ಡಾರ್ಲಿಂಗ್ ಕೃಷ್ಣ ರೋಮ್ಯಾಂಟಿಕ್ ಪೋಸ್ಟರ್‌ಗೆ ಪತ್ನಿ ಮಿಲನಾ ನಾಗರಾಜ್ ಹೀಗೆ ಪ್ರತಿಕ್ರಿಯಿಸಿದ್ದು ಯಾಕೆ?
ಒಂದು ಸಿನಿಮಾ ತಯಾರಾಗ್ತಿದೆ ಅಂದಾಗ ಆ ಚಿತ್ರದ ಬಗ್ಗೆ ಜನರಿಗೆ ತಿಳಿಸಲು ವಿಭಿನ್ನವಾದ ಪೋಸ್ಟರ್‌ಗಳನ್ನು ಚಿತ್ರತಂಡ ರಿಲೀಸ್ ಮಾಡುತ್ತೆ. ಒಂದಷ್ಟು ಪೋಸ್ಟರ್‌ಗಳು ಜನರಿಗೆ ಹಿಡಿಸಿದರೇ ಮತ್ತೊಂದ್ದಷ್ಟು ಟ್ರೋಲರ್ಸ್‌ಗಳಿಗೆ ಕಂಟೆಂಟ್ ಆಗಿರುತ್ತದೆ. ಹೌದು, ಇದಕ್ಕೆ ಸಾಕ್ಷಿ ಆಗಿರೋದು ಕಳೆದ ತಿಂಗಳು ರಿಲೀಸ್ ಆದ ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ಅಭಿನಯದ ಸಿನಿಮಾ ದಿಲ್ ಪಸಂದ್. ದಿಲ್ ಪಸಂದ್ ಸಿನಿಮಾ ವಿಭಿನ್ನ ಪ್ರೇಮಕಥೆಯನ್ನು ಹೇಳಲು ಹೊರಟಿದೆ. ಹೀಗಾಗಿ ಚಿತ್ರದ ಪೋಸ್ಟರ್ ಕೂಡ ರೋಮ್ಯಾಂಟಿಕ್ ಆಗಿ ಮೂಡಿಬಂದಿದೆ. ಈ ಪೋಸ್ಟರ್‌ಗೆ ಒಂದಷ್ಟು ಟ್ರೋಲ್ ಪೇಜ್‌ಗಳು ಕಾಲೆಳೆದಿದ್ದವು, ಡಾರ್ಲಿಂಗ್ ಕೃಷ್ಣ ಅವರ ಪತ್ನಿ ಮಿಲನ ನಾಗರಾಜ್ ಮತ್ತು ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ಅವರನ್ನು ಸೇರಿಸಿ ಪಾಸಿಟಿವ್ ಟ್ರೋಲ್‌ಗಳು ಒಂದಷ್ಟು ಹುಟ್ಟಿಕೊಂಡಿದ್ದವು.
ಇದೀಗ ಈ ಟ್ರೋಲ್‌ಗಳನ್ನೇ ಸ್ಪೂರ್ತಿಯಾಗಿ ಪಡೆದು ಡಾರ್ಲಿಂಗ್ ಕೃಷ್ಣ ಪತ್ನಿ ಮಿಲನ ನಾಗರಾಜ್ ಮಾತಿನಲ್ಲೇ ಕಾಲೆಳೆದಿದ್ದಾರೆ. ಜೊತೆಗೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರಿಗೂ ಸಣ್ಣದಾಗಿ ಮಾತಿಗೆ ಎಳೆದಿದ್ದಾರೆ. ಹಾಗಿದ್ದರೇ ಮಿಲನ ನಾಗರಾಜ್ ಏನು ಹೇಳಿದ್ದಾರೆ ಅಂತ ಮುಂದೆ ಓದಿ.
ಮಿಲನಾ ನಾಗರಾಜ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ದಿಲ್ ಪಸಂದ್ ಚಿತ್ರದ ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ಅವರ ಒಂದು ಫೋಟೊ ಮತ್ತು ಮಿಲನ ನಾಗರಾಜ್ ಡಾರ್ಲಿಂಗ್ ಕೃಷ್ಣ ಅವರ ಒಂದಷ್ಟು ವಿಡಿಯೋಗಳನ್ನು ಸೇರಿಸಿ ಅದಕ್ಕೆ ಮ್ಯೂಸಿಕ್ ಒಂದನ್ನು ಸೇರಿಸಿ ಅದನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕ್ಯಾಪ್ಷನ್ ಕೊಟ್ಟಿರುವ ಮಿಲನ ನಾಗರಾಜ್ ಟ್ರೋಲ್ ಪೇಜಸ್‌ಗಳಿಗೆ "ನಿಮ್ಮ ಇನ್ಸ್‌ಪಿರೇಷನ್‌ಗೆ ಧನ್ಯವಾದಗಳು" ಎಂದಿದ್ದಾರೆ. ಹಾಗೆ ಮುಂದುವರೆದು "ನಿಶ್ವಿಕಾ ನಾಯ್ಡು, ಡಾರ್ಲಿಂಗ್ ಕೃಷ್ಣ ನೀವು ಇಬ್ಬರು ತುಂಬಾ ಹಾಟ್ ಆಗಿ ಕಾಣುತ್ತಿದ್ದೀರಾ, ನಿಮ್ಮ ಮುಂದಿನ ಪೋಸ್ಟರ್ ಯಾವಾಗ" ಎಂದು ಕಾಲೆಳೆದಿದ್ದಾರೆ.

ಇದಕ್ಕೆ ರಿಪ್ಲೇ ಮಾಡಿರುವ ನಟಿ ನಿಶ್ವಿಕಾ ಅಯ್ಯೋ ಇದು ಸಾಕು ಎಂದಿದ್ದಾರೆ. ಹಾಗೇ ಡಾರ್ಲಿಂಗ್ ಕೃಷ್ಣ ಪತ್ನಿ ಮಿಲನಾ ನಾಗರಾಜ್ ಪ್ರಶ್ನೆಗೆ ಸ್ವಲ್ಪ ಕಕ್ಕಾಬಿಕ್ಕಿಯಾದಂತೆ " ಮಿಲನಾ ನಾಗರಾಜ್ ಮುಂದಿನ ಪೋಸ್ಟರ್ ಇಲ್ಲ. ನಾನು ಮತ್ತು ನಿಶ್ವಿಕಾ ನೆಕ್ಸ್ಟ್ ಮೀಟ್ ಮಾಡೋದು ಡೈರೆಕ್ಟ್ ಥಿಯೇಟರ್‌ನಲ್ಲೆ" ಎಂದು ಉತ್ತರಿಸಿದ್ದಾರೆ. ಹೀಗೆ ನಿಶ್ವಿಕಾ ಮತ್ತು ಡಾರ್ಲಿಂಗ್ ಕೃಷ್ಣ ಅವರ ಕಾಲೆಳೆದಿರುವ ಮಿಲನಾ ನಾಗರಾಜ್ ಪೋಸ್ಟ್‌ಗೆ ಸಾಕಷ್ಟು ಕಮೆಂಟ್‌ಗಳು ಕೂಡ ಬರುತ್ತಿವೆ. ಅಭಿಮಾನಿಗಳು ಈ ಪೋಸ್ಟ್‌ಗೆ ಕಮೆಂಟ್ ಮಾಡುತ್ತಿದ್ದು, ಎಷ್ಟೇ ಹೀರೋಯಿನ್ಸ್ ಬಂದ್ರು ಡಾರ್ಲಿಂಗ್ ಕೃಷ್ಣ ಅವರಿಗೆ ನೀವೇ ಬೆಸ್ಟ್ ಪೇರ್ ಎಂದು ಹುರಿದುಂಬಿಸುತ್ತಿದ್ದಾರೆ.

ಇನ್ನು ದಿಲ್ ಪಸಂದ್ ಚಿತ್ರ ಶೂಟಿಂಗ್‌ನಲ್ಲಿ ನಿರತವಾಗಿದೆ. ಡಾರ್ಲಿಂಗ್ ಕೃಷ್ಣ ಈಗಾಗಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಲವ್‌ಮಾಕ್ಟೆಲ್ 2, ಶುಗರ್ ಫ್ಯಾಕ್ಟರಿ ಚಿತ್ರಗಳ ಜೊತೆ ಜೊತೆಗೆ ದಿಲ್ ಪಸಂದ್ ಚಿತ್ರದ ಕೆಲಸಗಳು ನಡೆಯುತ್ತಿದೆ. ದಿಲ್‌ಪಸಂದ್ ಚಿತ್ರದ ಪೋಸ್ಟರ್‌ನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮಳೆ, ಧೈರ್ಯಂ ಚಿತ್ರವನ್ನು ನಿರ್ದೇಶಿಸಿದ್ದ ಶಿವ ತೇಜಸ್ ದಿಲ್ ಪಸಂದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ತ್ರಿಕೋನ ಲವ್ ಸ್ಟೋರಿ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಕೃಷ್ಣನಿಗೆ ನಿಶ್ವಿಕಾ ನಾಯ್ಡು ಜೊತೆ ಮತ್ತೊಬ್ಬ ನಟಿ ಮೇಘಾ ಶೆಟ್ಟಿ ಕೂಡ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.

ದಿಲ್‌ಪಸಂದ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ 2ನೇ ಹಂತದ ಚಿತ್ರೀಕರಣ ಶುರುವಾಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಶೇಖರ್ ಚಂದ್ರ ಛಾಯಾಗ್ರಹಣ ದಿಲ್‌ಪಸಂದ್ ಚಿತ್ರಕ್ಕಿದೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಮಾಡಿದ್ದು, ದಿಲ್ ಪಸಂದ್ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ, ಅರುಣಾ ಬಾಲರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.


Click it and Unblock the Notifications











