»   » ಮಧ್ಯರಾತ್ರಿಯಲ್ಲಿ ಶಿವಣ್ಣ 'ಆರ್ಯನ್'ಗೆ ಕ್ಷೀರಾಭಿಷೇಕ

ಮಧ್ಯರಾತ್ರಿಯಲ್ಲಿ ಶಿವಣ್ಣ 'ಆರ್ಯನ್'ಗೆ ಕ್ಷೀರಾಭಿಷೇಕ

By: ಉದಯರವಿ
Subscribe to Filmibeat Kannada

ಚಿತ್ರವೊಂದು ಬಿಡುಗಡೆಯಾದ ಮೇಲೆ ಅಭಿಮಾನಿಗಳು ಮಾಲಾರ್ಪಣೆ ಮಾಡುವುದು, ಪಟಾಕಿ ಸಿಡಿಸುವುದು ಹಾಗೂ ಕ್ಷೀರಾಭಿಷೇಕ ಮಾಡುವುದು ಮಾಮೂಲಿ ಸಂಗತಿ. ಆದರೆ ಬಿಡುಗಡೆ ಇರಲಿ ಇನ್ನೂ ಸೆನ್ಸಾರ್ ಗೂ ಮುನ್ನವೇ 'ಆರ್ಯನ್' ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ತಮ್ಮ ಅಭಿಮಾನ ಮೆರೆದಿದ್ದಾರೆ ಫ್ಯಾನ್ಸ್.

ಬೆಂಗಳೂರು ರಾಜಾಜಿನಗರದ ನವರಂಗ್ ಚಿತ್ರಮಂದಿರದಲ್ಲಿ 'ಆರ್ಯನ್' ಚಿತ್ರದ ಬೃಹತ್ ಕಟೌಟ್ ಇಡಲಾಗಿದೆ. ಚಿತ್ರಕ್ಕೆ ಇನ್ನೂ ಸೆನ್ಸಾರ್ ಪೂರ್ತಿಯಾಗಿಲ್ಲ. ಇದೇ ಚಿತ್ರಮಂದಿರದಲ್ಲಿ ಕಿಚ್ಚ ಸುದೀಪ್ ಅವರ 'ಮಾಣಿಕ್ಯ' ಚಿತ್ರ ಪ್ರದರ್ಶನ ಕಾಣುತ್ತಿದೆ.

Milk Abhishekam on Shivanna 'Aaryan'

ಈ ಸಂದರ್ಭದಲ್ಲಿ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳು ಶುಕ್ರವಾರ (ಜು.25) ರಾತ್ರಿ ಕ್ಷೀರಾಭಿಷೇಕ ಮಾಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ನಂದಿನಿ ಹಾಲಿನ ಪಾಕೆಟ್ ಹಿಡಿದು ಆಗಮಿಸಿದ ಶಿವಣ್ಣ ಅಭಿಮಾನಿಗಳು ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ.

ಖ್ಯಾತ ನಿರ್ದೇಶಕ ಡಿ.ರಾಜೇಂದ್ರಬಾಬು ನಿರ್ದೇಶಿಸಿದ ಕಟ್ಟಕಡೆಯ ಈ ಚಿತ್ರ ಇದಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕ್ರೀಡಾ ತರಬೇತುದಾರನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರದಲ್ಲಿ ಅವರದು ಅಥ್ಲೀಟ್ ಕೋಚ್ ಪಾತ್ರ.

ಡಿ.ರಾಜೇಂದ್ರ ಬಾಬು ಅವರ ಅಕಾಲಿಕ ಮರಣದ ಬಳಿಕ ಗುರುದತ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಆದರೆ ಚಿತ್ರವನ್ನು ಡಿ.ರಾಜೇಂದ್ರ ಬಾಬು ಅವರ ಹೆಸರಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಲಾಗಿದೆ. ಚುನಾವಣೆ ಸೋಲಿನ ನಂತರ ರಮ್ಯಾ ಅವರ ಕಮ್ ಬ್ಯಾಕ್ ಚಿತ್ರ ಇದಾಗಿದ್ದು, ಚಿತ್ರದ ಯಶಸ್ಸಿನ ಮೇಲೆ ಸಿನಿ ಭವಿಷ್ಯ ನಿಂತಿದೆ. (ಏಜೆನ್ಸೀಸ್)

English summary
The fans Hat Trick Hero Dr Shivrajakumar go crazy on Friday (25th July) night. The fans of Dr Shivanna came to Navarang theatre in Rajajinagara in hundreds with packet of milk, a few climbed the cut out to pour the milk and garland Dr Shivarajakumar huge cut out.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada