For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗಿ ವರ್ಷ ಕಳೆವ ಮುನ್ನವೇ ಜಗಳ ಮಾಡಿಕೊಂಡ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್!

  |

  ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪ್ರಸ್ತುತ ಸ್ಯಾಂಡಲ್‌ವುಡ್‌ನ ಕ್ಯೂಟ್ ದಂಪತಿ. ಕಳೆದ ವರ್ಷ ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳಿಂದ ದಂಪತಿಗಳಾದ ಈ ಜೋಡಿ ಮದುವೆಯಾಗಿ ವರ್ಷ ಕಳೆವ ಮುಂಚೆಯೇ ಪಾಪ ಜಗಳ ಮಾಡಿಕೊಂಡಿದೆ!

  ನಟಿ ಮಿಲನಾ ನಾಗರಾಜ್ ಪತಿ ಡಾರ್ಲಿಂಗ್ ಕೃಷ್ಣ ವಿರುದ್ಧ ರುದ್ರಾವತಾರ ತಾಳಿದ್ದಾರೆ. ಪತ್ನಿ ಮಿಲನಾ ನಾಗರಾಜ್ ತಮಗೆ ಬೈಯ್ಯುತ್ತಿರುವುದನ್ನು ಡಾರ್ಲಿಂಗ್ ಕೃಷ್ಣ ವಿಡಿಯೋ ಮಾಡಿಕೊಂಡಿದ್ದಾರೆ. ಮಿಲನಾ ನಾಗರಾಜ್ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಿಲನಾ ನಾಗರಾಜ್ ಪತಿ ಡಾರ್ಲಿಂಗ್ ಕೃಷ್ಣಗೆ ಬೈಯ್ಯುವುದಕ್ಕೆ ಕಾರಣ ಸಿನಿಮಾ ಟ್ರೇಲರ್!

  ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಒಟ್ಟಿಗೆ ನಟಿಸಿದ್ದ 'ಲವ್ ಮಾಕ್ಟೆಲ್' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಮುಗಿದು ಬಹು ಸಮಯವಾಗಿದೆ. ಆದರೆ ಸಿನಿಮಾದ ಟ್ರೇಲರ್ ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಇದು ಮಿಲನಾ ನಾಗರಾಜ್‌ಗೆ ಸಿಟ್ಟು ತರಿಸಿದೆ.

  'ಯಾರ್ಯಾರೋ ಟ್ರೇಲರ್ ಬಿಡುಗಡೆ ಮಾಡಿಕೊಂಡು ಓಡಾಡುತ್ತಿದ್ದಾರೆ. ನಿಂಗೇನೋ ಬಂದಿರೋದು ದೊಡ್ ರೋಗ. ಟ್ರೇಲರ್ ರೆಡಿಯಾಗಿ ಒಂದು ತಿಂಗಳಾಯ್ತು ತಾನೆ. ಟ್ರೇಲರ್ ಇವತ್ತು ರಿಲೀಸ್ ಆಗುತ್ತೆ, ನಾಳೆ ರಿಲೀಸ್ ಆಗುತ್ತೆ ಅಂತ ಕಾಯ್ತಾನೆ ಇದೀನಿ. ಆದ್ರೆ ನೀನು ಬೇರೆ ಶೂಟಿಂಗ್‌ ಅಲ್ಲಿ ಮಜಾ ಮಾಡ್ಕೋಂಡು ಓಡಾಡ್ತಾ ಇದೀಯ'' ಎಂದು 'ಲವ್ ಮಾಕ್ಟೆಲ್ 2' ನಿರ್ದೇಶಕರೂ ಆಗಿರುವ ಡಾರ್ಲಿಂಗ್ ಕೃಷ್ಣಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಮಿಲನಾ.

