ವಿಡಿಯೋ ವೈರಲ್; ಮದುವೆ ಶಾಸ್ತ್ರದ ಮೊದಲ ವಿಡಿಯೋ ಹಂಚಿಕೊಂಡ ನಟಿ ಮಿಲನಾ ನಾಗರಾಜ್

ಸ್ಯಾಂಡಲ್ ವುಡ್ ನ ಸುಂದರ ಜೋಡಿಗಳಲ್ಲಿ ಒಂದಾಗಿರುವ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ತಿಂಗಳು ಫೆಬ್ರವರಿ 14ರಂದು ಮಿಲನಾ ಮತ್ತು ಕೃಷ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಲವ್ ಮಾಕ್ಟೇಲ್ ಜೋಡಿಯ ಮದುವೆಗೆ ಇನ್ನೇನು ದಿನಗಣನೆ ಪ್ರಾರಂಭವಾಗಿದೆ.

Recommended Video

ಮದುವೆಯ ಖುಷಿ ಎಷ್ಟಿದೆ ಅನ್ನೋದನ್ನ ಹಂಚಿಕೊಂಡ ಮಿಲನಾ ನಾಗರಾಜ್ | Filmibeat Kannada

ಈಗಾಗಲೇ ಮದುವೆ ಶಾಸ್ತ್ರಗಳು ನಡೆಯುತ್ತಿದ್ದು, ಮಿಲನಾ ನಾಗರಾಜ್ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದಾರೆ. ಮದುವೆಯ ಮೊದಲ ಶಾಸ್ತ್ರದ ವಿಡಿಯೋವನ್ನು ಮಿಲನಾ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಮದುವೆ ಶಾಸ್ತ್ರಗಳು ಪ್ರಾರಂಭ ಎಂದು ಬರೆದುಕೊಂಡಿದ್ದಾರೆ. ಮಿಲನಾ ನಾಗರಾಜ್ ಮತ್ತು ಕೃಷ್ಣ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಮುಂದೆ ಓದಿ..

ಈ ವಿಶೇಷ ಪೂಜೆಯ ಮೂಲಕ ಪ್ರಾರಂಭ

ಈ ವಿಶೇಷ ಪೂಜೆಯ ಮೂಲಕ ಪ್ರಾರಂಭ

'ನಮ್ಮ ಕುಟುಂಬದಲ್ಲಿ ಯಾರದೇ ಮದುವೆ ಆದರೂ ಈ ವಿಶೇಷ ಪೂಜೆಯ ಮೂಲಕ ಪ್ರಾರಂಭ ಮಾಡುತ್ತೇವೆ' ಎಂದು ಹೇಳಿದ್ದಾರೆ. ಮಿಲನಾ ಪೂಜೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಶೇಷ ಪೂಜೆಯ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ, ಆದರೆ ಈ ಪೂಜೆ ತನ್ನ ಊರಿನಲ್ಲಿ ನಡೆಯುತ್ತಿರುವ ಹಾಗೆ ಕಾಣುತ್ತಿದೆ.

ವಿಶೇಷವಾದ ಮಂಟಪದಲ್ಲಿ ಮದುವೆ

ವಿಶೇಷವಾದ ಮಂಟಪದಲ್ಲಿ ಮದುವೆ

ಮಿಲನಾ ಮದುವೆಗೆ ಇನ್ನು 5 ದಿನಗಳು ಬಾಕಿ ಇದೆ. ಮದುವೆ ಬಗ್ಗೆ ದೊಡ್ಡ ಕನಸು ಕಂಡಿದ್ದ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರಬೇಕು ಎಂದು ಪ್ಲಾನ್ ಮಾಡಿದ್ದರು. ಹಾಗಾಗಿಯೇ ಇವರು ಲಾಕ್ ಡೌನ್ ಎಲ್ಲ ಮುಗಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ಆಸೆಯಂತೆ ಮದುವೆ ಈಜುಕೊಳದ ಮಧ್ಯೆ ವಿಶೇಷ ಮಂಟಪದಲ್ಲಿ ಕೃಷ್ಣ ಮತ್ತು ಮಿಲನಾ ಹೊಸಜೀವನಕ್ಕೆ ಕಾಲಿಡುತ್ತಿದ್ದಾರೆ.

ಮದುವೆ ದಿನ ಲವ್ ಮಾಕ್ ಟೇಲ್ ಹಾಡು ರಿಲೀಸ್

ಮದುವೆ ದಿನ ಲವ್ ಮಾಕ್ ಟೇಲ್ ಹಾಡು ರಿಲೀಸ್

ಕೃಷ್ಣ ಮತ್ತುಮಿಲನಾ ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರು ಲವ್ ಮಾಕ್ ಟೇಲ್ ಸಿನಿಮಾ ಬಳಿಕ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದರು. ಇದೀಗ ಈ ಜೋಡಿ ಲವ್ ಮಾಕ್ ಟೇಲ್ -2 ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮುಗಿಸಿದ್ದಾರೆ. ವಿಶೇಷ ಎಂದರೆ ಮದುವೆ ದಿನವೇ ಅಂದರೆ ಫೆಬ್ರವರಿ 14ರಂದು ಲವ್ ಮಾಕ್ ಟೇಲ್-2 ಸಿನಿಮಾದ ಒಂದು ಹಾಡು ಕೂಡ ರಿಲೀಸ್ ಆಗುತ್ತಿದೆ.

ಚಿತ್ರರಂಗದ ಗಣ್ಯರು ಭಾಗಿಯಾಗುವ ಸಾಧ್ಯತೆ

ಕೃಷ್ಣ ಮತ್ತು ಮಿಲನಾ ಮದುವೆೆಗೆ ಸ್ಯಾಂಡಲ್ ವುಡ್ ನ ಗಣ್ಯರೆಲ್ಲರೂ ಭಾಗಿಯಾಗಿರುವ ಸಾಧ್ಯತೆ ಇದೆ. ಈಗಾಗಲೇ ಈ ಜೋಡಿ ಚಿತ್ರರಂಗದ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಅದ್ದೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಇಡೀ ಚಿತ್ರರಂಗದ ಸಮಾಗಮ ಆಗಲಿದೆ.

More from Filmibeat

English summary
Actress Milana Nagaraj shares her wedding rituals video on Social media. Milana Nagaraj will tie the knot with Darling Krishna on February 14th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X