ದರ್ಶನ್‌ಗೆ ಜೈಲ್‌ನಲ್ಲಿ ರಾಜಾತಿಥ್ಯ ಕೊಡಲು ನಾಗನಿಗೆ ಸೂಚನೆ ಕೊಟ್ಟಿದ್ಯಾರು? ಏನಿದು ಫೋಟೋ ಲೀಕ್ ಕಹಾನಿ?
ದರ್ಶನ್ ಜೈಲು ಸೇರಿದ ದಿನದಿಂದ ಅವರ ಅಭಿಮಾನಿಗಳು ಆತಂಕದಲ್ಲಿ ಇದ್ದರು. ದರ್ಶನ್‌ಗೆ ಜೈಲಿನಲ್ಲಿ ಊಟ ಸರಿ ಹೋಗುತ್ತಿಲ್ಲ. ತೂಕ ಕಡಿಮೆ ಆಗಿದೆ. ಜೈಲಿನಲ್ಲಿ ಅವರಿಗೆ ತೊಂದರೆ ಆಗುತ್ತಿದೆ ಅನ್ನೋ ಸುದ್ದಿ ಹರಿದಾಡಿದ್ದವು. ಈ ಸುದ್ದಿಗಳು ಹೊರ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಬೇಸರ ಆಗಿತ್ತು. ಆದರೆ, ದರ್ಶನ್‌ಗೆ ಒಳಗೆ ಆರಾಮಾಗಿದ್ದರು ಅನ್ನೋದಕ್ಕೆ ಇತ್ತೀಚೆಗೆ ಲೀಕ್ ಆಗಿದ್ದ ಫೋಟೋ ಸಾಕ್ಷಿಯಾಗಿತ್ತು.
ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಕುಳ್ಳ ಸೀನ ದರ್ಶನ್ ಹಾಗೂ ದರ್ಶನ್ ಮ್ಯಾನೇಜರ್ ನಾಗರಾಜ್ ಇವರ ಫೋಟೋ ಲೀಕ್ ಆಗಿತ್ತು. ದರ್ಶನ್ ಕೈಯಲ್ಲಿ ಸಿಗರೇಟ್, ಕಾಫಿ ಮಗ್ ಇರುವ ಫೋಟೋ ಹೊರಬೀಳುತ್ತಿದ್ದಂತೆ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಇದು ಸರ್ಕಾರಕ್ಕೆ ಮುಜುಗರ ಆಗಿತ್ತು. ಈ ಬೆನ್ನಲ್ಲೇ ದರ್ಶನ್‌ರನ್ನು ಬಳ್ಳಾರಿ ಜೈಲ್‌ಗೆ ಸ್ಥಳಾಂತರ ಮಾಡುವುದಕ್ಕೆ ಮುಂದಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಾತಿಥ್ಯದ ಫೋಟೋ ಲೀಕ್ ಜೈಲಿನ ಒಳಗಿದ್ದ ಆಗಿದ್ದು ಹೇಗೆ? ದರ್ಶನ್ ವಿರುದ್ಧ ಹಗೆ ಸಾಧಿಸುವುದಕ್ಕೆ ನಾಗನ ಜೊತೆಗಿದ್ದ ಫೋಟೋವನ್ನು ಲೀಕ್ ಮಾಡಲಾಯಿತೇ? ದರ್ಶನ್‌ಗೆ ರಾಜಾತಿಥ್ಯ ನೀಡುವುದಕ್ಕೆ ಸೂಚನೆ ನೀಡಿದ್ದು ಯಾರು? ಈ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.
ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರುತ್ತಿದ್ದಂತೆ ಅದಾಗಲೇ ಜೈಲು ಸೇರಿದ್ದ ರೌಡಿಗಳು ಸೇವೆಗೆ ಮುಂದಾಗಿದ್ದರು. ದರ್ಶನ್‌ಗೆ ಪೈಪೋಟಿಗೆ ಬಿದ್ದು ರಾಜಾತಿಥ್ಯ ನೀಡಲು ನಿರ್ಧರಿಸಿದ್ದರು. ಅದರಲ್ಲಿ ಪರಪ್ಪ ಅಗ್ರಹಾರ ಜೈಲಿನಲ್ಲಿರುವ ಬೇಕರಿ ರಘುನೇ ಮೊದಲು ದರ್ಶನ್‌ಗೆ ಸಿಗರೇಟ್ ಸೇರಿದಂತೆ ಕೆಲವು ವಸ್ತುಗಳನ್ನು ದರ್ಶನ್ ನೀಡುತ್ತಿದ್ದ. ಮೊದ ಮೊದಲು ಬೇಕರಿ ರಘು ಜೊತೆ ದರ್ಶನ್ ಕೂಡ ಆತ್ಮೀಯನಾಗಿದ್ದರು. ಬಳಿಕ ದರ್ಶನ್ ಹಾಗೂ ಬೇಕರಿ ರಘು ಮಧ್ಯೆ ವಿಲ್ಸನ್ ಗಾರ್ಡನ್ ನಾಗನ ಎಂಟ್ರಿ ಆಗಿತ್ತು.
ದರ್ಶನ್‌ಗೆ ರಾಯಲ್ ಟ್ರೀಟ್ಮೆಂಟ್ ನೀಡುವುದಕ್ಕೆ ಪರಪ್ಪನ ಅಗ್ರಹಾರದಲ್ಲಿ ಬೇಕರಿ ರಘು ಹಾಗೂ ವಿಲ್ಸನ್ ಗಾರ್ಡನ್ ನಾಗನ ಮಧ್ಯೆ ಪೈಪೋಟಿ ಶುರುವಾಗಿತ್ತು ಎನ್ನಲಾಗಿದೆ. ಮೊದಲು ಬೇಕರಿ ರಘು ಜೊತೆಯಿದ್ದ ದರ್ಶನ್ ತದನಂತರ ವಿಲ್ಸನ್ ಗಾರ್ಡನ್ ನಾಗನಿಗೆ ಆತ್ಮೀಯನಾಗಿದ್ದರು. ಇದು ಬೇಕರಿ ರಘು ಮುನಿಸಿಗೆ ಕಾರಣವಾಗಿತ್ತು. ಇತ್ತ ದರ್ಶನ್ ಕೂಡ ನಾಗನನ್ನೇ ಹುಡುಕಿಕೊಂಡು ಹೋಗುತ್ತಿದ್ದರು ಅಂತಾನೂ ವರದಿಯಾಗಿದೆ.

ಅಷ್ಟಕ್ಕೂ ವಿಲ್ಸನ್ ಗಾರ್ಡನ್ ನಾಗ ಇದ್ದಲ್ಲಿಗೆ ದರ್ಶನ್ ಓಡೋಡಿ ಹೋಗುತ್ತಿದ್ದಿದ್ದಕ್ಕೆ ಕಾರಣವಿತ್ತು. ರೌಡಿ ನಾಗನಿಗೆ ದರ್ಶನ್‌ಗೆ ಆತ್ಮೀಯರಾಗಿರುವ ಸಚಿವರೊಬ್ಬರು ಸೂಚನೆಯೊಂದನ್ನು ಕೊಟ್ಟಿದ್ದರು ಎನ್ನಲಾಗಿದೆ. ದರ್ಶನ್‌ಗೆ ಜೈಲಿನಲ್ಲಿ ಕೇಳಿದ್ದನ್ನು ಅರೇಂಜ್ ಮಾಡುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಅವರ ಸೂಚನೆ ಮೇರೆಗೆ ವಿಲ್ಸನ್ ಗಾರ್ಡನ್ ನಾಗ ಎಲ್ಲಾ ಅರೇಂಜ್ಮೆಂಟ್ ಮಾಡುವುದಕ್ಕೆ ಮುಂದಾಗಿದ್ದ.
ಇತ್ತ ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗ ಆತ್ಮೀಯರಾಗಿದ್ದು ಬೇಕರಿ ನಾಗನಿಗೆ ಇಷ್ಟ ಆಗಿರಲಿಲ್ಲ. ದರ್ಶನ್‌ಗೆ ತನಗೆ ಅವಮಾನ ಮಾಡಿದ್ದಾರೆ ಅಂತಲೇ ಭಾವಿಸಿದ್ದ. ಅದಕ್ಕಾಗಿ ತನ್ನ ಆತ್ಮೀಯರಿಂದಲೇ ದರ್ಶನ್, ವಿಲ್ಸನ್ ಗಾರ್ಡನ್ ನಾಗ ಹಾಗೂ ಕುಳ್ಳ ಸೀನನ ಜೊತೆಗೆ ಇರುವಾಗ ಫೋಟೋ ತೆಗೆದು ವೈರಲ್ ಆಗುವಂತೆ ನೋಡಿಕೊಂಡಿದ್ದ ಅಂತ ವರದಿ ಮಾಡಲಾಗಿದೆ. ರೌಡಿಗಳ ಸಹಾಯ ಪಡೆಯುವುದಕ್ಕೆ ಹೋಗಿದ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ದರ್ಶನ್ ನ್ಯಾಯಾಂಗ ಅವಧಿ ಮುಗಿಯುತ್ತಿದ್ದು, ನ್ಯಾಯಾಧೀಶರು ಮತ್ತಷ್ಟು ದಿನ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಸೂಚನೆ ನೀಡಿದ ಬಳ್ಳಾರಿ ಜೈಲಿಗೆ ಕಳುಹಿಸುವ ನಿರೀಕ್ಷೆಯಿದೆ.


Click it and Unblock the Notifications











