»   » 'ಡಿ.ಕೆ' ಫಸ್ಟ್ ಡೇ, ಫಸ್ಟ್ ಶೋ ನೋಡ್ತಾರಂತೆ ಡಿಕೆಶಿ!

'ಡಿ.ಕೆ' ಫಸ್ಟ್ ಡೇ, ಫಸ್ಟ್ ಶೋ ನೋಡ್ತಾರಂತೆ ಡಿಕೆಶಿ!

Posted By:
Subscribe to Filmibeat Kannada

'ಡಿ.ಕೆ' ಸಿನಿಮಾ ಅನೌನ್ಸ್ ಆದಾಗಿನಿಂದಲೂ ಡಿಕೆಶಿ ಸಾಹೇಬ್ರಿಗೆ ತಲೆಬಿಸಿ ಇದ್ದೇ ಇದೆ. ಎಲ್ಲೇ ಹೋದರೂ, ಇದು ಪಕ್ಕಾ ಪೊಲಿಟಿಕಲ್ ಲವ್ ಸ್ಟೋರಿ ಅಂತ ಪ್ರೇಮ್ ಹೇಳಿಕೊಂಡು ಬರುತ್ತಿರುವುದರಿಂದ, ಡಿಕೆಶಿಗೆ ಸಮಾಧಾನ ಇಲ್ಲವೇ ಇಲ್ಲ.

ಕೆಲ ದಿನಗಳ ಹಿಂದೆಯಷ್ಟೇ ಪ್ರೇಮ್ ಮತ್ತು ನಿರ್ದೇಶಕ ವಿಜಯ್ ಹಂಪಾಳಿಯವರನ್ನ ಮನೆಗೆ ಕರೆಸಿಕೊಂಡು, 'ಡಿ.ಕೆ' ಚಿತ್ರಕಥೆಯನ್ನ ಕೇಳಿದ್ದ ಸಚಿವ ಡಿ.ಕೆ.ಶಿವಕುಮಾರ್ ಇದೀಗ ಚಿತ್ರದ ಫಸ್ಟ್ ಡೇ, ಫಸ್ಟ್ ಶೋ ನೋಡೋಕೆ ನಿರ್ಧರಿಸಿದ್ದಾರೆ.


d.k.shivakumar

'ಡಿ.ಕೆ ಸಾಹೇಬ..' ಹಾಡನ್ನ ಖುದ್ದು ರಿಲೀಸ್ ಮಾಡಿದ್ದ ಡಿಕೆಶಿಗೆ, ಈ ಸಿನಿಮಾ ನೋಡಲೇಬೇಕು ಅಂತನಿಸಿದೆಯಂತೆ. ಅದ್ರಲ್ಲೂ ಟ್ರೇಲರ್ ನ ಕೆಲ ಶಾಟ್ ಗಳಲ್ಲಿ ಪ್ರೇಮ್, ಡಿಕೆಶಿ ಅವರನ್ನ ಅನುಕರಿಸಿದ್ದನ್ನ ನೋಡಿ, ಡಿಕೆಶಿ ಫುಲ್ ಇಂಪ್ರೆಸ್ ಆಗಿದ್ದಾರಂತೆ. [ಡಿಕೆಶಿಯನ್ನ 'ಡಿ.ಕೆ' ಸಾಹೇಬ ಪ್ರೇಮ್ ಭೇಟಿ ಮಾಡಿದ್ದೇಕೆ?]


''ನಾನೂ ಒಂದ್ಕಾಲದಲ್ಲಿ ಸಿಲ್ಕ್ ಶರ್ಟ್ ಗಳನ್ನ ತೊಟ್ಟು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುತ್ತಿದೆ'' ಅಂತ ಹೇಳುವ ಡಿಕೆಶಿ, ಸಿನಿಮಾದಲ್ಲಿ ಏನಾದರೂ ಡ್ಯಾಮೇಜಿಂಗ್ ಅಂಶ ಇದ್ರೆ, ರಾಜಕೀಯ ಭವಿಷ್ಯಕ್ಕೆ ಮಾರಕವಾಗುತ್ತೆ ಅಂತ ಫೆಬ್ರವರಿ 13ನೇ ತಾರೀಖು, ಮೊದಲನೇ ಶೋ ನೋಡೋಕೆ ಟಿಕೆಟ್ ಬುಕ್ ಮಾಡಿಸಿದ್ದಾರಂತೆ. ['ಡಿಕೆ' ಹೆಗಲ ಮೇಲೆ ಕೈಹಾಕಿದರು ಡಿಕೆ ಶಿವಕುಮಾರ್]


ಹೇಳಿ ಕೇಳಿ ಪ್ರೇಮ್ ಗಿಮಿಕ್ ಮಾಡುವುದರಲ್ಲಿ ಎತ್ತಿದ ಕೈ. 'ಡಿ.ಕೆ' ಹೆಸರಿರುವ ಈ ಸಿನಿಮಾದಲ್ಲಿ 'ರಾ' ಅಂಶ ಏನಿದೆಯೋ...ಏನಿಲ್ಲವೋ...ನೋಡುವವರೆಗೂ ಯಾರಿಗೂ ಗೊತ್ತಾಗಲ್ಲ. (ಏಜೆನ್ಸೀಸ್)

English summary
Minister D.K.Shivakumar is eagerly waiting to watch Kannada movie DK on First Day, First Show. Earlier, D.K.Shivakumar had launched the trailer of the movie starring Prem, Directed by Vijay Hampali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada