For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕುಟುಂಬಕ್ಕೆ ರಾಷ್ಟ್ರಧ್ವಜ ನೀಡಿದ ಡಾ.ಸಿ ಎನ್ ಅಶ್ವತ್ಥ ನಾರಾಯಣ!

  |

  ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ಕರೆ ನೀಡಿದೆ. ಈ ಅಭಿಯಾನದ ಅಂಗವಾಗಿ ದೇಶದ ಪ್ರತಿಯೊಂದು ಮನೆಯಲ್ಲಿಯೂ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕರೆ ನೀಡಲಾಗಿದೆ.

  ಈ ಅಭಿಯಾನದ ಅಡಿಯಲ್ಲಿ ಭಾರತದ ಪ್ರತಿಯೊಬ್ಬ ನಾಗರೀಕನು ತನ್ನ ಮನೆ ಮೇಲೆ ಆಗಸ್ಟ್ 13ರಿಂದ 15ರವರೆಗೆ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಕರೆ ನೀಡಲಾಗಿದೆ. ಈ ಸಂಬಂಧ ಸುಮಾರು 20 ಕೋಟಿಗೂ ಅಧಿಕ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಉದ್ದೇಶವನ್ನು ಕೇಂದ್ರ ಹೊಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಡಾ. ರಾಜ್‌ಕುಮಾರ್ ಕುಟುಂಬಕ್ಕೆ ರಾಷ್ಟ್ರ ಧ್ವಜವನ್ನು ಹಸ್ತಾಂತರ ಮಾಡಲಾಗಿದೆ.

  'ಲಕ್ಕಿಮ್ಯಾನ್' ಮುಂದೆ ದೇವರ ರೂಪ ತಾಳಿ ಬಂದ ಪುನೀತ್‌ ರಾಜ್‌ಕುಮಾರ್! 'ಲಕ್ಕಿಮ್ಯಾನ್' ಮುಂದೆ ದೇವರ ರೂಪ ತಾಳಿ ಬಂದ ಪುನೀತ್‌ ರಾಜ್‌ಕುಮಾರ್!

  ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೆ ರಾಷ್ಟ್ರಧ್ವಜ

  ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಡಾ. ರಾಜ್‌ಕುಮಾರ್ ಕುಟುಂಬಕ್ಕೆ ರಾಷ್ಟ್ರ ಧ್ವಜವನ್ನು ಹಸ್ತಾಂತರ ಮಾಡಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ದಿ.ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರ ಮಾಡಲಾಗಿದೆ.

  ಡಾ.ರಾಜ್‌ ಕುಟುಂಬ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ. ಹೀಗಾಗಿ ವರನಟ, ಡಾ.ರಾಜಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದ್ದಾರೆ.

  ರಾಘವೇಂದ್ರ ರಾಜ್‌ಕುಮಾರ್ ಕುಟುಂಬಕ್ಕೆ ರಾಷ್ಟ್ರಧ್ವಜ

  ಪುನೀತ್ ರಾಜ್‌ಕುಮಾರ್ ಮನೆಗೆ ತೆರಳಿ ರಾಷ್ಟ್ರಧ್ವಜವನ್ನು ಹಸ್ತಾಂತರ ಮಾಡಿದ ಬಳಿಕ ಡಾ.ಸಿ ಎನ್ ಅಶ್ವತ್ಥ ನಾರಾಯಣ ನಟ ರಾಘವೇಂದ್ರ ರಾಜಕುಮಾರ್ ಮನೆಗೆ ತೆರಳಿದ್ದರು. ಅವರಿಗೂ ಸಚಿವರು ತಿರಂಗವನ್ನು ನೀಡಿದ್ದಾರೆ. ಇದೇ ವೇಳೆ 'ಹರ್ ಘರ್ ತಿರಂಗಾ' ಕಾರ್ಯಕ್ರಮದ ಮಹತ್ವವನ್ನು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಪುತ್ರ ನಟ ವಿನಯ್ ರಾಜಕುಮಾರ್ ಜೊತೆ ಕೆಲಹೊತ್ತು ಮಾತನಾಡಿದ್ದಾರೆ ಹಿಂತಿರುಗಿದ್ದಾರೆ.

  Minister Dr. C N Ashwath Narayana Gave Indian Flag To Ashwini Puneeth Rajkumar

  ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜಾರೋಹಣವಾಗಬೇಕು. ದೇಶದ ಪ್ರತಿಯೊಬ್ಬ ಪ್ರಜೆಯ ಮನೆ ಮನದಲ್ಲಿ ದೇಶ ಪ್ರೇಮದ ಭಾವನೆಯನ್ನು ಬೆಳೆಯಬೇಕು. ದೇಶಪ್ರೇಮವನ್ನು ದೊಡ್ಡ ಮಟ್ಟದಲ್ಲಿ ಕೊಂಡೊಯ್ಯುವ ಕಾರ್ಯಕ್ರಮವಾಗಬೇಕು ಎಂಬುದು ಇದರ ಉದ್ದೇಶ.

  Recommended Video

  Raj B Shetty and Ramya | ರಾಜ್ ಬಿ ಶೆಟ್ಟಿ ಕೊಟ್ರು ಸ್ಪಷ್ಟನೆ | Raj B Shetty new movie *Sandalwood
  English summary
  Minister Dr. C N Ashwath Narayana Gave Indian Flag To Ashwini Puneeth Rajkumar, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X