ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್,ಡಾರ್ಲಿಂಗ್ ಕೃಷ್ಣ ಮನೆಗೆ ಬಂದ ಗೌರಿ..!

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್.. ಕನ್ನಡ ಚಿತ್ರರಂಗದ ಮುದ್ದಾದ ಜೋಡಿ. ಆನ್ ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ಕನ್ನಡಿಗರ ಹೃದಯ ಗೆದ್ದ ಇವರಿಬ್ಬರ ಬದುಕಿನಲ್ಲಿ ಈಗ ಹೊಸ ಸದಸ್ಯನ ಪ್ರವೇಶವಾಗಿದೆ. ಮಿಲನಾ ನಾಗರಾಜ್ ಅವರಿಗೆ ಹೆಣ್ಣು ಮಗು ಜನಿಸಿದೆ.

ಇಂದು ಮುಂಜಾನೆ ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗಳು ಇಬ್ಬರು ಆರಾಮಾಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಡಾರ್ಲಿಂಗ್ ಕೃಷ್ಣ ಈ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದು, "ಮಗಳು ಹುಟ್ಟಿದ್ದಾಳೆ. ತಾಯಿ, ಮಗು ಆರೋಗ್ಯವಾಗಿದ್ದಾರೆ. ಈ ಜರ್ನಿಯಲ್ಲಿ ಮಿಲನಾ ನಾಗರಾಜ್‌ ಅನುಭವಿಸಿದ ನೋವು, ಮಾಡಿದ ತ್ಯಾಗ, ತೋರಿದ ಧೈರ್ಯಕ್ಕೋಸ್ಕರ ನನಗೆ ಬಗ್ಗೆ ಹೆಮ್ಮೆ ಇದೆ. ಈ ಜರ್ನಿಯಲ್ಲಿ ಸಾಗುವ ಎಲ್ಲ ತಾಯಂದರಿಗೆ ನನ್ನ ಸೆಲ್ಯೂಟ್. ಇದನ್ನು ನೋಡಿ ನನಗೆ ಮಹಿಳೆಯರ ಮೇಲೆ ಇದ್ದ ಗೌರವ ಡಬಲ್ ಆಯ್ತು. ನಾನು ಅದೃಷ್ಟವಂತ ತಂದೆ ಮತ್ತು ನನಗೆ ಹಮ್ಮೆ ಇದೆ ಯಾಕೆಂದರೆ ನನ್ನ ಬಳಿ ಈಗ ಮಗಳಿದ್ದಾಳೆ ಎಂದು ತಮ್ಮ ಸಂತಸವನ್ನು ಕೂಡ ಸಾಮಾಜಿಕ ಜಾಲತಾಣದ ಮೂಲಕ ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ.

Milana Nagaraj gave birth to a girl and Darling Krishna shared his happiness

ಅಂದ್ಹಾಗೇ ಬೇಬಿಮೂನ್ ಎಂದು ಈ ಹಿಂದೆ ಸಪ್ತ ಸಾಗರದಾಚೆ ಹೋಗಿದ್ದ ಇಬ್ಬರು ಆ ನಂತರ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದರು. ಕ್ಯಾಂಡಲ್‌ ಲೈಡ್ ಮತ್ತು ಕ್ವೀನ್ ಥೀಮ್ ಫೋಟೋ ಶೂಟ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇನ್ನೂ ಗರ್ಭಾವಸ್ಥೆಯಲ್ಲಿ ಫೋಟೋ ಶೂಟ್ ಮಾಡಿಸಿದ್ದ ಇಬ್ಬರು ಹುಡುಗ ಅಥವಾ ಹುಡುಗಿ ಗೆಸ್ ಮಾಡಿ ಎಂದು ತಮ್ಮ ಅಭಿಮಾನಿಗಳಲ್ಲಿ ಕೇಳಿದ್ದರು.

ಇನ್ನೂ ಮೂರುವಾರದ ಹಿಂದೆ ಮಿಲನಾ ನಾಗರಾಜ್ ಅವರ ಸೀಮಂತ ಸಮಾರಂಭ ಕೂಡ ಅದ್ಧೂರಿಯಾಗಿ ನಡೆದಿತ್ತು. ಕಾರ್ಯಕ್ರಮದ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದಲ್ಲದೇ ಯೋಗ ಪ್ರಾಣಾಯಾಮ ಮಾಡುತ್ತಿರುವ ವಿಡಿಯೋಗಳನ್ನು ಕೂಡ ಹಂಚಿಕೊಂಡಿದ್ದ ಮಿಲನಾ, ವಾರದ ಹಿಂದೆ ತಮ್ಮ ಮುಂದಿನ ಚಿತ್ರ ಆರಾಮಾ ಅರವಿಂದ್ ಸ್ವಾಮಿ ಚಿತ್ರದ ಡಬ್ಬಿಂಗ್ ಕೆಲಸಗಳನ್ನು ಕೂಡ ಮುಗಿಸಿದ್ದರು.

ಉಳಿದಂತೆ ಈ ಹಿಂದೆ "ನಿಮಗೆ 25 ವರ್ಷಗಳಿಗಿಂತ ಹೆಚ್ಚು ವಯಸ್ಸಾಗುವವರಗೆ ಖಂಡಿತಾ ಮದುವೆಯಾಗ್ಬೇಡಿ. ಮೊದಲು ನೀವು ದುಡಿಯಿರಿ, ಗಳಿಸಿ, ಸ್ವತಂತ್ರರಾಗಿ, ಮಾನಸಿಕವಾಗಿ ಗಟ್ಟಿಯಾಗಿ, ಪ್ರಬುದ್ಧರಾಗಿ. ನಿಮ್ಮ ಬದುಕಿನ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವಷ್ಟು ಗಟ್ಟಿಯಾಗಿ- ಆಗ ಮದುವೆಯಾಗಿ. ಅನೇಕ ಹುಡುಗಿಯರು, ಹುಡುಗರು ಕೂಡಾ ಗೊಂದಲದಲ್ಲೇ ಮದುವೆಯಾಗ್ತಾರೆ. ಹಾಗೆ ಆಗಬಾರದು." ಎಂದು ನಟಿ ಮಿಲನಾ ಹೇಳಿದ್ದರು.

ಸದ್ಯಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಅಮೃತಾ ಐಯ್ಯಂಗಾರ್, ಸಂಯುಕ್ತಾ ಹೊರನಾಡ್, ಶ್ವೇತಾ ಪ್ರಸಾದ್, ನಿಧಿ ಸುಬ್ಬಯ್ಯ, ಸಂಗೀತಾ ಶೃಂಗೇರಿ ಸೇರಿ ಅನೇಕರು ಈ ಕ್ಯೂಟ್ ಜೋಡಿಗೆ ಶುಭಾಶಯವನ್ನು ಕೋರಿದ್ಧಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X