  ಹಾಟ್ ಫೋಟೊ ಶೂಟ್ ನೆನಪಿಸಿದ ಮಿಲನಾ

  ಹಾಟ್ ಫೋಟೊ ಶೂಟ್ ನೆನಪಿಸಿದ ಮಿಲನಾ

  'ನಾನು ಶೂಟಿಂಗ್‌ಗೆ ಮಜಾ ಮಾಡಲು ಹೋಗಲ್ಲ' ಎಂದ ಡಾರ್ಲಿಂಗ್ ಕೃಷ್ಣಗೆ ಅವರ ಇತ್ತೀಚಿನ ಫೋಟೊ ಶೂಟ್ ಅನ್ನು ನೆನಪಿಸಿದ್ದಾರೆ ಮಿಲನಾ. ಡಾರ್ಲಿಂಗ್‌ ಕೃಷ್ಣರ ಹೊಸ ಸಿನಿಮಾದ ಫೊಟೊ ಶೂಟ್ ಬಹಳ ಹಾಟ್ ಅಗಿ ಮಾಡಲಾಗಿದೆ. ಜಗಳ ಮುಂದುವರೆಸಿರುವ ಮಿಲನಾ, ''ಮನೆಗೆ ಬಂದಿರುವವರಿಗೆಲ್ಲ ಟ್ರೇಲರ್ ನೋಡಿ, ಟ್ರೇಲರ್ ನೋಡಿ ಎಂದು ತೋರಿಸುತ್ತೀಯಲ್ಲ. ಟ್ರೇಲರ್ ಮಾಡಿರುವುದು ಜನರಿಗೆ ತೋರಿಸುವುದಕ್ಕಾ ಇಲ್ಲ ಮನೆಗೆ ಬಂದವರಿಗೆ ತೋರಿಸೋದಕ್ಕ' ಎಂದು ಮಿಲನಾ ನಾಗರಾಜ್ ಪ್ರಶ್ನೆ ಮಾಡಿದ್ದಾರೆ.

  ಸೆಟ್‌ನಲ್ಲಿ ನನಗೇ ಕಿಂಡಲ್ ಮಾಡ್ತೀಯ: ಮಿಲನಾ

  ಸೆಟ್‌ನಲ್ಲಿ ನನಗೇ ಕಿಂಡಲ್ ಮಾಡ್ತೀಯ: ಮಿಲನಾ

  'ಎಲ್ಲರ ಅಭಿಪ್ರಾಯ ಪಡೆಯಬೇಕಲ್ವ ಅದಕ್ಕೆ ತೋರಿಸಿದೆ' ಎಂದು ಡಾರ್ಲಿಂಗ್ ಕೃಷ್ಣ ಸಮಜಾಯಿಷಿಗೂ ಉರಿದು ಬಿದ್ದಿರುವ ಮಿಲನಾ ನಾಗರಾಜ್, ''ನೀನು ಬೇರೊಬ್ಬರ ಒಪಿನಿಯನ್ ಬೇರೆ ತಗೋತೀಯ. ನಾನೇ ಸೆಟ್‌ನಲ್ಲಿ ಏನಾದರೂ ಸಲಹೆ ಕೊಡೋಕೆ ಬಂದ್ರೆ, ಡೈರೆಕ್ಟರ್ ನಾನಾ? ನೀನಾ? ಎಂದು ಪ್ರಶ್ನೆ ಮಾಡ್ತೀಯ. ನೀನು ಬೇರೆಯವರ ಒಪಿನಿಯನ್ ತಗೋತೀಯ? ಈಗೇನು ದುಡ್ಡು ಹಾಕಿ ಕೂತಿರುವ ನಿರ್ಮಾಪಕರಿಗೆ ಬೆಲೆ ಇಲ್ವಾ? ಟ್ರೇಲರ್ ರಿಲೀಸ್ ಮಾಡ್ತಿಯೋ ಇಲ್ವೋ?'' ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ ಮಿಲನಾ.

