For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್‌ನಲ್ಲಿ ಹೊಸ ಸಾಹಸ ಮಾಡಿದ ಮಿಮಿಕ್ರಿ ದಯಾನಂದ್

  |

  ಕನ್ನಡದ ಹಾಸ್ಯ ನಟ ಹಾಗೂ ಮಿಮಿಕ್ರಿ ಕಲಾವಿದ ದಯಾನಂದ್ ಲಾಕ್‌ಡೌನ್‌ ವೇಳೆ ಹೊಸ ಸಾಹಸ ಮಾಡಿ ಗಮನ ಸೆಳೆದಿದ್ದಾರೆ. ಇಷ್ಟು ದಿನ ತೆರೆಮೇಲೆ ತಮ್ಮ ನಟನೆ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದ್ದ ದಯಾನಂದ್ ಈಗ ಮೊದಲ ಸಲ ಆಕ್ಷನ್ ಕಟ್ ಹೇಳಿದ್ದಾರೆ.

  ಹೌದು, ದಯಾನಂದ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದ್ರೆ ಲಾಕ್‌ಡೌನ್ ಸಮಯದಲ್ಲಿ ಸಿನಿಮಾ ಚಿತ್ರೀಕರಣ ಮಾಡಿರುವುದು ಸಾಹಸವೇ ಸರಿ.

  59 ವರ್ಷ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ತಮ್ಮಮಗಳನ್ನು ಕಳೆದುಕೊಂಡು ಅನುಭವಿಸುವ ನೋವಿನ ಕಥೆಯ ಸುತ್ತ ಚಿತ್ರಕಥೆ ಮಾಡಲಾಗಿದೆ. ಜೀವನದಲ್ಲಿ ಅನೇಕ ಸಲ ಅನಿರೀಕ್ಷಿತ ಘಟನೆಗಳು ನಡೆಯುತ್ತದೆ, ಇದು ಜೀವನಕ್ಕೆ ತಿರುವು ಕೊಡುವ ಸಂಗತಿಗಳು ಆಗಿರಬಹುದು, ಇಂತಹ ಘಟನೆಯನ್ನು ಆಧರಿಸಿ ಸಿನಿಮಾ ಮಾಡಿದ್ದು, ಅದಕ್ಕೆ 'ಅನಿರೀಕ್ಷಿತ' ಎಂದು ಹೆಸರು ಇಡಲಾಗಿದೆ.

  ಅಂದ್ಹಾಗೆ, ಇಡೀ ಚಿತ್ರದಲ್ಲಿ ನಟಿಸಿರುವ ಕೇವಲ ಎರಡೇ ಪಾತ್ರ. ಈ ಸಿನಿಮಾಗಾಗಿ ಕೆಲಸ ಮಾಡಿರುವುದು ಬರಿ 13 ಜನ ತಂತ್ರಜ್ಞರು ಮತ್ತು ಸಿಬ್ಬಂದಿಗಳು. ಒಂದೇ ಸ್ಥಳದಲ್ಲಿ ನಾಲ್ಕು ಲೋಕೇಶನ್‌ಗಳನ್ನಾಗಿ ವಿಂಗಡಿಸಿ ಚಿತ್ರೀಕರಣ ಮಾಡಲಾಗಿದೆ.

  ಪುನೀತ್-ಕೃಷ್ಣ ಚಿತ್ರದ ಕುರಿತು ಥ್ರಿಲ್ಲಿಂಗ್ ಸುದ್ದಿ: ಸುಳ್ಳು ಎಂದ 'ಹೆಬ್ಬುಲಿ' ನಿರ್ದೇಶಕಪುನೀತ್-ಕೃಷ್ಣ ಚಿತ್ರದ ಕುರಿತು ಥ್ರಿಲ್ಲಿಂಗ್ ಸುದ್ದಿ: ಸುಳ್ಳು ಎಂದ 'ಹೆಬ್ಬುಲಿ' ನಿರ್ದೇಶಕ

  ಎಸ್‌ಕೆ ಟಾಕೀಸ್ ಲಾಂಛನದಲ್ಲಿ ಶಾಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದು, ಸಂತೋಷ್ ಕೊಡಂಕೇರಿ, ಮಿಮಿಕ್ರಿ ದಯಾನಂದ್ ಸಹ ನಿರ್ಮಾಪಕರು. ಮಿಮಿಕ್ರಿ ದಯಾನಂದ್ ಕಥೆ ಬರೆದು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ನೆಳ್ಳುಳ್ಳಿ ರಾಜಶೇಖರ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

  June 28ಕ್ಕೆ ಪ್ರತಿಭಟನೆಗೆ ಸಜ್ಜಾಗುತ್ತಿರುವ ಕಲಾವಿದರ ಸಂಘ!! | Filmibeat Kannada

  ಗುರು ಕಿರಣ್ ಸಂಗೀತ ಸಂಯೋಜನೆ, ಜೀವನ್ ಗೌಡ ಛಾಯಾಗ್ರಹಣ, ರಘು ಸಂಕಲನ ಚಿತ್ರಕ್ಕಿದೆ. ಮಿಮಿಕ್ರಿ ದಯಾನಂದ್ ಜೊತೆ ನಟಿ ಭಾಮ ಕಾಣಿಸಿಕೊಂಡಿದ್ದಾರೆ.

  English summary
  Kannada senior Comdey actor Mimicry Dayanand making his directorial Debut with anireekshitha movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X