. ಒಟಿಟಿಯಲ್ಲಿಯೂ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

More from Filmibeat

English summary
Milana Nagaraj and Darling Krishna acting in new movie Love Birds. Movie is directed by PC Shekhar. Movie is about newly married couple.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X