ಫೆಬ್ರವರಿ 14ಕ್ಕೆ ಮದುವೆ ಆಗುತ್ತಿರುವುದೇಕೆ, ವಿವಾಹ ಬಳಿಕ ಸಿನಿಮಾ ಮಾಡ್ತಾರಾ? ಮಿಲನಾ ಉತ್ತರ ಇಲ್ಲಿದೆ
ಸ್ಯಾಂಡಲ್ ವುಡ್ ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲಿನಾ ನಾಗರಾಜ್ ಮದುವೆ ದಿನಾಂಕ ನಿಗದಿಯಾಗಿದೆ. ಇತ್ತೀಚಿಗಷ್ಟೆ ಮದುವೆ ದಿನಾಂಕ ಅನೌನ್ಸ್ ಮಾಡಿದ್ದ ಡಾರ್ಲಿಂಗ್ ಜೋಡಿ ಇದೀಗ ಸಿನಿಮಾ ಜೊತೆಗೆ ಮದುವೆ ತಯಾರಿಯಲ್ಲೂ ನಿರತರಾಗಿದ್ದಾರೆ.
Recommended Video
ಸದ್ಯ ಈ ಜೋಡಿ ಲಾಕ್ ಮಾಕ್ಟೇಲ್-2 ನಲ್ಲಿ ಬ್ಯುಸಿಯಾಗಿದೆ. ಈಗಾಗಲೇ 60 ರಷ್ಟು ಚಿತ್ರೀಕರಣ ಸಹ ಮಾಡಿಮುಗಿಸಿದ್ದಾರೆ. ಈ ನಡುವೆ ನಟಿ ಮಿಲನಾ ನಾಗರಾಜ್ ಮದುವೆ ಬಗ್ಗೆ ಮತ್ತು ಮದುವೆ ಪ್ಲಾನಿಂಗ್ ಬಗ್ಗೆ ಒಂದಿಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

ಫೆಬ್ರವರಿ 14ಕ್ಕೆ ಮದುವೆ ದಿನಾಂಕ ಫಿಕ್ಸ ಆಗಿದ್ದು ಯಾಕೆ?
2021 ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ ದಿನವೇ ಈ ಜೋಡಿ ಹಸೆಮಣೆ ಏರುತ್ತಿದೆ. ವಿಶೇಷ ದಿನದಂದೆ ಮದುವೆ ಡೇಟ್ ಫಿಕ್ಸ್ ಆದ ಬಗ್ಗೆ ಮಿಲನಾ ನಾಗರಾಜ್ ಮಾತನಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಇಬ್ಬರು ಕುಟುಂಬದವರು ಸೇರಿ ಈ ದಿನಾಂಕವನ್ನು ನಿಗದಿ ಮಾಡಿರುವುದಾಗಿ ಮಿಲನಾ ಹೇಳಿದ್ದಾರೆ.

ಫೆಬ್ರವರಿ ಲಕ್ಕಿ ತಿಂಗಳು
2021 ಮೇ ಅಥವಾ ಜೂನ್ ತಿಂಗಳಲ್ಲಿ ಮದುವೆ ಬಗ್ಗೆ ಪ್ಲಾನ್ ಮಾಡಿದ್ವಿ. ಆದರೆ ಕೃಷ್ಣನ ಮನೆಯಲ್ಲಿ ಕೇಳಿಸಿದಾಗ ಫೆಬ್ರವರಿ 14ರಂದು ಡೇಟ್ ಬಂತು. ಬಳಿಕ ನಮ್ಮನೆಯಲ್ಲೂ ಕೇಳಿಸಿದಾಗ 14 ಅಂತನೇ ಬಂದಿರುವುದರಿಂದ ಎಲ್ಲರೂ ಸೇರಿ 14 ರಂದೆ ಮದುವೆ ದಿನಾಂಕ್ ಫಿಕ್ಸ್ ಮಾಡಿದ್ರು. ಫೆಬ್ರವರಿ ತಿಂಗಳು ತುಂಬಾ ಲಕ್ಕಿ. ಯಾಕಂದರೆ ಈ ವರ್ಷ ಜನವರಿ, ಫೆಬ್ರವರಿಯಲ್ಲಿ ಲವ್ ಮಾಕ್ಟೇಲ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 2021ರಲ್ಲೂ ಫೆಬ್ರವರಿಯಲ್ಲಿ ಮದುವೆ ಸೆಲೆಬ್ರೇಷನ್ ಇದೆ. ಹಾಗಾಗಿ ಫೆಬ್ರವರಿ ತುಂಬಾ ವಿಶೇಷ ಎಂದು ಹೇಳಿದ್ದಾರೆ.

6 ವರ್ಷದ ಹಿಂದಿ ಮದುವೆ ಆಗ್ತೀಯಾ ಎಂದು ಕೃಷ್ಣ ಕೇಳಿದ್ದರು
ಮದುವೆ ಶಾಸ್ತ್ರೋಕ್ತವಾಗಿ ನಡೆಯಲಿದೆ ಎಂದು ಮಿಲನಾ ಹೇಳಿದ್ದಾರೆ. 6 ವರ್ಷದ ಹಿಂದಿನ ದಿನಗಳನ್ನು ನೆನಪಿಸಿಕೊಂಡ ಮಿಲನಾ, 6 ವರ್ಷದ ಹಿಂದೆ ಕೃಷ್ಣ ಮದುವೆ ಆಗುತ್ತಿಯಾ ಎಂದು ಕೇಳಿದ್ದಾಗ ಆಗ ನನಗೆ ಮದುವೆ ಯೋಚನೆ ಇರಲಿಲ್ಲ. ಇನ್ನೂ ಸಿನಿ ಜೀವನದ ಪ್ರಾರಂಭದ ಹಂತದಲ್ಲಿದ್ದೆ. ಆದರೆ ನಾವು ಸ್ನೇಹಿತರಾದ್ವಿ, ನಮ್ಮ ಯೋಚನೆಗಳು ಒಂದೆ ರೀತಿ ಇದೆ. ಹಾಗಾಗಿ ಇಬ್ಬರು ಮದುವೆ ಆಗುವ ನಿರ್ಧಾರ ಮಾಡಿದೆವು ಎಂದು ಹೇಳಿದ್ದಾರೆ.

ಮದುವೆ ನಂತರನೂ ಸಿನಿಮಾ ಮುಂದುವರೆಸುತ್ತೇನೆ
ನಿರ್ದೇಶನ ಖಂಡಿತ ಮಾಡಲ್ಲ, ನಿರ್ದೇಶನದ ಕಡೆ ಒಲವಿಲ್ಲ. ಆದರೆ ಮದುವೆ ನಂತರನೂ ನಟನೆ ಮುಂದುವರೆಸುತ್ತೇನೆ. ಎಲ್ಲಾ ನಾಯಕಿಯರಿಗೆ ಎದುರಾಗುವ ಪ್ರಶ್ನೆ ಇದು. ನಾನು ಮನೆಯಲ್ಲಿ ಕೂರುವಂತವಳಲ್ಲ. ಹಾಗಾಗಿ ಮದುವೆ ಬಳಿಕವೂ ಸಿನಿಮಾ ಮುಂದುವರೆಸುವುದಾಗಿ ಮಿಲನಾ ಹೇಳಿದ್ದಾರೆ.

ಬೆಂಗಳೂರಿನಲ್ಲೇ ಮದುವೆ
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮದುವೆ ಬೆಂಗಳೂರಿನಲ್ಲಿ ನಡೆಯಲು ಪ್ಲಾನ್ ಮಾಡಿದ್ದಾರೆ. ಸ್ನೇಹಿತರು, ಕುಟುಂಬದವರು ಬೆಂಗಳೂರಿನಲ್ಲೇ ಇರುವುದರಿಂದ ಇಲ್ಲೇ ಮದುವೆ ಆಗಲು ನಿರ್ಧರಿಸಿದ್ದಾರೆ. ಮದುವೆ ಬಳಿಕ ಲವ್ ಮಾಕ್ಟೋಲ್-2 ಸಿನಿಮಾ ರಿಲೀಸ್ ಮಾಡುವ ಸಾಧ್ಯತೆ ಇದೆ.


Click it and Unblock the Notifications