  ನಾನು ಸತ್ತೋಗಾಯ್ತು, ಏನಾದ್ರು ಮಾಡ್ಕೊ: ಮಿಲನಾ

  ನಾನು ಸತ್ತೋಗಾಯ್ತು, ಏನಾದ್ರು ಮಾಡ್ಕೊ: ಮಿಲನಾ

  'ಸರಿನಮ್ಮ ಆಯ್ತು ಟ್ರೇಲರ್ ರಿಲೀಸ್ ಮಾಡ್ತೀನಿ' ಅಂತ ಮಂಡಿಯೂರಿದ್ದಾರೆ ಡಾರ್ಲಿಂಗ್. ಆದರೆ ಅಷ್ಟಕ್ಕೂ ಸುಮ್ಮನಾಗದ ಮಿಲನಾ, 'ಲವ್ ಮಾಕ್ಟೆಲ್' ಮೊದಲ ಭಾಗದಲ್ಲಿಯೇ ನಾನು ಸತ್ತು ಹೋಗಿದ್ದಾಯಿತು. ಸೆಕೆಂಡ್ ಪಾರ್ಟ್‌ನಲ್ಲಿ ನೀನು ಏನು ಮಾಡಿದರೆ ನನಗೆ ಏನಾಗಬೇಕಾಗಿದೆ ಹೋಗೋ ಲೋ' ಎಂದು ಕೈ ಬೀಸಿ ಸಿಟ್ಟಿನಿಂದ ಹೊರಟು ಹೋಗಿದ್ದಾರೆ ಮಿಲನಾ. ಕೊನೆಗೆ ಬುದ್ಧಿ ಕಲಿತ ಡಾರ್ಲಿಂಗ್ ಕೃಷ್ಣ, ಆದಷ್ಟು ಬೇಗ ಟ್ರೇಲರ್ ರಿಲೀಸ್ ಮಾಡುತ್ತೀನಿ ಎಂದಿದ್ದಾರೆ.

  ಸೂಪರ್ ಹಿಟ್ ಆಗಿದ್ದ 'ಲವ್ ಮಾಕ್ಟೆಲ್'

  ಸೂಪರ್ ಹಿಟ್ ಆಗಿದ್ದ 'ಲವ್ ಮಾಕ್ಟೆಲ್'

  'ಲವ್ ಮಾಕ್ಟೆಲ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದು. ಸಿನಿಮಾದಲ್ಲಿ ಮಿಲನಾ ನಾಗರಾಜ್, ಅಮೃತಾ ಐಯ್ಯಂಗಾರ್ ಇನ್ನು ಕೆಲವರು ನಟಿಸಿದ್ದರು. ಸಿನಿಮಾಕ್ಕೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜಂಟಿಯಾಗಿ ಬಂಡವಾಳ ಹೂಡಿದ್ದರು. ಆ ಸಿನಿಮಾದ ಅಂತ್ಯದಲ್ಲಿ ಮಿಲನಾ ನಾಗರಾಜ್ ಪಾತ್ರ ಮೃತ ಹೊಂದಿತ್ತು. ಇದೀಗ 'ಲವ್ ಮಾಕ್ಟೆಲ್ 2' ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಟ್ರೇಲರ್ ಬಿಡುಗಡೆಗೆ ಡಾರ್ಲಿಂಗ್ ಕೃಷ್ಣ ಸಜ್ಜಾಗಿದ್ದಾರೆ. ಈ ಸಿನಿಮಾಕ್ಕೂ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಅವರೇ ಬಂಡವಾಳ ಹೂಡಿದ್ದಾರೆ. ಮೊದಲ ಸಿನಿಮಾದ ಅಂತ್ಯದಲ್ಲಿ ನಿಧನ ಹೊಂದಿದ್ದ ಮಿಲನಾ ಈ ಸಿನಿಮಾದಲ್ಲಿ ಇರುತ್ತಾರಾ ಇಲ್ಲವಾ ಎಂಬುದು ಕುತೂಹಲ.

  English summary
  Milana Nagaraj fight with Darling Krishna to release Love Mocktail 2 trailer soon; video goes viral. Darling Krishna said will release the trailer soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion