For Quick Alerts
  ALLOW NOTIFICATIONS  
  For Daily Alerts

  ಮತ್ತೆ ಒಂದಾದ ಡಾರ್ಲಿಂಗ್ ಜೋಡಿ: ಈಜುಪಟು ಮಿಲನಾಗೆ ಪತಿಯೇ ನಿರ್ದೇಶನ

  |

  ಸ್ಯಾಂಡಲ್ ವುಡ್‌ನ ಕ್ಯೂಟ್ ಜೋಡಿಗಳಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ ಕೂಡ ಒಂದು. ಇತ್ತೀಚಿಗಷ್ಟೆ ಅದ್ದೂರಿಯಾಗಿ ಹಸೆಮಣೆ ಏರಿದ್ದ ಡಾರ್ಲಿಂಗ್ ಜೋಡಿ ಇದೀಗ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

  ಲವ್ ಮಾಕ್ ಟೇಲ್-2 ಜೊತೆಗೆ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಈ ನಡುವೆ ಡಾರ್ಲಿಂಗ್ ಜೋಡಿ ಕ್ರೀಡಾ ಆಧಾರಿತ ಸಿನಿಮಾ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಕನ್ನಡದಲ್ಲಿ ಕ್ರೀಡಾ ಆಧಾರಿತ ಸಿನಿಮಾಗಳು ತುಂಬಾ ವಿರಳ. ಹಾಗಾಗಿ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ ಕೃಷ್ಣ ಮತ್ತು ಮಿಲನಾ. ಮುಂದೆ ಓದಿ..

  'ಲವ್ ಮಾಕ್ ಟೇಲ್-2' ಹಾಡಿಗೆ ಟಾಂಗ್ ಕೊಟ್ರಾ ರಘು ದೀಕ್ಷಿತ್?'ಲವ್ ಮಾಕ್ ಟೇಲ್-2' ಹಾಡಿಗೆ ಟಾಂಗ್ ಕೊಟ್ರಾ ರಘು ದೀಕ್ಷಿತ್?

  ಈಜುಪಟುವಾಗಿ ಮಿಲನಾ ಮಿಂಚಿಂಗ್

  ಈಜುಪಟುವಾಗಿ ಮಿಲನಾ ಮಿಂಚಿಂಗ್

  ಹೊಸ ಸಿನಿಮಾದಲ್ಲಿ ಮಿಲನಾ ಈಜುಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ಮಿಲನಾ ನಿಜ ಜೀವನದಲ್ಲೂ ಅತ್ಯುತ್ತಮ ಈಜುಗಾರ್ತಿಯಂತೆ. ಸ್ವಿಮ್ಮಿಂಗ್‌ನಲ್ಲಿ ಮಿಲನಾ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಗೆದ್ದಿದ್ದಾರೆ. ಇದೀಗ ಇದೇ ವಿಚಾರವನ್ನು ಇಟ್ಟುಕೊಂಡು ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಸಿನಿಮಾ ಮಾಡುತ್ತಿದ್ದಾರೆ.

  ಮಿಲನಾ ನಾಗರಾಜ್ ಪ್ರತಿಕ್ರಿಯೆ

  ಮಿಲನಾ ನಾಗರಾಜ್ ಪ್ರತಿಕ್ರಿಯೆ

  ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಿಲನಾ, 'ನನ್ನ ತಂದೆ ಬೆಳಗ್ಗೆ 4 ಗಂಟೆಗೆ ಎದ್ದು ನನ್ನನ್ನು ರನ್ನಿಂಗ್ ಕರೆದುಕೊಂಡು ಹೋಗುತ್ತಿದ್ದರು. ಈ ಬಗ್ಗೆ ನಾನು ಕೃಷ್ಣ ಜೊತೆ ಮಾತನಾಡಿದ್ದೆ ಮತ್ತು ಸಿನಿಮಾ ಮಾಡುವ ಬಗ್ಗೆ ಈಗಾಗಲೇ ಸುದೀರ್ಘ ಚರ್ಚೆ ನಡೆಸಿದ್ದೇವೆ' ಎಂದಿದ್ದಾರೆ.

  'ದಿಯಾ' ಪೃಥ್ವಿ ಜೊತೆ ಮಿಲನಾ ನಾಗರಾಜ್ ರೊಮ್ಯಾಂಟಿಕ್ ಫೋಟೋಶೂಟ್'ದಿಯಾ' ಪೃಥ್ವಿ ಜೊತೆ ಮಿಲನಾ ನಾಗರಾಜ್ ರೊಮ್ಯಾಂಟಿಕ್ ಫೋಟೋಶೂಟ್

  ಚಿತ್ರಕ್ಕೆ 'ಮಿಲಿ' ಎಂದು ಟೈಟಲ್ ಫಿಕ್ಸ್

  ಚಿತ್ರಕ್ಕೆ 'ಮಿಲಿ' ಎಂದು ಟೈಟಲ್ ಫಿಕ್ಸ್

  ವರ್ಕೌಟ್ ಮುಗಿಸಿ ಇಬ್ಬರು ಈಜಲು ಹೋಗುತ್ತೇವೆ. ನಾನು ಸಿಮ್ಮಿಂಗ್‌ನಲ್ಲಿ ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತೆ ಎಂದು ಕೃಷ್ಣಗೂ ಗೊತ್ತಿದೆ. ಹಾಗಾಗಿ ಈ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದೇವೆ' ಎಂದಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಮಿಲಿ ಎಂದು ಹೆಸರಿಟ್ಟಿದ್ದಾರೆ.

  ಗಟ್ಟಿಮೇಳ ಸೀರಿಯಲ್ ನ ವೇದಾಂತ್ ಹಾಗೂ ರೌಡಿ ಬೇಬಿಯ ರೋಮ್ಯಾಂಟಿಕ್ ಚಾಟ್ | Filmibeat Kannada
  'ಲವ್ ಮಾಕ್ ಟೇಲ್-2' ಬಳಿಕ ಮಿಲಿ ಚಿತ್ರೀಕರಣ ಆರಂಭ

  'ಲವ್ ಮಾಕ್ ಟೇಲ್-2' ಬಳಿಕ ಮಿಲಿ ಚಿತ್ರೀಕರಣ ಆರಂಭ

  ಮಿಲಿ ಸಿನಿಮಾ ಲವ್ ಮಾಕ್ ಟೇಲ್-2 ಮುಗಿದ ಬಳಿಕ ಪ್ರಾರಂಭವಾಗಲಿದೆಯಂತೆ. ಅಥ್ಲೆಟ್ಲಿಕ್ಸ್ ಮಿಲನಾ ಜೀವನದ ಒಂದು ದೊಡ್ಡ ಭಾಗವಾಗಿದ್ದು, ತೆರೆಮೇಲು ಸಹ ಅಥ್ಲಿಟ್ ಆಗಿ ಮಿಂಚಬೇಕು ಎನ್ನುವುದು ಮಿಲನಾ ದೊಡ್ಡ ಕನಸು. ಇದೀಗ ಈ ಕನಸು ನನಸಾಗುವ ಸಮಯ ಹತ್ತಿರಬರುತ್ತಿದೆ.

  English summary
  Actress Milana Nagaraj to play swimmer in sports drama directed by Darling Krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X